ಕೋಲ್ಕೊತಾ: ಮಾತಿನ ಮೂಲಕ ಜನರನ್ನು ಮೋಡಿ ಮಾಡುವುದು, ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯರವರೆಗೆ ಉತ್ತಮ ಸಂವಹನ ಸಾಧಿಸುವುದು, ವಿಭಿನ್ನ ಶೈಲಿ, ಕ್ಷಿಪ್ರ ಸ್ಪಂದನೆ ಮೂಲಕವೇ ಜನರ ಬೆಂಬಲ ಗಳಿಸುವ ಕೌಶಲವು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಕರಗತವಾಗಿದೆ. ಹಾಗಾಗಿಯೇ, ಅವರು ಸಾರ್ವಜನಿಕ ಜೀವನದಲ್ಲಿ ಹೆಚ್ಚು ಪ್ರಶಂಸೆಗೆ ಒಳಗಾಗುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಪಶ್ಚಿಮ ಬಂಗಾಳದಲ್ಲಿ (West Bengal) ನರೇಂದ್ರ ಮೋದಿ ಅವರು ಪುಟ್ಟ ಬಾಲಕಿ ಬಿಡಿಸಿದ ಪೇಂಟಿಂಗ್‌ಅನ್ನು (Girl’s Painting) ಕೇಳಿ ಪಡೆದು, ಬಳಿಕ ಆಕೆಗೆ ತೋರಿಸುವ ಮೂಲಕ ಜನರ ಮನ ಗೆದ್ದಿದ್ದಾರೆ. ಈ ವಿಡಿಯೊ ಕೂಡ ಭಾರಿ ವೈರಲ್ ಆಗಿದೆ.
ಪಶ್ಚಿಮ ಬಂಗಾಳದ ಆರಾಮ್‌ಬಾಗ್‌ನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಭಾಗವಹಿಸಿದರು. ಸಮಾವೇಶದ ವೇಳೆ ಅಪಾರ ಜನಸ್ತೋಮದ ಮಧ್ಯೆಯೇ ಪುಟ್ಟ ಬಾಲಕಿಯೊಬ್ಬಳು ಭಗವಾನ್ ಜಗನ್ನಾಥನ ಪೇಂಟಿಂಗ್ ಹಿಡಿದು ನಿಂತಿದ್ದಳು. ಸುಡುವ ಬಿಸಿಲಿನಲ್ಲೇ ಪೇಂಟಿಂಗ್ ಹಿಡಿದು ನಿಂತಿದ್ದ ಬಾಲಕಿಯು, ಅದನ್ನು ನರೇಂದ್ರ ಮೋದಿ ಅವರಿಗೆ ಕೊಡಲು ಪ್ರಯತ್ನಿಸುತ್ತಿದ್ದಳು. ವೇದಿಕೆ ಮೇಲೆ ಕುಳಿತು ಇದನ್ನೆಲ್ಲ ಗಮನಿಸಿದ ಮೋದಿ ಅವರ ನಡೆಯು ಈಗ ಮೆಚ್ಚುಗೆಗೆ ಪಾತ್ರವಾಗಿದೆ.
Sweet Gesture from Our Lovable PM Shri. @narendramodi, Received and Acknowledged the Lord Jagannath painting from a small girl at West Bengal. pic.twitter.com/WD7mWv1abN
— Dr.SG Suryah (@SuryahSG) March 2, 2024
ಬಾಲಕಿ ಹಾಗೂ ಆಕೆಯ ಪೇಂಟಿಂಗ್ ಗಮನಿಸಿದ ನರೇಂದ್ರ ಮೋದಿ ಅವರು ಸೆಕ್ಯುರಿಟಿ ಅಧಿಕಾರಿಗಳಿಗೆ ಆ ಬಾಲಕಿ ಬಳಿ ತೆರಳಿ, ಪೇಂಟಿಂಗ್ ತೆಗೆದುಕೊಂಡು ಬನ್ನಿ ಎಂದು ಸೂಚಿಸಿದರು. ಕೂಡಲೇ ಭದ್ರತಾ ಅಧಿಕಾರಿಗಳು ಬಾಲಕಿಯಿಂದ ಪೇಂಟಿಂಗ್ ಪಡೆದರು. ಆ ಪೇಂಟಿಂಗ್ ತಂದ ಕೂಡಲೇ ನರೇಂದ್ರ ಮೋದಿ ಅವರು ವೇದಿಕೆ ಮೇಲೆಯೇ ಎದ್ದು ನಿಂತು, ಆ ಬಾಲಕಿಗೆ ಪೇಂಟಿಂಗ್ ತೋರಿಸಿ, ನೀನು ಕೊಟ್ಟಿದ್ದನ್ನು ನಾನು ಸ್ವೀಕರಿಸಿದ್ದೇನೆ ಎಂಬುದನ್ನು ಸನ್ನೆ ಮೂಲಕ ಹೇಳಿದರು. ಆಗ ಅಲ್ಲಿ ನೆರೆದಿದ್ದ ಎಲ್ಲರೂ ಚಪ್ಪಾಳೆ ಮೂಲಕ ಮೋದಿ ಅವರ ನಡೆಯನ್ನು ಶ್ಲಾಘಿಸಿದರು.
ಇದನ್ನೂ ಓದಿ: Narendra Modi: ಬಿಜೆಪಿ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಚುನಾವಣೆಗೆ ಮೋದಿ ಸಂದೇಶ; ಏನದು?
ನರೇಂದ್ರ ಮೋದಿ ಅವರು ಬಾಲಕಿಯಿಂದ ಪೇಂಟಿಂಗ್ ಪಡೆದು, ಅದನ್ನು ಎಲ್ಲರಿಗೂ ತೋರಿಸಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. “ನರೇಂದ್ರ ಮೋದಿ ಅವರೇ, ನೀವು ಇಷ್ಟವಾಗುವುದೇ ಈ ಕಾರಣಕ್ಕೆ” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. “ಹಿರಿಯರಿಂದ ಹಿಡಿದು, ಕಿರಿಯರವರೆಗೆ ಎಲ್ಲರೊಂದಿಗೂ ಹೇಗೆ ವರ್ತಿಸಬೇಕು, ಅವರ ಮನಸ್ಸನ್ನು ಹೇಗೆ ಗೆಲ್ಲಬೇಕು ಎಂಬುದನ್ನು ನರೇಂದ್ರ ಮೋದಿ ಅವರಿಂದ ಕಲಿಯಬೇಕು” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಹೀಗೆ ಸಾವಿರಾರು ಜನ ನರೇಂದ್ರ ಮೋದಿ ಅವರ ನಡೆಯನ್ನು ಹೊಗಳಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ