Site icon Vistara News

Rahul Gandhi: ಮೋದಿ ಒಬಿಸಿ ಅಲ್ಲ ಎಂದ ರಾಹುಲ್‌ಗೆ ಬಿಜೆಪಿ ತಿರುಗೇಟು; ಸರ್ಕಾರದಿಂದಲೇ ಉತ್ತರ

pm narendra modi rahul gandhi

ನವದೆಹಲಿ: ಒಬಿಸಿ (OBC) ಎಂದು ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಿಜವಾಗಲೂ ಹಿಂದುಳಿದ ವರ್ಗಕ್ಕೆ ಸೇರಿದವರಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರ ಹೇಳಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಗುರುವಾರ ಸ್ಪಷ್ಟನೆ ನೀಡಿರುವ ಸರ್ಕಾರವು, ಮೋದಿ ಅವರು ಮೋಧ ಘಾಂಚಿಗರಾಗಿದ್ದು(Modh Ghanchi), ಈ ಜಾತಿಯು ಗುಜರಾತ್‌ನ ಒಬಿಸಿ ಲಿಸ್ಟ್‌ನಲ್ಲಿದೆ ಎಂದು ಹೇಳಿದೆ. ಇದೇ ವೇಳೆ, ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ಜನತಾ ಪಾರ್ಟಿ (BJP Party) ಕೂಡ ತೀವ್ರ ವಾಗ್ದಾಳಿ ನಡೆಸಿದೆ.

ಪ್ರಧಾನಿ ಜಾತಿಯ ಕುರಿತು ರಾಹುಲ್ ಗಾಂಧಿಯವರ ಹೇಳಿಕೆಗೆ ಸಂಬಂಧಿಸಿದ ಸಂಗತಿಗಳು ಎಂಬ ಶೀರ್ಷಿಕೆಯ ಸಂಕ್ಷಿಪ್ತ ಟಿಪ್ಪಣಿಯಲ್ಲಿ, ಸರ್ಕಾರವು ಮೋದ್ ಘಾಂಚಿ ಜಾತಿ (ಮೋದಿ ಸೇರಿರುವ ಉಪ-ಗುಂಪು) ಗುಜರಾತ್ ಸರ್ಕಾರದ ಒಬಿಸಿ ಪಟ್ಟಿಯಲ್ಲಿದ್ದು, ಈ ಜಾತಿಯು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗವಾಗಿದೆ ಎಂದು ಹೇಳಿದೆ.

ಗುಜರಾತ್‌ನಲ್ಲಿ ನಡೆಸಿದ ಸಮೀಕ್ಷೆಯ ನಂತರ, ಮಂಡಲ್ ಆಯೋಗವು ಸೂಚ್ಯಂಕ 91(A) ಅಡಿಯಲ್ಲಿ ಒಬಿಸಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ, ಇದರಲ್ಲಿ ಮೋದ್ ಘಾಂಚಿ ಜಾತಿ ಸೇರಿದೆ. ಭಾರತ ಸರ್ಕಾರದ ಗುಜರಾತ್‌ನ 105 ಒಬಿಸಿ ಜಾತಿಗಳ ಪಟ್ಟಿಯು ಮೋದ್ ಘಾಂಚಿಯನ್ನೂ ಒಳಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

ಮೋದಿ ಒಬಿಸಿ ಅಲ್ಲ ಎಂಬ ಹೇಳಿಕೆಗೆ ಭಾರತೀಯ ಜನತಾ ಪಾರ್ಟಿಯು ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿದ್ದು, ರಾಹುಲ್ ಗಾಂಧಿ ನಿಜವಾಗಿಯೂ ಅಜ್ಞಾನಿ ಅಥವಾ ಪದೇ ಪದೇ ಸುಳ್ಳನ್ನು ಹೇಳುವುದು ಅವರನ್ನು ಸತ್ಯವೆಂದು ಒಪ್ಪಿಕೊಳ್ಳುವಂತೆ ಮಾಡುತ್ತದೆ ಎಂದು ಭಾವಿಸಿದಂತಿದೆ ಎಂದು ಹೇಳಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಟ್ವೀಟ್ ಮಾಡಿ, ನರೇಂದ್ರ ಮೋದಿ ಅವರ ಜಾತಿಯನ್ನು 1999 ಅಕ್ಟೋಬರ್ 27ರಂದು ಒಬಿಸಿ ಪಟ್ಟಿಗೆ ಸೇರಿಸಲಾಗಿದೆ. ಅಂದರೆ, ಮೋದಿ ಅವರು ಮುಖ್ಯಮಂತ್ರಿಯಾಗುವುದಕ್ಕಿಂತಲು ಎರಡು ವರ್ಷ ಮೊದಲು ಈ ಸೇರ್ಪಡೆಯಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Modi Caste Politics : ಮೋದಿ ಜಾತಿ ಬಗ್ಗೆ ರಾಹುಲ್‌ ಹಸಿ ಸುಳ್ಳು; ದಾಖಲೆ ನೀಡಿದ ಪ್ರಲ್ಹಾದ್‌ ಜೋಶಿ

Exit mobile version