Site icon Vistara News

Chhattisgarh Naxal Attack : ನಕ್ಸಲ್‌ ದಾಳಿಯ ಮಾಸ್ಟರ್‌ಮೈಂಡ್‌ ಫೋಟೊ ಬಿಡುಗಡೆ

Police releases photo of IED blast's mastermind

ದಂತೇವಾಡ: (ಛತ್ತೀಸ್‌ಗಢ): ದಂತೇವಾಡದ ಅರನ್‌ಪುರದಲ್ಲಿ ನಡೆದ ನಕ್ಸಲ್‌ ದಾಳಿಯ ಮಾಸ್ಟರ್‌ ಮೈಂಡ್‌ ಫೋಟೊವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಆತನ ಸುಳಿವು ನೀಡುವವರಿಗೆ ನಗದು ಬಹುಮಾನವನ್ನು ಘೋಷಿಸಲಾಗಿದೆ. ಏಪ್ರಿಲ್‌ 26ರಂದು ನಡೆದ ಐಇಡಿ (Improvised Explosive Device) ಸ್ಫೋಟದಲ್ಲಿ 10 ಡಿಆರ್‌ಜಿ ಸಿಬ್ಬಂದಿ ಮತ್ತು ವಾಹನ ಚಾಲಕ ಸಾವಿಗೀಡಾಗಿದ್ದರು.

ಈ ನಕ್ಸಲ್‌ ದಾಳಿಯ ಮಾಸ್ಟರ್‌ ಮೈಂಡ್‌ ಆಗಿದ್ದ ಜಗದೀಶ್‌ ಎಂಬಾತನ ಫೊಟೊವನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ರಸ್ತೆಯ ಕೆಳ ಭಾಗದಲ್ಲಿ ಸುರಂಗವನ್ನು ತೋಡಿ ಸ್ಫೋಟಕವನ್ನು ಅಳವಡಿಸಲಾಗಿತ್ತು. ಸ್ಫೋಟಕವನ್ನು ಅಳವಡಿಸುವ ಸಂಚು ಬೇರೆಯವರಿಗೆ ಗೊತ್ತಾಗದಂತೆ ಮಾಡಲು ನಕ್ಸಲರು ಈ ಸಂಚು ರೂಪಿಸಿದ್ದರು. ಭದ್ರತಾ ಸಿಬ್ಬಂದಿಯಿದ್ದ ವಾಹನ ರಸ್ತೆಯ ಮೂಲಕ ಹೋಗುವಾಗ ಸ್ಫೋಟ ಸಂಭವಿಸಿತ್ತು.

ದಂತೇವಾಡ ನಕ್ಸಲ್‌ ದಾಳಿಯ ಮಾಸ್ಟರ್‌ಮೈಂಡ್‌ ಜಗದೀಶ್

ಪೊಲೀಸರ ಪ್ರಕಾರ ಜಗದೀಶ್‌ ಕುಟುಂಬ ನಕ್ಸಲ್‌ ಚಟುವಟಿಕೆಗಳಲ್ಲಿ ಸಕ್ರಿಯವಾಗಿತ್ತು. ಪತ್ನಿ 8ನೇ ತರಗತಿ ತನಕ ಓದಿದ್ದು, ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯ ನಿವಾಸಿ. ಜಗದೀಶ್‌ನ ಮಾವ ವಿನೋದ್‌ ಹೆಮ್ಲಾ ನಕ್ಸಲ್‌ ಸಂಘಟನೆಯ ಸಮಿತಿಯಲ್ಲಿದ್ದ. ಸ್ಫೋಟದಲ್ಲಿ ಭಾಗವಹಿಸಿರುವ ನಕ್ಸಲರ ಸುಳಿವು ನೀಡುವವರಿಗೆ ನಗದು ಬಹುಮಾನ ಸಿಗಲಿದೆ.

ಅರನ್​ಪುರ ಏರಿಯಾದಲ್ಲಿ ಮಾವೋವಾದಿಗಳು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಛತ್ತೀಸ್​ಗಢ್​ ಜಿಲ್ಲಾ ಮೀಸಲು ಪಡೆ ಸೈನಿಕರು ಅಲ್ಲಿಗೆ ತೆರಳುತ್ತಿದ್ದರು. ಅರಾನ್​ಪುರದಲ್ಲಿ ನಕ್ಸಲ್​ ವಿರುದ್ಧ ಕಾರ್ಯಾಚರಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡು ಅಲ್ಲಿಗೆ ಹೋಗಿದ್ದರು. ಅಲ್ಲಿ ಕಾರ್ಯಾಚರಣೆ ಮುಗಿಸಿ ವಾಪಸ್​ ಬರುವಾಗ ಈ ದುರ್ಘಟನೆ ನಡೆದೆ. ಅತ್ತ ಅರಾನ್​ಪುರ ಕಾಡು ಪ್ರದೇಶದಲ್ಲಿ ಸೈನಿಕರು ನಕ್ಸಲ್​ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗಲೇ, ಇತ್ತ ಅವರ ವಾಹನ ವಾಪಸ್ ಬರುವ ದಾರಿಯಲ್ಲಿ ಮಾವೋವಾದಿಗಳು ಐಇಡಿ ಅಳವಡಿಸಿ ಇಟ್ಟಿದ್ದರು.

ಡಿಆರ್​ಜಿ ವಾಹನ ಆ ಐಇಡಿ ಇದ್ದ ಸ್ಥಳಕ್ಕೆ ಬರುತ್ತಿದ್ದಂತೆ ಅದು ಸ್ಪೋಟಗೊಂಡಿತ್ತು. ವಾಹನ ಚೂರುಚೂರಾಗಿದ್ದು, ಸೈನಿಕರ ದೇಹ ಛಿದ್ರಗೊಂಡಿತ್ತು. ನಕ್ಸಲರ ವಿರುದ್ಧ ಹೋರಾಡಲು ವಿಶೇಷವಾಗಿ ತರಬೇತಿ ಪಡೆದ ಸ್ಥಳೀಯ ಬುಡಕಟ್ಟು ಸಮುದಾಯದ ಜನರನ್ನು ಭದ್ರತಾ ತಂಡದಲ್ಲಿ ನಿಯೋಜಿಸಲಾಗಿತ್ತು.

Exit mobile version