Site icon Vistara News

Magician OP Sharma | 39 ಸಾವಿರ ಮ್ಯಾಜಿಕ್‌ ಶೋ ಖ್ಯಾತಿಯ ಸೆಲೆಬ್ರಿಟಿ ಜಾದೂಗಾರ ಒ.ಪಿ. ಶರ್ಮಾ ಇನಿಲ್ಲ

Magician

ಲಖನೌ: ದೇಶದ ಖ್ಯಾತ ಜಾದೂಗಾರ, ದೇಶಾದ್ಯಂತ ಸುಮಾರು ೩9 ಸಾವಿರ ಮ್ಯಾಜಿಕ್‌ ಶೋಗಳನ್ನು ನಡೆಸಿ ಮನೆಮಾತಾಗಿದ್ದ ಒ.ಪಿ.ಶರ್ಮಾ (76) (Magician OP Sharma) ನಿಧನರಾಗಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಆಸ್ಪತ್ರೆಯಲ್ಲಿ ಅವರು ಕಿಡ್ನಿ ವೈಫಲ್ಯದಿಂದ ಕೊನೆಯುಸಿರೆಳೆದಿದ್ದಾರೆ. ಇವರು ಪತ್ನಿ, ಮೂವರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.

ಕಾನ್ಪುರದ ಬರ್ರಾದಲ್ಲಿ ಅವರು ವಾಸಿಸುತ್ತಿದ್ದರು. ಜಾದೂಗಾರರಾಗಿ ವೃತ್ತಿ ಆರಂಭಿಸಿದ ಅವರು ದೇಶದ ಪ್ರಮುಖ ನಗರಗಳಲ್ಲಿ ಮ್ಯಾಜಿಕ್‌ ಶೋ ನಡೆಸಿ ಮನೆಮಾತಾಗಿದ್ದರು. ಮಾಧ್ಯಮಗಳ ವರದಿ ಪ್ರಕಾರ ಅವರು ವೃತ್ತಿ ಜೀವನದಲ್ಲಿ ೩9 ಸಾವಿರಕ್ಕೂ ಅಧಿಕ ಮ್ಯಾಜಿಕ್‌ ಶೋಗಳನ್ನು ನಡೆಸಿದ್ದಾರೆ. ಹಾಗಾಗಿ ಅವರು ಸೆಲೆಬ್ರಿಟಿ ಸ್ಟೇಟಸ್‌ ಗಳಿಸಿದ್ದರು. ಒ.ಪಿ.ಶರ್ಮಾ ನಿಧನಕ್ಕೆ ಉಪ ಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ಸೆಲೆಬ್ರಿಟಿ ಜಾದೂಗಾರ

ದೇಶದ ಯಾವುದೇ ಮೂಲೆಯಲ್ಲಿ ಒ.ಪಿ.ಶರ್ಮಾ ಮ್ಯಾಜಿಕ್‌ ಶೋ ಇದ್ದರೆ ಜನ ಮುಗಿಬೀಳುತ್ತಿದ್ದರು. ಹಾಗಾಗಿ, ಅವರಿಗೆ ಸೆಲೆಬ್ರಿಟಿ ಸ್ಟೇಟಸ್‌ ಸಿಕ್ಕಿತ್ತು. ಎಲ್ಲಿಯೇ ಶೋ ನಡೆದರೂ ಅವರ ೧೦೦ ಜನರ ತಂಡ ತೆರಳಬೇಕಿತ್ತು. ಜಾದೂಗಾರರು, ಹಾಡುಗಾರರು, ಮೇಕಪ್‌ ಮಾಡುವವರು, ಲೈಂಟಿಂಗ್‌ ಕಂಟ್ರೋಲ್‌ ಮಾಡುವವರು, ಪೇಂಟರ್‌ಗಳು, ಕಲಾವಿದರು, ಸಹಾಯಕರ ತಂಡವೇ ತೆರಳುತ್ತಿತ್ತು ೧೬ ಟ್ರಕ್‌ಗಳಲ್ಲಿ ಮ್ಯಾಜಿಕ್‌ ಶೋ ಗೂಡ್ಸ್‌ಗಳನ್ನು ತುಂಬಿಕೊಂಡು ಹೋಗುತ್ತಿದ್ದರು.

ಟಿಕೆಟ್‌ಗಳೂ ಅಷ್ಟೇ, ಮೊದಲೇ ಬುಕ್‌ ಆಗುವ ಜತೆಗೆ ಸೋಲ್ಡ್‌ ಔಟ್‌ ಆಗುತ್ತಿದ್ದವು. ಇದೇ ಖ್ಯಾತಿಯಿಂದ ಅವರು ೨೦೦೨ರಲ್ಲಿ ಸಮಾಜವಾದಿ ಪಕ್ಷದಿಂದ ಟಿಕೆಟ್‌ ಪಡೆದು ಗೋವಿಂದ ನಗರ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ೨೦೧೯ರಲ್ಲಿ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಭಾರತ ಮಾತ್ರವಲ್ಲ, ಮಾರಿಷಸ್‌, ಅಮೆರಿಕ, ಜಪಾನ್‌, ದುಬೈ, ಸಿಂಗಾಪುರ ಸೇರಿ ಹಲವು ದೇಶಗಳಲ್ಲಿ ಶೋ ನಡೆಸಿದ್ದರು.

ಇದನ್ನೂ ಓದಿ | Jitendra Shastri | ಮಿರ್ಜಾಪುರ್‌ ವೆಬ್‌ ಸಿರೀಸ್‌ ಖ್ಯಾತಿಯ ನಟ ಜಿತೇಂದ್ರ ಶಾಸ್ತ್ರಿ ನಿಧನ

Exit mobile version