Site icon Vistara News

Post Godhra Case : ಗೋಧ್ರೋತ್ತರ ಗಲಭೆ ಪ್ರಕರಣ: 17 ಜನರ ಕೊಲೆ ಆರೋಪ ಹೊತ್ತ 22 ಆರೋಪಿಗಳು ಖುಲಾಸೆ

ಗಾಂಧಿನಗರ: 2002ರ ಫೆಬ್ರವರಿ 27ರಂದು ಗುಜರಾತ್‌ನ ಗೋಧ್ರಾದಲ್ಲಿ ಸಾಬರಮತಿ ರೈಲಿಗೆ ಬೆಂಕಿ ಹಚ್ಚಿದ್ದ ವಿಧ್ವಂಸಕ ಕೃತ್ಯದಲ್ಲಿ 59 ಮಂದಿ ಮೃತಪಟ್ಟಿದ್ದರು. ಅದರ ಮಾರನೇ ದಿನ ಅಂದರೆ ಫೆ.28ರಂದು ರಾಜ್ಯದ ಹಲವೆಡೆ ಗಲಭೆಗಳು (Post Godhra Case) ನಡೆದಿದ್ದವು. ಅದರಲ್ಲಿ ಒಂದು ದೆಲೋಲ್‌ ಗ್ರಾಮದಲ್ಲಿ ನಡೆದ ಗಲಭೆ. ಇಬ್ಬರು ಮಕ್ಕಳು ಸೇರಿ ಒಟ್ಟು 17 ಅಲ್ಪಸಂಖ್ಯಾತರ ಸಾವಿಗೆ ಕಾರಣವಾಗಿದ್ದ ಆ ಪ್ರಕರಣದ 22 ಆರೋಪಿಗಳನ್ನು ನ್ಯಾಯಾಲಯ ಇದೀಗ ಖುಲಾಸೆಗೊಳಿಸಿದೆ.

ಇದನ್ನೂ ಓದಿ: Gujarat Election Result | 27 ವರ್ಷಗಳ ಬಳಿಕವೂ ಗುಜರಾತ್‌ನಲ್ಲಿ ಸೋಲದ ಬಿಜೆಪಿ, ಈಗ ಮತ್ತಷ್ಟು ಬಲಾಢ್ಯ, ಏನಿದರ ಹಿನ್ನೋಟ?

ಈ ಘಟನೆ ಕುರಿತಾಗಿ 2002ರಲ್ಲಿಯೇ ಪ್ರಕರಣ ದಾಖಲಾಗಿ, ಎಫ್‌ಐಆರ್‌ ಆಗಿತ್ತು. 2 ವರ್ಷಗಳ ನಂತರ ಮತ್ತೋರ್ವ ಅಧಿಕಾರಿಯು ಪ್ರಕರಣವನ್ನು ಮರು ದಾಖಲು ಮಾಡಿಕೊಂಡು, 22 ಆರೋಪಿಗಳನ್ನು ಬಂಧಿಸಿದ್ದರು. ಅದರಲ್ಲಿ ಎಂಟು ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಈ ಎಲ್ಲ ಆರೋಪಿಗಳನ್ನು ಪಂಚಮಹಲ್‌ ಜಿಲ್ಲೆಯ ಹಲೋಲ್‌ ಪಟ್ಟಣದ ನ್ಯಾಯಾಲಯ ಖುಲಾಸೆ ಮಾಡಿದೆ. ಸೂಕ್ತವಾದ ಸಾಕ್ಷ್ಯಾಧಾರಗಳು ಇಲ್ಲದ ಹಿನ್ನೆಲೆ ಆರೋಪಿಗಳನ್ನು ಆರೋಪ ಮುಕ್ತ ಮಾಡಿರುವುದಾಗಿ ಹೆಚ್ಚುವರಿ ಸೆಷನ್‌ ನ್ಯಾಯಾಧೀಶ ಹರ್ಷ್‌ ತ್ರಿವೇದಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಇಬ್ಬರು ಮಕ್ಕಳು ಸೇರಿ ಒಟ್ಟು 17 ಅಲ್ಪಸಂಖ್ಯಾತರನ್ನು ಕೊಲೆ ಮಾಡಿ, ಸಾಕ್ಷಿ ಸಿಗದಿರುವಂತೆ ಮಾಡಲು ಅವರನ್ನು ಸುಟ್ಟು ಹಾಕಿರುವ ಆರೋಪ ಮಾಡಲಾಗಿತ್ತು. ಆದರೆ ಕೊಲೆಯಾದ ಯಾವುದೇ ದೇಹಗಳು ಪೊಲೀಸರಿಗೆ ಸಿಕ್ಕಿರಲಿಲ್ಲ. ಹಾಗೆಯೇ ಮೃತರ ಮೂಳೆಗಳು ನದಿ ದಂಡೆಗಳಲ್ಲಿ ಸಿಕ್ಕಿದ್ದು, ಗುರುತು ಕೂಡ ಪತ್ತೆ ಹಚ್ಚಲಾಗಿರಲಿಲ್ಲ. ಹಾಗಾಗಿ ಸರಿಯಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲವೆಂದು ನ್ಯಾಯಾಲಯ ತಿಳಿಸಿದೆ.

ಇದನ್ನೂ ಓದಿ: Road Accident: ಮಲೆಮಹದೇಶ್ವರ ಬೆಟ್ಟ ಹತ್ತುತ್ತಿದ್ದ ಗುಜರಾತ್‌ ಬಸ್‌ ಪಲ್ಟಿ; 15ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು

Exit mobile version