ನವದೆಹಲಿ: ತಮ್ಮ ಪುತ್ರಿ ಸುಪ್ರಿಯಾ ಸುಳೆ (Supriya Sule) ಮತ್ತು ಹಿರಿಯ ನಾಯಕ ಪ್ರಫುಲ್ ಪಟೇಲ್ (Praful Patel) ಅವರನ್ನು ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (NCP)ಯ ಕಾರ್ಯಾಧ್ಯಕ್ಷರನ್ನಾಗಿ (Working President) ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರು ನೇಮಕ ಮಾಡಿದ್ದಾರೆ. ಪಕ್ಷದ ಸಂಸ್ಥಾಪನೆಯ 25 ವರ್ಷ ಆಚರಣೆ ವೇಳೆ ಈ ಘೋಷಣೆಯನ್ನು ಪವಾರ್ ಅವರ ಮಾಡಿದರು. 1999ರಲ್ಲಿ ಶರದ್ ಪವಾರ್ (Sharad Pawar) ಅವರು ಪಿಎ ಸಂಗ್ಮಾ ಜತೆಗೂಡಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿದರು. ಆದರೆ, ಪಕ್ಷದ ಮತ್ತೊಬ್ಬ ಪ್ರಮುಖ ನಾಯಕನಾಗಿರುವ ಅಜಿತ್ ಪವಾರ್ (Ajit Pawar) ಅವರಿಗೆ ಯಾವುದೇ ಜವಾಬ್ದಾರಿಯನ್ನು ನೀಡಿಲ್ಲ. ವಿಶೇಷ ಎಂದರೆ, ಕಾರ್ಯಾಧ್ಯಕ್ಷರ ಘೋಷಣೆಯನ್ನು ಪವಾರ್ ಅವರು, ಅಜಿತ್ ಅವರ ಸಮ್ಮುಖದಲ್ಲಿ ಮಾಡಿದರು.
ಕಳೆದ ತಿಂಗಳವಷ್ಟೇ ಶರದ್ ಪವಾರ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡವುದಾಗಿ ಘೋಷಿಸಿದ್ದರು. ಆದರೆ, ಪವಾರ್ ಅವರ ರಾಜೀನಾಮೆಯನ್ನು ಪಕ್ಷವು ಅಂಗೀಕರಿಸಿರಲಿಲ್ಲ. ಹಾಗಾಗಿ, ಅವರು ಮತ್ತೆ ಪಕ್ಷದ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಇದಕ್ಕೂ ಮೊದಲು, ಪವಾರ್ ಅವರ ಸಹೋದರ ಪುತ್ರ ಅಜಿತ್ ಪವಾರ್ ಅವರು ರಾಷ್ಟ್ರೀಯವಾದಿ ಪಕ್ಷವನ್ನು ಒಡೆದು ಬಿಜೆಪಿ-ಶಿಂಧೆ ಶಿವಸೇನೆ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆಂಬ ಸುದ್ದಿ ಹರಿದಾಡಿತ್ತು. ಬಳಿಕ ಆ ಸುದ್ದಿಯನ್ನು ಅಜಿತ್ ಪವಾರ್ ತಳ್ಳಿ ಹಾಕಿದ್ದರು.
ಈ ಸುದ್ದಿಯನ್ನೂ ಓದಿ: Gautam Adani: ಶರದ್ ಪವಾರ್ ಮನೆಗೆ ಗೌತಮ್ ಅದಾನಿ; ಎರಡು ಗಂಟೆ ಮಾತುಕತೆ!
ಪಕ್ಷದಳೊಂಗೆ ಸಾಕಷ್ಟು ಪ್ರಭಾವವನ್ನು ಬೆಳೆಸಿಕೊಂಡಿರುವ ಅಜಿತ್ ಪವಾರ್ ಅವರಿಗೆ ಯಾವುದೇ ಜವಾಬ್ದಾರಿಯನ್ನು ವಹಿಸಿದರುವ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿಯೊಳೆಗ ಎಲ್ಲವೂ ಸರಿ ಇಲ್ಲ ಸುದ್ದಿಗಳು ಆಗಾಗ ಹೊರ ಬರುತ್ತಲೇ ಇರುತ್ತವೆ. ಇದೀಗ, ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಅವರಿಗೆ ಜವಾಬ್ದಾರಿ ಮಾಡಿರುವುದು, ಪಕ್ಷದೊಳಗೆ ಕಲಹಕ್ಕೆ ಕಾರಣವಾಗಲಿದೆಯೇ ಕಾದು ನೋಡಬೇಕಾಗಿದೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.