ಅಯೋಧ್ಯೆ: ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರ (Ram Mandir)ದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಗೆ ಮುಹೂರ್ತ ನಿಗದಿಯಾಗಿದೆ. ಫೈಜಾಬಾದ್‌ನ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಸಭೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಈ ಕುರಿತು ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, ೨೦೨೪ರ ಮಕರ ಸಂಕ್ರಾಂತಿಯಂದು ಶ್ರೀರಾಮನು ದೇವಾಲಯದ ಗರ್ಭಗುಡಿ ಪ್ರವೇಶಿಸಲಿದ್ದಾನೆ.
೨೦೨೩ರ ಡಿಸೆಂಬರ್ ವೇಳೆಗೆ ಗರ್ಭಗುಡಿ ಹಾಗೂ ರಾಮಮಂದಿರದ ಮೊದಲ ಮಹಡಿಯ ನಿರ್ಮಾಣ ಮುಗಿಯಲಿದೆ. ಮಕರ ಸಂಕ್ರಾಂತಿಯಂದು ಶ್ರೀರಾಮನ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಾಗೆಯೇ, ದೇವಾಲಯದ ಆವರಣದಲ್ಲಿ ಇನ್ನೂ ಏಳು ಮಂದಿರ ಸ್ಥಾಪನೆ ಕುರಿತು ಸಹ ಟ್ರಸ್ಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಶೇ.೪೦ರಷ್ಟು ಕಾಮಗಾರಿ ಪೂರ್ಣ
ರಾಮಮಂದಿರ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು, ಇದುವರೆಗೆ ಶೇ.೪೦ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ರಾಮಮಂದಿರ ಟ್ರಸ್ಟ್ ತಿಳಿಸಿದೆ. ಪ್ರತಿ ತಿಂಗಳು ನಿರೀಕ್ಷೆಗೂ ಮೀರಿ ದೇಣಿಗೆ ಸಂಗ್ರಹಿಸುತ್ತಿರುವ ಕಾರಣ ೧,೮೦೦ ಕೋಟಿ ರೂ. ವೆಚ್ಚದಲ್ಲಿ ಮಂದಿರ ನಿರ್ಮಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ | Ayodhya Ram Temple | ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ 1,800 ಕೋಟಿ ರೂ. ವೆಚ್ಚ