Site icon Vistara News

EV-Yatra | ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್ ಮಾಹಿತಿ ನೀಡುವ ಇವಿ-ಯಾತ್ರಾ ಆ್ಯಪ್‌ಗೆ ರಾಷ್ಟ್ರಪತಿ ಮುರ್ಮು ಚಾಲನೆ

draupadi murmu

ನವದೆಹಲಿ: ರಾಷ್ಟ್ರೀಯ ಇಂಧನ ರಕ್ಷಣಾ ದಿನದ (ಡಿ.14) ಅಂಗವಾಗಿ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಇವಿ-ಯಾತ್ರಾ ಪೋರ್ಟಲ್(EV-Yatra Portal) ಹಾಗೂ ಮೊಬೈಲ್ ಆ್ಯಪ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದರು. ಈ ಪೋರ್ಟಲ್ ಅನ್ನು ಬ್ಯೂರೋ ಆಫ್ ಎನರ್ಜಿ ಎಫಿಷಿಯೆನ್ಸಿ ಅಭಿವೃದ್ಧಿಪಡಿಸಿದೆ. ಈ ಪೋರ್ಟಲ್ ಮೂಲಕ ಗ್ರಾಹಕರು ಹತ್ತಿರದ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜರ್ ಸ್ಥಳಗಳನ್ನು ಪತ್ತೆ ಹಚ್ಚಬಹುದು.

ಈ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ರಾಷ್ಟ್ರೀಯ ಇಂಧನ ಸಂರಕ್ಷಣಾ ಪ್ರಶಸ್ತಿಗಳು, ರಾಷ್ಟ್ರೀಯ ಇಂಧನ ದಕ್ಷತೆಯ ನಾವೀನ್ಯತೆ ಪ್ರಶಸ್ತಿಗಳು ಮತ್ತು ರಾಷ್ಟ್ರೀಯ ಚಿತ್ರಕಲೆ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಿದರು. ನಂತರ ಸಭೆಯನ್ನುದ್ದೇಶಿಸಿ ಮಾತನಾಡಿ, ಮಾಲಿನ್ಯ ಮುಕ್ತ ಪರಿಸರದ ಮಹತ್ವದ ಬಗ್ಗೆ ತಿಳಿಸಿದರು.

ನಮ್ಮ ಮುಂದಿನ ಪೀಳಿಗೆಗಳಿಗೆ ಸ್ವಚ್ಛ ಪರಿಸರದಲ್ಲಿ ಉಸಿರಾಡುವುದು, ಉತ್ತಮ ಪ್ರಗತಿ ಮತ್ತು ಆರೋಗ್ಯಕರ ಜೀವನವನ್ನು ಖಚಿತಪಡಿಸುವುದು ನಮ್ಮೆಲ್ಲರ ಆದ್ಯತೆಯಾಗಿದೆ. ಶುದ್ಧ ಗಾಳಿಯನ್ನು ಉಸಿರಾಡುವುದು ಮಾನವ ಮೂಲಭೂತ ಹಕ್ಕು. ಪರಿಸರವನ್ನು ರಕ್ಷಿಸುವ ಮೂಲಕ ನಾವು ಜೀವುಗಳನ್ನು ರಕ್ಷಿಸಬಹುದು ಎಂದು ಅವರು ಇದೇ ವೇಳೆ ತಿಳಿಸಿದರು.

ಇದನ್ನೂ ಓದಿ | ಕಲಿತ ಶಾಲೆ, ಉಳಿದುಕೊಂಡಿದ್ದ ಹಾಸ್ಟೆಲ್‌ಗೆ ಭೇಟಿ ನೀಡಿ, ಭಾವುಕರಾಗಿ ಕಣ್ಣೀರು ಹಾಕಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Exit mobile version