Site icon Vistara News

Mann Ki Baat Book: ಮೋದಿ ಮನ್‌ ಕೀ ಬಾತ್‌ ಮೆಲುಕು; ಪುಸ್ತಕ ಸ್ವೀಕರಿಸಿದ ದ್ರೌಪದಿ ಮುರ್ಮು

Mann Ki Baat Book

President Droupadi Murmu receives book on PM Narendra Modi's 'Mann Ki Baat' compilation

ನವದೆಹಲಿ: ‌ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತಿ ತಿಂಗಳ ಕೊನೆಯ ಭಾನುವಾರ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾರೆ. ರೇಡಿಯೊ ಮೂಲಕವೂ ಮೋದಿ ಅವರು ಕೋಟ್ಯಂತರ ಜನರನ್ನು ತಲುಪಿದ್ದಾರೆ. ಹಾಗಾಗಿ, ಇವರ ಕಾರ್ಯಕ್ರಮವು ಜನಪ್ರಿಯತೆ ಗಳಿಸಿದೆ. ಹೀಗೆ, ನರೇಂದ್ರ ಮೋದಿ ಅವರು ಪ್ರತಿ ತಿಂಗಳು ಮಾತನಾಡಿದ ಮನ್‌ ಕೀ ಬಾತ್‌ ಸರಣಿಯ ಕಾರ್ಯಕ್ರಮದ 100 ಸಂಚಿಕೆಗಳನ್ನು ಒಳಗೊಂಡ ಪುಸ್ತಕವನ್ನು (Mann Ki Baat Book) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ನೀಡಲಾಗಿದೆ.

ನರೇಂದ್ರ ಮೋದಿ ಅವರ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮದ 100 ಸರಣಿಗಳನ್ನು ಒಳಗೊಂಡ ‘ಇಗ್ನೈಟಿಂಗ್‌ ಕಲೆಕ್ಟಿವ್‌ ಗುಡ್‌ನೆಸ್‌: ಮನ್‌ ಕೀ ಬಾತ್‌ @100’ ಪುಸ್ತಕವನ್ನು ಬ್ಲ್ಯೂಕ್ರಾಫ್ಟ್‌ ಡಿಜಿಟಲ್‌ ಫೌಂಡೇಷನ್‌ ಎಂಬ ಸಂಸ್ಥೆಯು ಸಂಕಲನ ಮಾಡಿದೆ. ವೆಸ್ಟ್‌ಲ್ಯಾಂಡ್‌ ಬುಕ್ಸ್‌ ಪ್ರಕಾಶನ ಸಂಸ್ಥೆಯು ಪುಸ್ತಕವನ್ನು ಮುದ್ರಿಸಿದೆ. ಈ ಪುಸ್ತಕವನ್ನು ಬ್ಲ್ಯೂಕ್ರಾಫ್ಟ್‌ ಸಿಇಒ ಅಖಿಲೇಶ್‌ ಮಿಶ್ರಾ ಅವರು ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು ಅವರಿಗೆ ಪುಸ್ತಕವನ್ನು ನೀಡಿದ್ದಾರೆ.

“ಬ್ಲ್ಯೂಕ್ರಾಫ್ಟ್‌ ಡಿಜಿಟಲ್‌ ಫೌಂಡೇಷನ್‌ ಹಾಗೂ ವೆಸ್ಟ್‌ಲ್ಯಾಂಡ್‌ ಬುಕ್ಸ್‌ ಪ್ರಕಟಿಸಿರುವ ‘ಇಗ್ನೈಟಿಂಗ್‌ ಕಲೆಕ್ಟಿವ್‌ ಗುಡ್‌ನೆಸ್‌: ಮನ್‌ ಕೀ ಬಾತ್‌ @100’ ಪುಸ್ತಕವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ಅಖಿಲೇಶ್‌ ಮಿಶ್ರಾ ಸೇರಿ ಅವರ ತಂಡದ ಸದಸ್ಯರು ಪುಸ್ತಕವನ್ನು ನೀಡಿದರು” ಎಂದು ಪ್ರೆಸಿಡೆಂಟ್‌ ಆಫ್‌ ಇಂಡಿಯಾ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮನ್‌ ಕೀ ಬಾತ್‌ ಕಾರ್ಯಕ್ರಮವನ್ನು ನಡೆಸಿಕೊಟ್ಟ ರೀತಿ, ಅವರ ಮಾತಿನ ಪಠ್ಯ ಸೇರಿ ಹಲವು ಅಂಶಗಳು ಪುಸ್ತಕದಲ್ಲಿವೆ. ಇದಕ್ಕೆ ನರೇಂದ್ರ ಮೋದಿ ಅವರೇ ಮುನ್ನುಡಿ ಬರೆದಿದ್ದಾರೆ.

ಇದನ್ನೂ ಓದಿ: Mann Ki Baat: ಬೇಲೂರು, ಹಳೆಬೀಡು ದೇಗುಲಗಳಿಗೆ ವಿಶ್ವಮಾನ್ಯತೆ; ಮನ್‌ ಕಿ ಬಾತ್‌ನಲ್ಲಿ ಮೋದಿ ಸಂತಸ

ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರತಿ ತಿಂಗಳು ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಾರೆ. ದೇಶದ ವಿದ್ಯಮಾನಗಳು, ಸಾಧಕರು, ಯಾವುದೇ ಸಮಸ್ಯೆಗಳಿಗೆ ಪರಿಹಾರ, ಜನ ನೀಡಿದ ವಿಷಯಗಳ ಪ್ರಸ್ತಾಪ, ಭಾಷೆ, ಸಂಸ್ಕೃತಿ, ಹಬ್ಬಗಳು, ದೇಶ ಕಂಡ ಮಹಾನ್‌ ವ್ಯಕ್ತಿಗಳು ಸೇರಿ ಹಲವು ವಿಷಯಗಳ ಕುರಿತು ಮೋದಿ ಮಾತನಾಡುತ್ತಾರೆ. ಮನ್‌ ಕೀ ಬಾತ್‌ ಕಾರ್ಯಕ್ರಮವು ನೂರು ಸಂಚಿಕೆಗಳನ್ನು ಕೂಡ ಪೂರೈಸಿದೆ.

Exit mobile version