ಪ್ರಧಾನಿ ನರೇಂದ್ರ ಮೋದಿ (PM Modi)ಯವರು 2 ದಿನಗಳ ಫ್ರಾನ್ಸ್ ಪ್ರವಾಸ ಮುಗಿಸಿ, ಇಂದು ಅಬುಧಾಬಿಗೆ ಹೋಗಿದ್ದಾರೆ. ಅಲ್ಲಿ ಅವರನ್ನು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸ್ವಾಗತ ಮಾಡಿದ್ದಾರೆ. ಇಬ್ಬರೂ ನಾಯಕರು ಪರಸ್ಪರ ಸೌಹಾರ್ದವಾಗಿ ಮಾತುಕತೆ ನಡೆಸಿದರು (PM Modi UAE Visit). ಇದೇ ವೇಳೆ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಪ್ರಧಾನಿ ನರೇಂದ್ರ ಮೋದಿ ಕೈಯಿಗೆ ಫ್ರೆಂಡ್ಶಿಪ್ ಬ್ಯಾಂಡ್ ತೊಡಿಸಿದ್ದಾರೆ. ಹಾಗೇ, ಇನ್ನೊಂದು ಬ್ಯಾಂಡ್ನ್ನು ತಮಗೇ ತಾವೇ ಕೈಯಿಗೆ ಹಾಕಿಕೊಂಡಿದ್ದಾರೆ. ಬಳಿಕ ಇಬ್ಬರೂ ಪರಸ್ಪರ ಹಸ್ತಲಾಘವ ಮಾಡಿಕೊಂಡಿದ್ದಾರೆ.
ಇಂದು ಅಬುಧಾಬಿಗೆ ಪ್ರಧಾನಿ ಮೋದಿ ಕಾಲಿಟ್ಟ ಬಳಿಕ ಪ್ರಧಾನಿ ಮೋದಿ ‘ನಾನು ಇಂದು ಅಬುಧಾಬಿಗೆ ಬಂದಿದ್ದಕ್ಕೆ ಮತ್ತು ನಿಮ್ಮನ್ನು ಭೇಟಿಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ನೀವು ನೀಡಿದ ಆತ್ಮೀಯ ಸ್ವಾಗತಕ್ಕೆ ಧನ್ಯವಾದ. ನೀವು ಭಾರತದ ಆತ್ಮೀಯ ಸ್ನೇಹಿತ ಎಂದು ಪ್ರತಿಯೊಬ್ಬ ಭಾರತೀಯನೂ ನಂಬುತ್ತಾನೆ’ ಎಂದು ಅಧ್ಯಕ್ಷ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಬಳಿ ಹೇಳಿದ್ದಾರೆ.