Site icon Vistara News

LPG Price Hike | ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್​ ಬೆಲೆ ಹೆಚ್ಚಳ; ಹೊಸ ವರ್ಷದ ಮೊದಲ ದಿನವೇ ದರ ಏರಿಕೆ ಹೊರೆ

Price of 19 kg gas cylinder increased Today

ನವ ದೆಹಲಿ: ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು ಹೊಸ ವರ್ಷದ ಮೊದಲನೇ ದಿನವೇ ಒಂದು ಬ್ಯಾಡ್​ನ್ಯೂಸ್ ಕೊಟ್ಟಿವೆ. 19 ಕೆಜಿ, ವಾಣಿಜ್ಯ ಬಳಕೆ ಅಡುಗೆ ಅನಿಲದ ಸಿಲಿಂಡರ್​ ಬೆಲೆಯನ್ನು 25 ರೂಪಾಯಿ ಏರಿಸಿವೆ. ಈ ಮಧ್ಯೆ ಸಮಾಧಾನಕರ ಸಂಗತಿಯೆಂದರೆ, 14 ಕೆಜಿಯ, ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್​ ದರದಲ್ಲಿ ಯಾವುದೇ ಏರಿಕೆ ಮಾಡದೆ ಇರುವುದು.

2022ರ ಜೂನ್​ ತಿಂಗಳಿಂದ ನಿರಂತರವಾಗಿ 19 ಕೆಜಿ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆಯಾಗುತ್ತಲೇ ಇತ್ತು. ಜೂನ್​​ನಲ್ಲಿ 135 ರೂಪಾಯಿ ಕಡಿಮೆಯಾಗಿತ್ತು. ಹಾಗೇ, ನವೆಂಬರ್​​ನಲ್ಲಿ 115.50 ರೂಪಾಯಿ ಕಡಿತಗೊಂಡಿತ್ತು. ಡಿಸೆಂಬರ್​ ತಿಂಗಳಲ್ಲಿ ಯಾವುದೇ ಏರಿಳಿತ ಆಗಿರಲಿಲ್ಲ. ಈಗ 2023ರ ಮೊದಲ ದಿನವೇ ಗ್ಯಾಸ್​ ಸಿಲಿಂಡರ್​​ ಬೆಲೆ ಏರಿಕೆ ಬಿಸಿ ತಾಗಿದೆ. ಹೀಗೆ 19 ಕೆಜಿ ಅಡುಗೆ ಅನಿಲ ಸಿಲಿಂಡರ್​ ಬೆಲೆ ಹೆಚ್ಚಳವಾಗಿದ್ದು, ಹೋಟೆಲ್​, ರೆಸ್ಟೊರೆಂಟ್ ಮಾಲೀಕರಿಗೆ ಹೊರೆಯಾಗಿ ಪರಿಣಮಿಸಲಿದೆ.

ಇದೀಗ 19 ಕೆಜಿ ಸಿಲಿಂಡರ್​ ಬೆಲೆ ದೆಹಲಿಯಲ್ಲಿ 1768 ರೂಪಾಯಿ, ಮುಂಬಯಿಯಲ್ಲಿ 1721 ರೂ., ಕೋಲ್ಕತ್ತದಲ್ಲಿ 1870 ರೂ., ಚೆನ್ನೈನಲ್ಲಿ 1917 ರೂಪಾಯಿ ಮತ್ತು ಬೆಂಗಳೂರಿನಲ್ಲಿ 1700 ರೂಪಾಯಿ ಆಗಲಿದೆ. ಹಾಗೇ, ಗೃಹ ಬಳಕೆ ಸಿಲಿಂಡರ್​ ಬೆಲೆ ದೆಹಲಿ 1053 ರೂ., ಮುಂಬಯಿಯಲ್ಲಿ 1052.5, ಕೋಲ್ಕತ್ತದಲ್ಲಿ 1079 ರೂ., ಚೆನ್ನೈನಲ್ಲಿ 1068 ರೂ. ಮತ್ತು ಬೆಂಗಳೂರಿನಲ್ಲಿ 1055.50 ರೂಪಾಯಿ ಇದೆ.

ಇದನ್ನೂ ಓದಿ: Gujarat Election | ಅಡುಗೆ ಅನಿಲ ಸಿಲಿಂಡರ್‌ನೊಂದಿಗೆ ಸೈಕಲ್ ಮೇಲೆ ಬಂದು ವೋಟ್ ಮಾಡಿದ ಕಾಂಗ್ರೆಸ್ ಶಾಸಕ

Exit mobile version