Site icon Vistara News

Rozgar Mela | 10 ಲಕ್ಷ ಉದ್ಯೋಗ ನೇಮಕಾತಿ ಅಭಿಯಾನ ರೋಜ್‌ಗಾರ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ

Rozgar Mela

ನವ ದೆಹಲಿ: ಹತ್ತು ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ರೋಜ್‌ಗಾರ್ ಮೇಳ(Rozgar Mela)ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕವೇ ಈ ಬೃಹತ್ ಉದ್ಯೋಗ ಅಭಿಯಾನವನ್ನು ಉದ್ಘಾಟಿಸಿದರು. ಕೆಲವು ತಿಂಗಳ ಹಿಂದೆಯೇ ಪ್ರಧಾನಿಗಳು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಸೂಚಿಸಿದ್ದರು. ಅದರ ಭಾಗವಾಗಿಯೇ ಈಗ ಕೇಂದ್ರ ಸರ್ಕಾರವು ದೊಡ್ಡ ಮಟ್ಟದಲ್ಲಿ ನೇಮಕಾತಿ ಅಭಿಯಾನವನ್ನು ಹಮ್ಮಿಕೊಂಡಿದೆ. ಇದೇ ವೇಳೆ, 75 ಸಾವಿರ ಜನರಿಗೆ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು.

https://twitter.com/PIB_India/status/1583699175153471488

ಪ್ರಧಾನಿ ಸೂಚನೆ
ಪ್ರಧಾನಿ ನರೇಂದ್ರ ಮೋದಿ ಅವರು ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳುತ್ತಿವೆ. ಕೇಂದ್ರ ಸರ್ಕಾರದ 39 ಇಲಾಖೆ/ಸಚಿವಾಲಯಗಳಿಗೆ ದೇಶಾದ್ಯಂತ ಜನರು ನೌಕರಿಗೆ ಸೇರಿಕೊಳ್ಳಲಿದ್ದಾರೆ. ಗ್ರೂಪ್ ಎ, ಗ್ರೂಪ್ ಬಿ(ಗೆಜೆಟೆಡ್), ಗ್ರೂಪ್ ಬಿ(ನಾನ್ ಗೆಜೆಟೆಡ್) ಮತ್ತು ಗೂಪ್ರ್ ಸಿ ಕೆಟಗರಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಕಳೆದ ಜೂನ್ ತಿಂಗಳಲ್ಲಿ ವಿವಿಧ ಇಲಾಖೆಗಳ ಪರಿಶೀಲನಾ ಸಭೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದರು.

ಇದನ್ನ ಓದಿ | Job Fair : ಬೆಂಗಳೂರಿನ ಜಯನಗರಲ್ಲಿ ಬೃಹತ್‌ ಉದ್ಯೋಗ ಮೇಳ

Exit mobile version