ನವ ದೆಹಲಿ: ದೇಶದಲ್ಲಿ ಕೋವಿಡ್-೧೯ ವಿರುದ್ಧದ ಲಸಿಕೆ ವಿತರಣೆ ೨೦೦ ಕೋಟಿಯ ಐತಿಹಾಸಿಕ ಮೈಲುಗಲ್ಲು ದಾಟಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
” ಭಾರತ ಇತಿಹಾಸ ಸೃಷ್ಟಿಸಿದೆ! ೨೦೦ ಕೋಟಿ ಲಸಿಕೆ ವಿತರಣೆಗೆ ಸಹಕರಿಸಿದ ಎಲ್ಲ ಭಾರತೀಯರಿಗೆ ಅಭಿನಂದನೆಗಳು. ಭಾರತದ ಕೋವಿಡ್ ಲಸಿಕೆ ವಿತರಣೆ ಅಭಿಯಾನವನ್ನು ವೇಗವಾಗಿ ಅನುಷ್ಠಾನ ಮಾಡಿರುವುದು ಹೆಮ್ಮೆಯ ಸಾಧನೆಯಾಗಿಎ. ಕೋವಿಡ್-೧೯ ವಿರುದ್ಧದ ಹೋರಾಟವನ್ನು ಇದು ಬಲಪಡಿಸಿದೆʼʼ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಲಸಿಕೆ ಅಭಿಯಾನದ ಉದ್ದಕ್ಕೂ ಭಾರತೀಯರು ವಿಜ್ಞಾನದಲ್ಲಿ ನಂಬಿಕೆ ಇಟ್ಟಿದ್ದರು. ನಮ್ಮ ವೈದ್ಯರು, ನರ್ಸ್‌ಗಳು, ಮುಂಚೂಣಿಯ ಕೋವಿಡ್ ವಾರಿಯರ್ಸ್, ವಿಜ್ಞಾನಿಗಳು, ಉತ್ಪಾದಕರು, ಉದ್ಯಮಿಗಳು ಈ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಅವರ ಉತ್ಸಾಹ ಮತ್ತು ಕ್ರಿಯಾಶೀಲತೆ ಅಭೂತಪೂರ್ವ ಆಗಿತ್ತು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.