Site icon Vistara News

Narendra Modi: ಪೊರಕೆ ಹಿಡಿದು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಮೋದಿ; ಕಸ ಗುಡಿಸಿದ ಶಾ, ನಡ್ಡಾ!

Narendra Modi

Prime Minister Narendra Modi participated in the cleanliness drive with Ankit Baiyanpuriya

ನವದೆಹಲಿ: ಮಹಾತ್ಮ ಗಾಂಧಿ ಜಯಂತಿ (Gandhi Jayanti) ಹಿನ್ನೆಲೆಯಲ್ಲಿ ಅಕ್ಟೋಬರ್‌ 1ರಂದು ಕೇಂದ್ರ ಸರ್ಕಾರ ಆರಂಭಿಸಿದ ಒಂದು ಗಂಟೆಯ ಸ್ವಚ್ಛತಾ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿ ಲಕ್ಷಾಂತರ ಜನ ಸ್ವಚ್ಛತಾ ಅಭಿಯಾನದಲ್ಲಿ (Cleanliness Drive) ಪಾಲ್ಗೊಂಡು ಜಾಗೃತಿ ಮೂಡಿಸಿದರು.

ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಸಚಿವಾಲಯವು “ಏಕ್‌ ತಾರೀಖ್‌, ಏಕ್‌ ಘಂಟಾ, ಏಕ್‌ ಸಾಥ್” ಎಂಬ ಅಭಿಯಾನವು ಭಾನುವಾರ ಬೆಳಗ್ಗೆ 10 ಗಂಟೆಯಿಂದ 11 ಗಂಟೆವರೆಗೆ ನಡೆಯಿತು. ದೇಶಾದ್ಯಂತ ಬಿಜೆಪಿ ನಾಯಕರು, ಸಾರ್ವಜನಿಕರು ಸೇರಿ ಹಲವರು ಅಭಯಾನದಲ್ಲ ಪಾಲ್ಗೊಂಡು, ಸ್ವಚ್ಛತೆ ಮೂಲಕ ಜನರಿಗೆ ಅರಿವು ಮೂಡಿಸಿದರು. ಇದರೊಂದಿಗೆ ಮಹಾತ್ಮ ಗಾಂಧೀಜಿ ಅವರಿಗೂ ಸಾರ್ಥಕ ರೀತಿಯಲ್ಲಿ ಗೌರವ ಸಲ್ಲಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕುಸ್ತಿಪಟು, ಫಿಟ್‌ನೆಸ್‌ ಇನ್‌ಫ್ಲುಯೆನ್ಸರ್‌ ಆಗಿರುವ ಅಂಕಿತ ಬೈಯಾನ್‌ಪುರಿಯಾ ಅವರ ಜತೆ ಪಾರ್ಕ್‌ನಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಂಡರು. ಪೊರಕೆ ಹಿಡಿದು ಕಸ ಗುಡಿಸುವ ಜತೆಗೆ, ಕಸವನ್ನು ಹೆಕ್ಕಿ ಡಸ್ಟ್‌ಬಿನ್‌ಗೆ ಹಾಕಿದರು. ಮೋದಿ ಅವರಿಗೆ ಅಂಕಿತ್‌ ಬೈಯಾನ್‌ಪುರಿಯಾ ಅವರು ಕೂಡ ಕಸ ಹೆಕ್ಕಲು ಸಹಾಯ ಮಾಡಿದರು. ಇದೇ ವೇಳೆ, ನರೇಂದ್ರ ಮೋದಿ ಹಾಗೂ ಅಂಕಿತ್‌ ಬೈಯಾನ್‌ಪುರಿಯಾ ನಡುವಿನ ಸಂಭಾಷಣೆಯ ವಿಡಿಯೊವನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.

“ದೇಶವು ಇಂದು ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ನಾನು ಹಾಗೂ ಅಂಕಿತ್‌ ಬೈಯಾನ್‌ಪುರಿಯಾ ಅವರು ಕೂಡ ಇದನ್ನೇ ಮಾಡಿದೆವು. ಸ್ವಚ್ಛತೆಯ ಜತೆಗೆ ಫಿಟ್‌ನೆಸ್‌ ಬಗ್ಗೆಯೂ ಚರ್ಚಿಸಿದೆವು. ಸ್ವಾಸ್ಥ್ಯದ ಬಗ್ಗೆಯೂ ಇಬ್ಬರು ಮಾತನಾಡಿದೆವು. ಸ್ವಚ್ಛತೆ ಹಾಗೂ ಸ್ವಾಸ್ಥ್ಯ ನಮ್ಮ ಮಾತುಕತೆಯ ಕೇಂದ್ರ ಬಿಂದು ಆಗಿತ್ತು” ಎಂದಿದ್ದಾರೆ. ಹರಿಯಾಣದವರಾದ ಅಂಕಿತ್‌ ಬೈಯಾನ್‌ಪುರಿಯಾ, “ಸೋನಿಪತ್‌ ಸೇರಿ ಎಲ್ಲೆಡೆ ಸ್ವಚ್ಛತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿದೆ” ಎಂದರು. ಇಬ್ಬರೂ ಆರೋಗ್ಯ, ಸ್ವಚ್ಛತೆ, ಫಿಟ್‌ನೆಸ್‌ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿರುವ ವಿಡಿಯೊವನ್ನು ಕೂಡ ಮೋದಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Mandya Ramesh: ಮಂಡ್ಯ ರಮೇಶ್‌ ಮೈಸೂರು ಸ್ವಚ್ಛತಾ ರಾಯಭಾರಿ; ನಂ. 1 ಸ್ಥಾನಕ್ಕೆ ಕೈ ಜೋಡಿಸಿ ಎಂದು ಮನವಿ!

ಮತ್ತೊಂದೆಡೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌, ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಸೇರಿ ಹಲವು ಸಚಿವರು, ನಾಯಕರು, ಸಂಸದರು, ಶಾಸಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.

Exit mobile version