ನವದೆಹಲಿ: ಹರ್ಯಾಣದಲ್ಲಿ (Haryana) ಐದು ಎಕರೆ ಭೂಮಿ ಖರೀದಿ ಮತ್ತು ಮಾರಾಟಕ್ಕೆ (land Deal) ಸಂಬಂಧಿಸಿದ ಪ್ರಕರಣದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Congress Leader Priyanka Gandhi Vadra) ಅವರನ್ನು ಜಾರಿ ನಿರ್ದೇಶನಾಲಯವು ತನ್ನ ಚಾರ್ಜ್‌ಶೀಟ್‌ನಲ್ಲಿ ಹೆಸರಿಸಿದೆ(ED Chargesheet). ಪ್ರಿಯಾಂಕಾ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ (Robert Vadra) ಅವರ ಹೆಸರೂ ಇದ್ದು, ಅವರನ್ನು ಆರೋಪಿ ಎಂದು ನಮೂದಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಎನ್‌ಆರ್‌ಐ ಉದ್ಯಮಿ ಸಿಸಿ ಥಂಪಿ ಮತ್ತು ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಸುಮಿತ್ ಚಡ್ಡಾ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಪರಾರಿಯಾದ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಗೆ ಅವರು ಸಹಾಯ ಮಾಡಿದ್ದಾರೆ ಎಂದು ಇ.ಡಿ ಎಂದು ಭಾವಿಸಿದೆ. ಅಲ್ಲದೇ, ತಮ್ಮ ಅಪರಾಧಗಳನ್ನು ಮರೆ ಮಾಚಲು ಇತರ ಕಾನೂನುಗಳ ಜೊತೆಗೆ ಅಧಿಕೃತ ರಹಸ್ಯ ಕಾಯಿದೆಯನ್ನು ಉಲ್ಲಂಘಿಸಿದ ಆರೋಪವಿದೆ ಎದುರಿಸುತ್ತಿದ್ದಾರೆ.
ಜಾರಿ ನಿರ್ದೇಶನಾಲಯವು ಕೇಂದ್ರ ಸರ್ಕಾರದ ಅಣತಿಯಂತೆ ಪ್ರತಿ ಪಕ್ಷಗಳ ವಿರುದ್ಧ ವರ್ತಿಸುತ್ತಿದೆ ಎಂಬ ಆರೋದ ಮಧ್ಯೆಯೇ ಈಗ ಪ್ರಿಯಾಂಕಾ ಗಾಂಧಿ ಅವರ ಹೆಸರು ಕೂಡ ಚಾರ್ಜ್‌ಶೀಟ್‌ನಲ್ಲಿ ಕಾಣಿಸಿಕೊಂಡಿದೆ. 2006ರಲ್ಲಿ ದಿಲ್ಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್ ಎಲ್ ಪಹ್ವಾ ಫರೀದಾಬಾದ್‌ನಲ್ಲಿರುವ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದ. ಈ ವೇಳೆ ಆತ ಪ್ರಿಯಾಂಕಾ ಗಾಂಧಿ ವಾದ್ರಾ ಜತೆಗಿನ ವ್ಯವಹಾರದ ಕುರಿತೂ ಆತ ನಮೂದಿಸಿದ್ದಾನೆ. ನಾಲ್ಕು ವರ್ಷದ ಬಳಿಕ ಅದೇ ಭೂಮಿಯನ್ನು ಆತ ಮತ್ತೆ ಖರೀದಿಸಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾನೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರಿನಲ್ಲೂ ಫರೀದಾಬಾದ್‌ನ ಅಮಿಪುರ ಹಳ್ಳಿಯಲ್ಲಿ ಮನೆಯನ್ನು ಖರೀದಿಸಿದ ಆರೋಪವಿದೆ. ಕೃಷಿ ಭೂಮಿಯನ್ನು ಮಾರಾಟ ಮಾಡಿದ ಸಂದರ್ಭದಲ್ಲೇ ಈ ಮನೆಯನ್ನು ಅಂದರೆ 2006ರ ಏಪ್ರಿಲ್ ತಿಂಗಳಲ್ಲಿ ಪಹ್ವಾ ಖರೀದಿಸಿದ್ದ!
ರಾಬರ್ಟ್ ವಾದ್ರಾ ಅವರು 2005 ಮತ್ತು 2006 ರ ನಡುವೆ ಅಮಿಪುರದಲ್ಲಿ 40.8 ಎಕರೆ ಭೂಮಿಯನ್ನು ಖರೀದಿಸಿದ್ದರು. ಈ ಭೂಮಿಯನ್ನು ಇದೇ ಪಹ್ವಾ ಅವರಿಂದ ಖರೀದಿಸಿದ್ದರು. ಬಳಿಕ 2010 ಡಿಸೆಂಬರ್ ತಿಂಗಳಲ್ಲಿ ಎಲ್ಲ ವಾಪಸ್ ಮಾರಾಟ ಮಾಡಿದ್ದರು. 2020ರಲ್ಲಿ ಬಂಧನಕ್ಕೊಳಗಾಗಿ, ಈಗ ಜಾಮೀನು ಮೇಲೆ ಹೊರಗಿರುವ ಥಂಪಿ ಕೂಡ ಇದೇ ರೀತಿಯಲ್ಲಿ 486 ಎಕರೆ ಭೂಮಿ ಮಾರಾಟ ಮತ್ತು ಖರೀದಿ ವ್ಯವಹಾರ ಮಾಡಿದ್ದರು. ಈ ಪ್ರಕರಣದಲ್ಲಿ ಇ.ಡಿ ವಾದ್ರಾ ಅವರ ಹೆಸರನ್ನು ಸೇರಿಸಿತ್ತು. ಈ ವ್ಯವಹಾರದಲ್ಲಿ ವಾದ್ರಾ ಮತ್ತು ಥಂಪಿ ಮಧ್ಯೆ ನಿಕಟ ಸಂಬಂಧವಿದೆ ಇದೆ ಎಂದು ಇ.ಡಿ ತನ್ನ ಈ ಹಿಂದಿನ ಆರೋಪಪಟ್ಟಿಯಲ್ಲಿ ತಿಳಿಸಿತ್ತು.
ಜಾರಿ ನಿರ್ದೇಶನಾಲಯವು ಈ ಹಿಂದೆ ವಾದ್ರಾ ಅವರನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತ್ತು. ಈ ವೇಳೆ, ಅವರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದರು. ಆದರೆ, ಇದೇ ಮೊದಲ ಬಾರಿಗೆ ವಾದ್ರಾ ಅವರ ಹೆಸರನ್ನೂ ಇ.ಡಿ ಆರೋಪ ಪಟ್ಟಿಯಲ್ಲಿ ಹೆಸರಿಸಿದೆ. ಈ ಎಲ್ಲ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹಾಗೆಯೇ, ಹಿಮಾಚಲ ಪ್ರದೇಶ ಸಿಎಂ ಸುಖ್ವೀಂದೇರ್ ಸಿಂಗ್ ಸುಖು ಮತ್ತು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಠೋಳೆ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಸುದ್ದಿಯನ್ನೂ ಓದಿ: Robert Vadra | ನ್ಯಾಯಾಲಯಕ್ಕೆ ಭೇಷರತ್ ಕ್ಷಮೆಯಾಚಿಸಿದ ರಾಬರ್ಟ್ ವಾದ್ರಾ, ಕಾರಣ ಏನು?