Site icon Vistara News

Marion Biotech | ಕೆಮ್ಮಿನ ಸಿರಪ್‌ ಕುಡಿದು ಉಜ್ಬೇಕಿಸ್ತಾನದಲ್ಲಿ 18 ಮಕ್ಕಳ ಸಾವು, ಔಷಧ ಉತ್ಪಾದನೆ ನಿಲ್ಲಿಸಿದ ಭಾರತದ ಕಂಪನಿ

Doc-1 Max syrup

ಲಖನೌ: ಉತ್ತರ ಪ್ರದೇಶದ ನೊಯ್ಡಾ ಮೂಲದ ಮೇರಿಯನ್‌ ಬಯೋಟೆಕ್‌ ಪ್ರೈವೇಟ್‌ ಲಿಮಿಟೆಡ್‌ (Marion Biotech) ಫಾರ್ಮಾ ಕಂಪನಿಯ ಸಿರಪ್‌ ಸೇವಿಸಿ ಉಜ್ಬೇಕಿಸ್ತಾನದಲ್ಲಿ 18 ಮಕ್ಕಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಫಾರ್ಮಾ ಕಂಪನಿಯು ಔಷಧ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

“ಮಕ್ಕಳು ಮೃತಪಟ್ಟಿರುವುದಕ್ಕೆ ವಿಷಾದವಿದೆ. ಕೇಂದ್ರ ಸರ್ಕಾರ ತನಿಖೆ ನಡೆಸುತ್ತಿದೆ. ವರದಿ ಆಧರಿಸಿ ನಾವೂ ಕ್ರಮ ತೆಗೆದುಕೊಳ್ಳುತ್ತೇವೆ. ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಸದ್ಯ ಉತ್ಪಾದನೆಯನ್ನು ನಿಲ್ಲಿಸಲಾಗಿದೆ” ಎಂದು ಫಾರ್ಮಾ ಕಂಪನಿಯ ಕಾನೂನು ವಿಭಾಗದ ಮುಖ್ಯಸ್ಥ ಹಸನ್‌ ಹ್ಯಾರಿಸ್‌ ಮಾಹಿತಿ ನೀಡಿದ್ದಾರೆ.

ನೊಯ್ಡಾ ಮೂಲದ ಕಂಪನಿಯ ಡಾಕ್‌-1 ಮ್ಯಾಕ್ಸ್‌ (Doc-1 Max Syrup) ಎಂಬ ಕೆಮ್ಮಿನ ಸಿರಪ್‌ ಸೇವಿಸಿ 18 ಮಕ್ಕಳು ಮೃತಪಟ್ಟಿದ್ದಾರೆ ಎಂದು ಉಜ್ಬೇಕಿಸ್ತಾನ ಸರ್ಕಾರ ಆರೋಪಿಸಿದೆ. ಹಾಗಾಗಿ, ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಹಾಗೂ ಉತ್ತರ ಪ್ರದೇಶ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಕಂಪನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿರುವುದರಿಂದ ಉತ್ಪಾದನೆ ನಿಲ್ಲಿಸಲಾಗಿದೆ.

ಇದನ್ನೂ ಓದಿ | Indian drugs | ಭಾರತದಲ್ಲಿ ತಯಾರಾದ ಔಷಧ ಓವರ್‌ಡೋಸ್‌ನಿಂದ ಉಜ್ಬೆಕಿಸ್ತಾನದಲ್ಲಿ 18 ಮಕ್ಕಳ ಸಾವು

Exit mobile version