Site icon Vistara News

TET: 9ರಿಂದ 12ನೇ ತರಗತಿ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸುವ ಪ್ರಸ್ತಾಪ!

Proposal to make TET compulsory for teachers of class 9 to 12

ನವದೆಹಲಿ: ಮಾಧ್ಯಮಿಕ ಶಾಲೆ (Secondary Education) ಶಿಕ್ಷಕರಿಗೆ(9ರಿಂದ 12ನೇ ತರಗತಿ) ಶಿಕ್ಷಕರ ಅರ್ಹತಾ ಪರೀಕ್ಷೆ(TET)ಯನ್ನು ಕಡ್ಡಾಯಗೊಳಿಸುವ ಬಗ್ಗೆ ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಷನ್(NCTE) ಪ್ರಸ್ತಾಪಿಸಿದೆ. ಶಿಕ್ಷಕರ ನೇಮಕಾತಿಯ (Teacher Recruitment) ಪದ್ಧತಿಗಳನ್ನು ಮತ್ತಷ್ಟು ದಕ್ಷಗೊಳಿಸುವ ಅನೇಕ ಪ್ರಸ್ತಾಪಗಳನ್ನು ಮುಂದಿಡಲಾಗಿದೆ. ಎನ್‌ಸಿಇಟಿ ಕೈಗೊಂಡಿದ್ದ ಟಿಇಟಿಗೆ ಸಂಬಂಧಿಸಿ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಕುರಿತು ಸಮಗ್ರ ಚರ್ಚೆ ನೆಡೆಸಿ, ಮಾಧ್ಯಮಕ ಶಾಲಾ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಸಿದ್ಧಪಡಿಸಲಾಗಿದೆ.

ಎನ್‌ಸಿಟಿಇ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸಹಯೋಗದೊಂದಿಗೆ, ರಾಷ್ಟ್ರೀಯ ಶಿಕ್ಷಣ ನೀತಿ 2020 (NEP)ಯ ಪರಿವರ್ತಕ ಆಕಾಂಕ್ಷೆಗಳೊಂದಿಗೆ ಜೋಡಿಸಲಾದ ವರ್ಧನೆಗಳನ್ನು ಅನ್ವೇಷಿಸಲು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಕುರಿತು ಪ್ರಮುಖ 1-ದಿನದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು.

ಎನ್‌ಸಿಟಿಇ ಸದಸ್ಯ ಕಾರ್ಯದರ್ಶಿಯೂ ಆಗಿರುವ ಐಆರ್‌ಎಸ್ ಅಧಿಕಾರಿ ಕೆಸಾಂಗ್ ವೈ ಶೆರ್ಪಾ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಟಿಇಟಿಯನ್ನು 9ರಿಂದ 12ನೇ ತರಗತಿ ಶಿಕ್ಷಕರಿಗೂ ಕಡ್ಡಾಯಗೊಳಿಸುವ ವಿಷಯವನ್ನು ಮಂಡಿಸಿದರು. ಇದು ವ್ಯಾಪಕ ಚರ್ಚೆಗೆ ವೇದಿಕೆಯನ್ನು ಸಿದ್ಧಪಡಿಸಿತು. ವಿವಿಧ ಶೈಕ್ಷಣಿಕ ಸ್ತರಗಳಲ್ಲಿ ಟಿಇಟಿಯನ್ನು ಏಕೀಕರಣಗೊಳಿಸುವುದು ಸೇರಿದಂತೆ ಸಮಗ್ರ ಶೈಕ್ಷಣಿಕ ಸುಧಾರಣೆಗಳ ಮಹತ್ವದ ಬಗ್ಗೆ 2020ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ಸಿಬಿಎಸ್‌ಇ ಅಧ್ಯಕ್ಷೆಯಾಗಿರುವ ನಿಧಿ ಛಿಬ್ಬರ್ ಅವರು ಶಿಕ್ಷಕರ ಪರಿಣಾಮಕಾರಿತ್ವವನ್ನು ಅಳೆಯುವಲ್ಲಿ ಮತ್ತು ಶಿಕ್ಷಣಶಾಸ್ತ್ರದ ಶ್ರೇಷ್ಠತೆಯನ್ನು ಖಾತ್ರಿಪಡಿಸುವಲ್ಲಿ ಟಿಇಟಿಯ ಪ್ರಮುಖ ಪಾತ್ರ ಬಗ್ಗೆ ಒತ್ತಿಹೇಳಿದರು. ಟಿಇಟಿ ಪರೀಕ್ಷೆಗಳನ್ನು ನಡೆಸುವಲ್ಲಿ ಸಿಬಿಎಸ್ಇ ಅನುಭವದೊಂದಿಗೆ ಟಿಇಟಿ ಅನುಷ್ಠಾನದ ಕಾರ್ಯತಂತ್ರಗಳನ್ನು ಸುಗಮಗೊಳಿಸಲು ಎನ್‌ಸಿಟಿಇಯೊಂದಿಗೆ ಸಹಯೋಗ ಮಾಡಲು ಮಂಡಳಿಯ ಬದ್ಧತೆಯನ್ನು ಒತ್ತಿ ಹೇಳಿದರು.

ಈ ಸಮ್ಮೇಳನದಲ್ಲಿ ಭಾಗವಹಿಸಿದ್ದ ಅನೇಕ ಶೈಕ್ಷಣಿಕ ತಜ್ಞರು ವಿವಿಧ ಹಂತದಲ್ಲಿ ಟಿಇಟಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಹೇಳಿದರು. ಅಲ್ಲದೇ, ಇದರಿಂದ ಶೈಕ್ಷಣಿಕ ಸುಧಾರಣೆ ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ತಿಳಿಸಿ ಹೇಳಿದರು.

ಈ ಸುದ್ದಿಯನ್ನೂ ಓದಿ: BBMP Teachers: ಬೋಧನಾ ಸಾಮರ್ಥ್ಯದಲ್ಲಿ ಕೊರತೆ ಇರುವ ಬಿಬಿಎಂಪಿ ಶಿಕ್ಷಕರಿಗೆ ಗೇಟ್‌ಪಾಸ್! ಟಿಇಟಿ ಪಾಸ್ ಆದರಷ್ಟೇ ಅವಕಾಶ

Exit mobile version