ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಗರದ ಶಾಪಿಂಗ್ ಮಾಲ್‌ನಲ್ಲಿ ನಮಾಜ್ ಮಾಡಿದ್ದನ್ನು ಪ್ರತಿಭಟಿಸಿ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು (Bhopal mall ) ಶನಿವಾರ ಮಧ್ಯಾಹ್ನ ಭಜನೆ ನಡೆಸಿದರು.
ಭೋಪಾಲ್‌ನ ಡಿಬಿ ಶಾಪಿಂಗ್ ಮಾಲ್‌ನ ಒಳಗೆ ನೆಲ ಮಹಡಿಯಲ್ಲಿ ಮಾಲ್‌ನ ಕೆಲ ಉದ್ಯೋಗಿಗಳು ನಮಾಜ್ ನಡೆಸಿದ್ದರು. ಇದನ್ನು ವಿರೋಧಿಸಿ ಭಜನೆ ನಡೆಯಿತು. ಪರಿಸ್ಥಿತಿ ಬಿಗುವಾಗುತ್ತಿರುವುದನ್ನು ಗಮನಿಸಿದ ಮಾಲ್‌ನ ಆಡಳಿತ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಉಭಯ ಬಣಗಳನ್ನು ಶಾಂತಗೊಳಿಸಲು ಯತ್ನಿಸಿದರು. ಆದರೆ ಇದುವರೆಗೆ ಯಾರೊಬ್ಬರೂ ಈ ಬಗ್ಗೆ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಪಿಂಗ್ ಮಾಲ್ ಒಳಗೆ ನಮಾಜ್ ಮುಂದುವರಿದರೆ ಹನುಮಾನ್ ಚಾಲೀಸಾ ಪಠಣ, ಭಜನೆಯನ್ನು ಮುಂದುವರಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಡಿಬಿ ಮಾಲ್, ಭೋಪಾಲದ ಅತಿ ದೊಡ್ಡ ಶಾಪಿಂಗ್ ಮಾಲ್ ಎಂಬ ಹೆಗ್ಗಳಿಕೆ ಪಡೆದಿದೆ.