Site icon Vistara News

Mona Lisa: ಮೊನಾಲಿಸಾ ಪೇಂಟಿಂಗ್‍‌ಗೆ ಸೂಪ್ ಎರಚಿ ಪ್ರತಿಭಟಿಸಿದ ಮಹಿಳೆಯರು!

Protesters throw soup at Mona Lisa painting

ಪ್ಯಾರಿಸ್: ಆರೋಗ್ಯದಾಯಕ ಮತ್ತು ಸುಸ್ಥಿರ ಆಹಾರಕ್ಕಾಗಿ ಒತ್ತಾಯಿಸಿ ಕೆಲವರು ಜಗತ್ ಪ್ರಸಿದ್ಧ ಮೊನಾಲಿಸಾ ಪೇಂಟಿಂಗ್ (Mona Lisa Painting) ಮೇಲೆ ಸೂಪ್ (Soup) ಎರಚಿ ಪ್ರತಿಭಟಿಸಿದ್ದಾರೆ(Protest). 16ನೇ ಶತಮಾನದ ಈ ಪೇಂಟಿಂಗ್ ಲಿಯೊನಾರ್ಡೊ ಡಾ ವಿನ್ಸಿ (ಲಿಯೊನಾರ್ಡೊ ಡಾ ವಿನ್ಸಿ) ಅವರ ಜಗತ್ ಪ್ರಸಿದ್ಧ ಕಲಾಕೃತಿಗಳಲ್ಲಿ ಒಂದಾಗಿದೆ. ಫ್ರಾನ್ಸ್‌ನ (France) ಸೆಂಟ್ರಲ್ ಪ್ಯಾರಿಸ್‌ನ (Central Paris) ಲೌವ್ರೆ ಮ್ಯೂಸಿಯಮ್‌ನಲ್ಲಿ (Louvre Museum) ಸಾರ್ವಜನಿಕ ಪ್ರದರ್ಶನಕ್ಕೆ ಈ ಕಲಾಕೃತಿಯನ್ನು ಇಡಲಾಗಿದೆ. ಈ ಪೇಂಟಿಂಗ್‌‌ಗೆ ಗಾಜಿನ ರಕ್ಷಣೆಯನ್ನು ಒದಗಿಸಲಾಗಿರುವುದರಿಂದ ಸೂಪ್ ಎರಚಿದರೂ ಯಾವುದೇ ಹಾನಿಯಾಗಿಲ್ಲ ಎಂದು ಲೌವ್ರೆ ಮ್ಯೂಸಿಯಮ್ ಹೇಳಿದೆ.

ಇಬ್ಬರು ಪ್ರತಿಭಟನಾಕಾರರು ಮೊನಾಲಿಸಾ ಪೇಂಟಿಂಗ್‌ಗೆ ಸೂಪ್ ಎಸೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ಅವರಿಬ್ಬರು ಫುಡ್ ಕೌಂಟರ್ ಅಟ್ಯಾಕ್ ಎಂಬ ಬರಹವುಳ್ಳ ಟಿ ಶರ್ಟ್ ಧರಿಸಿಕೊಂಡು ಪೇಂಟಿಂಗ್‌ನತ್ತ ಸೂಪ್ ಎಸೆಯುವುದನ್ನು ವೈರಲ್ ಆದ ವಿಡಿಯೋದಲ್ಲಿ ಕಾಣಬಹುದು.

ಸೂಪ್ ಎಸೆದು ಪ್ರತಿಭಟನಾಕಾರರು ಪೇಂಟಿಂಗ್‌ ನಿಂತು, ಯಾವುದೇ ಹೆಚ್ಚು ಮಹತ್ವದ್ದು? ಕಲೆ ಅಥವಾ ಆರೋಗ್ಯದಾಯಕ ಮತ್ತು ಸುಸ್ಥಿರ ಆರೋಗ್ಯದ ಹಕ್ಕೇ ? ನಿಮ್ಮ ಕೃಷಿ ಪದ್ಧತಿ ಹಾಳಾಗಿದೆ. ಕೆಲಸ ಮಾಡುತ್ತಾ ನಮ್ಮ ರೈತರು ಸಾಯುತ್ತಿದ್ದಾರೆಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸೂಪ್ ಎರಚಿದ ಕೂಡಲೇ ಧಾವಿಸುವ ಮ್ಯೂಸಿಯಮ್ ಭದ್ರತಾ ಸಿಬ್ಬಂದಿ, ಪ್ರತಿಭಟನಾಕಾರರನ್ನು ಅಲ್ಲಿಂದ ಭದ್ರತಾ ಕೊಠಡಿಗೆ ಕರೆದುಕೊಂಡು ಹೋಗುತ್ತಾರೆ. Riposte Alimentaire ಎಂಬ ಗ್ರೂಪ್ ಈ ಪ್ರತಿಭಟನೆಯ ಹೊಣೆಯನ್ನು ಹೊತ್ತುಕೊಂಡಿದೆ.

ಎಕ್ಸ್ ವೇದಿಕೆಯಲ್ಲಿ ಮಾಡಲಾಗಿರುವ ಫೋಸ್ಟ್‌ನಲ್ಲಿ ಈ ಪ್ರತಿಭಟನೆಯುಸಾಮಾನ್ಯ ಸಾಮಾಜಿಕ ಭದ್ರತಾ ವ್ಯವಸ್ಥೆಗೆ ಆಹಾರವನ್ನು ಸಂಯೋಜಿಸುವ ಪ್ರಯತ್ನಗಳ ಭಾಗವಾಗಿದೆ ಎಂದು Riposte Alimentaire ಹೇಳಿದೆ. ಆಹಾರದ ಪ್ರಸ್ತುತ ಮಾದರಿಯು “ಅತ್ಯಂತ ಅನಿಶ್ಚಿತತೆಯನ್ನು ಬಿತ್ತುತ್ತಿದೆ ಮತ್ತು ಆಹಾರದ ನಮ್ಮ ಮೂಲಭೂತ ಹಕ್ಕನ್ನು ಗೌರವಿಸುವುದಿಲ್ಲ” ಎಂದು ಅದು ಹೇಳಿದೆ.

1950ರಿಂದ ಮೊನಾಲಿಸಾ ಪೇಂಟಿಂಗ್‌ದೆ ಗಾಜಿನ ಪರದೆಯ ರಕ್ಷಣೆಯನ್ನು ಒದಗಿಸಲಾಗಿದೆ. ಮ್ಯೂಸಿಯಂಗೆ ಬಂದಿದ್ದ ವ್ಯಕ್ತಿಯೊಬ್ಬರು ಆ್ಯಸಿಡ್ ಎರಚುವ ಪ್ರಯತ್ನ ಮಾಡಿದ್ದಾಗಿನಿಂದಲೂ ಅದಕ್ಕೆ ಗಾಜಿನ ಪರದೆಯನ್ನು ಹೊದಿಸಲಾಗಿದೆ. 2019 ರಲ್ಲಿ ಪೆಂಟಿಂಗ್ ರಕ್ಷಿಸಲು ಹೆಚ್ಚು ಪಾರದರ್ಶಕವಾದ ಬುಲೆಟ್ ಪ್ರೂಫ್ ಗಾಜಿನ ಪರದೆಯನ್ನು ಬಳಸಲಾಗಿದೆ ಎಂದು ವಸ್ತು ಸಂಗ್ರಾಹಾಲಯವು ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Security Breach in Lok Sabha: ಏನಿದು ಕಲರ್ ಗ್ಯಾಸ್ ಕ್ಯಾನಿಸ್ಟರ್‌? ಯಾವುದಕ್ಕೆ ಬಳಸುತ್ತಾರೆ?

Exit mobile version