ಲಖನೌ: ದೇಶದ ತ್ರಿವರ್ಣ ಧ್ವಜವನ್ನು ಎಲ್ಲಿ ನೋಡಿದರೂ ಹೆಮ್ಮೆ ಎನಿಸುತ್ತದೆ. ಧ್ವಜದ ಸ್ತಂಭ, ಸರ್ಕಾರಿ ಕಚೇರಿ ಮೇಲೆ ಸೇರಿ ಎಲ್ಲಿಯೇ ತಿರಂಗಾ ಸ್ವಚ್ಛಂದವಾಗಿ ಹಾರುತ್ತಿದ್ದರೆ ಗರ್ವದಿಂದ ಸೆಲ್ಯೂಟ್ ಹೊಡೆಯಬೇಕು ಎನಿಸುತ್ತದೆ. ಆದರೆ, ಉತ್ತರ ಪ್ರದೇಶದಲ್ಲಿ ಜಿತುಲ್ಲಾ ಖಾನ್ (Jitullah Khan) ಎಂಬ ದುರುಳನು ತಿರಂಗಾದಿಂದ ತನ್ನ ಆಟೋ ರಿಕ್ಷಾದ ಗ್ಲಾಸ್ ಒರೆಸುವ ಮೂಲಕ ದುಷ್ಟತನ ಮೆರೆದಿದ್ದಾರೆ. ತ್ರಿವರ್ಣ ಧ್ವಜದಿಂದ ಆಟೋದ ಗ್ಲಾಸ್ ಒರೆಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.
ಗೋರಖ್‌ಪುರದ ಹುಮಾಯುನ್‌ಪುರ ವ್ಯಾಪ್ತಿಯ ಜನಪ್ರಿಯ ವಿಹಾರ ಕಾಲೊನಿಯಲ್ಲಿ ಜಿತುಲ್ಲಾ ಖಾನ್‌ನು ತ್ರಿವರ್ಣದಿಂದ ಧ್ವಜದಿಂದ ಆಟೋ ಸ್ವಚ್ಛಗೊಳಿಸಿದ್ದಾನೆ. ಇದನ್ನು ಕಂಡ ಸ್ಥಳೀಯರು ಪ್ರಶ್ನಿಸಿದಾಗ, ‘ನಾನು ಬಟ್ಟೆಯ ತುಂಡಿನಿಂದ ಆಟೋ ಕ್ಲೀನ್ ಮಾಡುತ್ತಿದ್ದೇನೆ’ ಎಂದು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಜಿತುಲ್ಲಾ ಖಾನ್‌ನ ವಿಡಿಯೊ ವೈರಲ್ ಆಗುತ್ತಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದ ಹಿನ್ನೆಲೆಯಲ್ಲಿ ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಜಿತುಲ್ಲಾ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇನ್ನು ಜಿತುಲ್ಲಾ ಖಾನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸ್ಥಳೀಯರು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಜಿತುಲ್ಲಾ ಖಾನ್‌ನನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Viral Video : ಯುವಕರೂ ನಾಚುವಂತೆ ನೀರಿಗೆ ಡೈವ್ ಹೊಡೆದ ಅಜ್ಜಿ; ವೈರಲ್ ಆಯ್ತು ವಿಡಿಯೊ