Site icon Vistara News

Mood of The Nation | ಏಕರೂಪ ನಾಗರಿಕ ಸಂಹಿತೆಗೆ ಜನ ಬೆಂಬಲ; ಸಮೀಕ್ಷೆಯಲ್ಲಿ ಬಹಿರಂಗ

Saudi Arabia Bans Hijab

ನವ ದೆಹಲಿ : ಎಲ್ಲ ಧರ್ಮಗಳ ಹಾಗೂ ವರ್ಗಗಳ ಜನರನ್ನು ಒಂದೇ ರೀತಿಯ ಕಾನೂನಡಿ ತರುವ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ವಿಚಾರದಲ್ಲಿ ಬಿಜೆಪಿ ತನ್ನ ಇಂಗಿತವನ್ನು ವ್ಯಕ್ತಪಡಿಸುತ್ತಲೇ ಇದೆ. ಆದರೆ, ಪ್ರತಿಪಕ್ಷಗಳು ಇದರ ವಿಚಾರವಾಗಿ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ, ಭಾರತ ನಾಗರಿಕರು ಮಾತ್ರ ಏಕರೂಪದ ನಾಗರಿಕ ಸಂಹಿತೆ ಅಗತ್ಯವಿದೆ ಎಂಬ ಅಭಿಪ್ರಾಯವೇ ಸರಿ ಎಂದಿದ್ದಾರೆ. ಇಂಡಿಯಾ ಟುಡೆ ಹಾಗೂ ಸಿ ವೋಟರ್​ ನಡೆಸಿರುವ ಮೂಡ್​ ಆಫ್​ ದಿ ನೇಷನ್​ (Mood of The Nation) ಸಮೀಕ್ಷೆಯಲ್ಲಿ ಈ ಚಿಂತನೆ ಪರವಾಗಿ ಬಹುಮತ ವ್ಯಕ್ತಗೊಂಡಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡಿರು ಒಟ್ಟು ಮಂದಿಯಲ್ಲಿ ಶೇಕಡಾ 69ರಷ್ಟು ಮಂದಿ ದೇಶವಾಸಿಗಳೆಲ್ಲರೂ ಒಂದೇ ಕಾನೂನಿನಡಿ ಪರಿಪಾಲನೆಗೆ ಒಳಗಾಗಬೇಕು ಎಂದಿದ್ದಾರೆ. ಒಂದೊಂದು ಧರ್ಮಕ್ಕೆ ಒಂದೊಂದು ನಿಯಮಗಳು ಇರುವುದು ತಪ್ಪು ಎಂದಿದ್ದಾರೆ.

ಇದನ್ನೂ ಓದಿ | Sara Khadem | ಹಿಜಾಬ್​ ಧರಿಸದ ಇರಾನ್​ನ ಚೆಸ್​ ಆಟಗಾರ್ತಿಗೆ ದೇಶಕ್ಕೆ ಮರಳದಂತೆ ಎಚ್ಚರಿಕೆ!

ಮುಸ್ಲಿಮ್​ ಸಮುದಾಯದ ಪುರುಷರು ಲವ್​ ಜಿಹಾದ್ ಮಾಡುತ್ತಿದ್ದಾರೆ ಎಂಬುದಾಗಿಯೂ ಸಮೀಕ್ಷೆಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ. ಜತೆಗೆ ಶೇಕಡಾ 57ರಷ್ಟು ಮಂದಿ ಶಾಲೆಗಳಲ್ಲಿ ಹಿಜಾಬ್ ನಿಷೇಧ ಮಾಡಬೇಕು ಎಂದು ಹೇಳಿದ್ದಾರೆ.

Exit mobile version