ನವ ದೆಹಲಿ: ಪ್ಯಾರಿಸ್‌ಗೆ ಹೊರಟಿದ್ದ ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಕಾಶ್ಮೀರದ ಫೋಟೊ ಜರ್ನಲಿಸ್ಟ್ ಸನಾ ಇರ್ಷಾದ್ ಮಟ್ಟೊ ಅವರನ್ನು ಇಲ್ಲಿಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಪ್ರಯಾಣ ಬೆಳೆಸದಂತೆ ತಡೆ ಹಿಡಿದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಅವರ ವಿದೇಶಿ ಪ್ರಯಾಣಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಈ ಕುರಿತು ಟ್ವೀಟ್ ಮಾಡಿರುವ ಸನಾ ಇರ್ಷಾದ್; ಪ್ಯಾರಿಸ್‌ನಲ್ಲಿ ನಡೆಯಲಿರುವ ಪುಸ್ತಕ ಬಿಡುಗಡೆ ಹಾಗೂ ಫೋಟೊ ಪ್ರದರ್ಶನದಲ್ಲಿ ಭಾಗವಹಿಸಲು ದೆಹಲಿಯಿಂದ ನಾನು ಪ್ಯಾರಿಸ್‌ಗೆ ಹೊರಟಿದ್ದೆ. ಫ್ಯಾನ್ಸ್ ದೇಶದ ವೀಸಾ ಇದ್ದರೂ ಕೂಡ ವಲಸೆ ಅಧಿಕಾರಿಗಳು ತಮ್ಮನ್ನು ತಡೆಹಿಡಿದಿರುವುದು ಆಶ್ಚರ್ಯ ಮೂಡಿಸಿದೆʼʼ ಎಂದು ಹೇಳಿದ್ದಾರೆ.
“ನನ್ನನ್ನು ಈ ರೀತಿ ತಡೆಯುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನೀವು ವಿದೇಶಕ್ಕೆ ತೆರಳುವಂತಿಲ್ಲ ಎಂದಷ್ಟೇ ಅಧಿಕಾರಿಗಳು ತಿಳಿಸಿದರು. ಆದರೆ ಇದಕ್ಕೆ ಕಾರಣವನ್ನು ತಿಳಿಸಲಿಲ್ಲʼʼ ಎಂದು ಸನಾ ಇರ್ಷಾದ್ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಪೊಲೀಸ್ ಅಧಿಕಾರಿಗಳು ಸನಾ ಇರ್ಷಾದ್ ಮೇಲೆ ನಿರ್ಬಂಧ ವಿಧಿಸಿರುವುದನ್ನು ಖಚಿತಪಡಿಸಿದ್ದಾರೆ.
ಕಾಶ್ಮೀರದ ಅನೇಕ ಪತ್ರಕರ್ತರು, ಲೇಖಕರು ಮತ್ತು ಚಿಂತಕರ ಮೇಲೆ ಈ ರೀತಿಯ ನಿರ್ಬಂಧ ಹೇರಲಾಗಿದೆ.
ಇದನ್ನೂ ಓದಿ| ನೂಪುರ್ ಶರ್ಮಾಗೆ ಸುಪ್ರೀಂ ತಪರಾಕಿ: ನಾಲಿಗೆ ಹರಿಬಿಡುವವರಿಗೆ ಕಪಾಳಮೋಕ್ಷ