Site icon Vistara News

ಪುಲ್ವಾಮಾದಲ್ಲಿ ಉಗ್ರರ ಗುಂಡಿಗೆ ಪೊಲೀಸ್‌ ಅಧಿಕಾರಿ ಬಲಿ; ರಾತ್ರಿ ಹೊಲದಲ್ಲಿ ನಡೆಯಿತು ದಾಳಿ

Pulwama Terror Attack

ಪುಲ್ವಾಮಾ: ಜಮ್ಮು-ಕಾಶ್ಮೀರದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರನ್ನು ಉಗ್ರರು ಹತ್ಯೆ ಮಾಡಿದ್ದಾರೆ. ಪುಲ್ವಾಮಾದ ಪಾಂಪೋರ್‌ನಲ್ಲಿರುವ ಸಂಬೂರಾ ಎಂಬಲ್ಲಿನ ಭತ್ತದ ಗದ್ದೆಯಲ್ಲಿ ಇವರ ಮೃತದೇಹ (Pulwama Terror Attack) ಸಿಕ್ಕಿದೆ. ಮೃತ ಸಬ್‌ ಇನ್ಸ್‌ಪೆಕ್ಟರ್‌ನ್ನು ಫಾರೂಕ್‌ ಅಹ್ಮದ್‌ ಮಿರ್‌ ಎಂದು ಗುರುತಿಸಲಾಗಿದ್ದು, ಶುಕ್ರವಾರ ಮಧ್ಯರಾತ್ರಿ ಹೊತ್ತಿನಲ್ಲಿ ಉಗ್ರರು ದಾಳಿ ಮಾಡಿದ್ದಾರೆ ಎಂದು ವರದಿಯಾಗಿದೆ. ಹೀಗೆ ಪೊಲೀಸ್‌ ಅಧಿಕಾರಿಗಳು ಉಗ್ರರಿಂದ ಹತ್ಯೆಯಾಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಪೊಲೀಸ್‌ ಅಧಿಕಾರಿಯೊಬ್ಬರನ್ನು ಅವರ ಮಗಳೊಂದಿಗೆ ಇದ್ದಾಗಲೇ ಗುಂಡು ಹಾರಿಸಿ ಕೊಲ್ಲಲಾಗಿತ್ತು.

ಫಾರೂಕ್‌ ಅಹ್ಮದ್‌ ಮಿರ್‌ ಅವರು ಸಿಟಿಸಿ ಲೆತ್ಪೋರಾದ ಐಆರ್‌ಪಿ 23 ಬೆಟಾಲಿನ್‌ನ ಸಬ್‌ ಇನ್ಸ್‌ಪೆಕ್ಟರ್‌. ಇವರು ಶುಕ್ರವಾರ ಕೆಲಸದಿಂದ ವಾಪಸ್‌ ಮನೆಗೆ ಬಂದು ಮತ್ತೆ ಸಾಯಂಕಾಲದ ವೇಳೆಗೆ ಮನೆಯಿಂದ ಹೊಲಕ್ಕೆ ಹೋಗಿದ್ದರು. ಆದರೆ ಮಧ್ಯರಾತ್ರಿ ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಕುಲಗಾಂವ್‌ನಲ್ಲಿ ಭದ್ರತಾ ಪಡೆಗಳು ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿದ್ದವು. ಹಿಜ್ಬುಲ್‌ ಮುಜಾಹಿದ್ದೀನ್‌ ಸಂಘಟನೆಯ ಮೂವರು ಭಯೋತ್ಪಾದಕರನ್ನು ಹತ್ಯೆಗೈದಿದ್ದರು. ಮೇ 31ರಂದು ಕುಲಗಾಂವ್‌ನ ಗೋಪಾಲ್‌ಪೋರಾದಲ್ಲಿ ಹಿಂದು ಶಿಕ್ಷಕಿ ರಾಜನಿ ಬಾಲಾ ಎಂಬುವರು ಉಗ್ರರ ಗುಂಡಿಗೆ ಬಲಿಯಾಗಿದ್ದರು. ಅವರ ಹತ್ಯೆ ಮಾಡಿದ್ದವರಲ್ಲಿ ಒಬ್ಬನಾಗಿದ್ದ ಭಯೋತ್ಪಾದಕನೂ ಈ ಎನ್‌ಕೌಂಟರ್‌ನಲ್ಲಿ ಕೊಲೆಯಾಗಿದ್ದ.

ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕುಲಗಾಂವ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಹಿಂದು ಶಿಕ್ಷಕಿ ಬಲಿ

Exit mobile version