ಪುಣೆ: 24 ವರ್ಷದ ಯುವಕನೊಬ್ಬ ಎಮ್ಮೆ ಕರುವಿನ (Buffalo Calf) ಮೇಲೆ ಅತ್ಯಾಚಾರ (Sexual Assault) ನಡೆಸಿದ ಘಟನೆ ವರದಿಯಾಗಿದೆ. ಪುಣೆಯ ಚಿಕಾಲಿ (Pune Chikhali) ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವಕ ನಿರಂತರವಾಗಿ ಎಮ್ಮೆ ಕರುವಿನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ಯುವಕನ ವಿರುದ್ಧ ಎಫ್ಐಆರ್ (FIR Registered) ಕೂಡ ದಾಖಲಾಗಿದೆ(Pune Shocker).
ಪುಣೆಯ ಚಿಕಾಲಿಯ ಜಾಧವವಾಡಿ ಪ್ರದೇಶದಲ್ಲಿ ಆಗಸ್ಟ್ 18 ಮತ್ತು ಅಕ್ಟೋಬರ್ 2 ರ ನಡುವೆ ಆರೋಪಿ ಯುವಕ ಎಮ್ಮೆಯ ಕರುವಿನ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ. ಮಾಲೀಕರು ಕರುವಿನ ಕಾಲುಗಳನ್ನು ಕಟ್ಟಿದ್ದನ್ನು ಗಮನಿಸಿದ್ದಾರೆ. ಕೂಡಲೇ ವೈದ್ಯಕೀಯ ಚಿಕಿತ್ಸೆಗೊಳಪಡಿಸಿದಾಗ ಇಡೀ ವಿಷಯ ಗೊತ್ತಾಗಿದೆ. ಬಳಿಕ ಆರೋಪಿ ವಿರುದ್ಧ ಪುಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬಂಧಿತ ಆರೋಪಿ ಹೆಸರು ರಾಮಕಿಶನ್ ಚೌಹಣ್. 24 ವರ್ಷದ ಈತ ಉತ್ತರ ಪ್ರದೇಶದ ಮಹಾರಾಜಗಂಜ್ ಮೂಲದವನು. ಸದ್ಯ ಪುಣೆಯ ಚಿಕಾಲಿ ಪ್ರದೇಶದಲ್ಲಿ ವಾಸವಾಗಿದ್ದಾನೆ. ಸ್ಥಳೀಯರು ಸಲ್ಲಿಸಿದ ಸಾಕ್ಷ್ಯದ ಆಧಾರದ ಮೇಲೆ ಯುವಕನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ನಿಬಂಧನೆಗಳು ಮತ್ತು ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಚಿಕಾಲಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ದ್ಯಾನೇಶ್ವರ ಕಾಟ್ಕರ್ ಅವರು ತಿಳಿಸಿದ್ದಾರೆ.
ಮುಂಜಾಗೃತ ಕ್ರಮವಾಗಿ ಎಮ್ಮೆ ಮಾಲೀಕರು ಶೆಲ್ಟರ್ನಲ್ಲಿ ಸಿಸಿಟಿವಿ ಅಳವಡಿಸಿದ್ದರು. ಇಷ್ಟಾಗಿಯೂ ಆರೋಪಿ ಲೈಟ್ಸ್ ಆಫ್ ಮಾಡಿ, ಕುರವಿನ ಮೇಲೆ ಅತ್ಯಾಚಾರ ನಡೆಸುತ್ತಿದ್ದ. ಲೈಟ್ಸ್ ಆಫ್ ಆಗುತ್ತಿದ್ದರಿಂದ ಅನುಮಾನಗೊಂಡು ಮಾಲೀಕರು ಬಂದು ನೋಡಿದಾಗ ಎಮ್ಮೆ ಕರುವ ನರಳಾಡುತ್ತಿರುವುದನ್ನು ಕಂಡಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದಾಗ, ಯುವಕ ಎಮ್ಮೆ ಕರುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಗೊತ್ತಾಗಿದೆ. ಆತ, ಸಿಸಿಟಿವಿ ಉಪಕರಣಗಳನ್ನು ಕೂಡ ಹಾನಿ ಮಾಡಿದ್ದಾನೆ. ಹಾಗಿದ್ದಾಗ್ಯೂ, ರೆಕಾರ್ಡ್ ಆದ ದೃಶ್ಯಗಳು ಮಾಲೀಕರ ಬಳಿಕ ಸುರಕ್ಷಿತವಾಗಿವೆ. ಆರೋಪಿ ಈಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ರಾಯಚೂರು ಜಿಲ್ಲೆಯಲ್ಲಿ ಇಂಥದ್ದೇ ಲೈಂಗಿಕ ದೌರ್ಜನ್ಯ ನಡೆದಿತ್ತು
2023ರ ಜನವರಿಯಲ್ಲಿ ಕರ್ನಾಟಕದ ರಾಯಚೂರ ಜಿಲ್ಲೆಯಲ್ಲೂ ಇಂಥದ್ದೇ ಅಸಹಜ ಲೈಂಗಿಕಕ್ರಿಯೆ ನಡೆಸಿದ ಘಟನೆ ನಡೆದಿತ್ತು. ಕೊಟ್ಟಿಗೆಯಲ್ಲಿ ಮಲಗಿದ್ದ ಆಕಳ ಕರುವಿನ ಮೇಲೆಯೇ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಅತ್ಯಂತ ಅಮಾನುಷ, ಅಮಾನವೀಯ ಘಟನೆ ರಾಯಚೂರಿನ ಲಿಂಗಸಗೂರು ಗ್ರಾಮದಲ್ಲಿ ವರದಿಯಾಗಿತ್ತು. ಗೋವುಗಳ ಮಾಲೀಕನ ಕೈಗೇ ನೇರವಾಗಿ ಸಿಕ್ಕಬಿದ್ದಿದ್ದಾನೆ. ಈ ಹಿಂದೆ ಈತ ಎಷ್ಟು ಬಾರಿ ಈ ರೀತಿ ವಿಕೃತಿ ಮೆರೆದಿದ್ದಾನೆ. ಈ ರೀತಿ ನಿಸರ್ಗ ವಿರೋಧಿಯಾಗಿ, ಮಾನವ ವಿರೋಧಿ ನಡವಳಿಕೆಯನ್ನು ಪ್ರದರ್ಶಿಸಿದವನು ಇಮ್ತಿಯಾಜ್ (೨೪) ಎಂಬ ವಿಕೃತ ಕಾಮುಕ.
ಈ ಸುದ್ದಿಯನ್ನೂ ಓದಿ: Physical Abuse: 4 ವರ್ಷದ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕ; ವಿಕೃತ ಕಾಮಿಯ ಸೆರೆ
ಲಿಂಗಸಗೂರು ಗ್ರಾಮದ ಅಮರೇಶ (೨೨) ಎಂಬವರಿಗೆ ಗ್ರಾಮದ ಅಮೀನ ದರ್ಗಾದ ಪಕ್ಕದಲ್ಲಿ ಹೊಲವಿದೆ. ಅಮರೇಶ ಅವರು ತಮ್ಮ ಹೊಲದಲ್ಲೇ ಒಂದು ಕೊಟ್ಟಿಗೆಯನ್ನು ಕಟ್ಟಿಕೊಂಡು ಅಲ್ಲಿ ಏಳೆಂಟು ದನವನ್ನು ಸಾಕುತ್ತಿದ್ದರು. ಅವರು ಬಹುತೇಕ ಇಡೀ ದಿನ ಅಲ್ಲೇ ಇರುತ್ತಿದ್ದು, ಊಟ ಮತ್ತು ಸ್ನಾನ ಶೌಚಾದಿಗಳಿಗಷ್ಟೇ ಮನೆಗೆ ಹೋಗುತ್ತಿದ್ದರು. ರಾತ್ರಿ ಕೂಡಾ ಅಲ್ಲೇ ಮಲಗುತ್ತಿದ್ದರು. ಡಿಸೆಂಬರ್ ೩೧ರ ರಾತ್ರಿಯೂ ಅಲ್ಲೇ ಮಲಗಿದ್ದ ಅಮರೇಶ ಅವರು ಬೆಳಗ್ಗಿನ ಜಾವ ದನಗಳಿಗೆ ಆಹಾರ ನೀಡಿ, ಸ್ನಾನ ಮತ್ತು ತಿಂಡಿ ಮಾಡಿಕೊಂಡಿಕೊಂಡು ಬರಲೆಂದು ಮನೆಗೆ ತೆರಳಿದ್ದರು. ಹಾಗೆ ತೆರಳಿದವರು ಬೆಳಗ್ಗೆ ೭.೩೦ರ ಹೊತ್ತಿಗೆ ಮರಳಿ ಬಂದಿದ್ದಾರೆ.
ಬಂದು ನೋಡುವ ವೇಳೆ ಇಮ್ತಿಯಾಜ್ ಒಂದು ಆಕಳ ಕರುವನ್ನು ನೆಲಕ್ಕೆ ಕೆಡವಿ ಅದರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿರುವುದು ಕಂಡುಬಂತು. ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ಸ್ಥಿತಿಯಲ್ಲೇ ಅದರ ಕೈ ಕಾಲುಗಳನ್ನೂ ಕಟ್ಟಿ ಹಾಕಿದ ದೌರ್ಜನ್ಯ ನಡೆಸುತ್ತಿರುವುದು ಕಂಡಿತು. ಇಮ್ತಿಯಾಜ್ ನ ಪೈಶಾಚಿಕ ಕೃತ್ಯ ಕಣ್ಣಾರೆ ಕಂಡ ಅಮರೇಶ ಕೂಡಲೇ ಆತನನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ನೀಡಿದ್ದಾರೆ. ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿದೆ. ಸೆಕ್ಷನ್ 377ರ ಅಡಿ ಅನೈಸರ್ಗಿಕ ಲೈಂಗಿಕ ಸಂಬಂಧದ ಕಾಲಂನಡಿಯಲ್ಲಿ ಇಮ್ತಿಯಾಜ್ ಮೇಲೆ ಪ್ರಕರಣ ದಾಖಲಾಗಿದೆ. ರಿಕ್ಷಾ ಚಾಲಕನಾಗಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.