Site icon Vistara News

Congress MLA: ಡ್ರಗ್ಸ್‌ ಕೇಸ್;‌ ಕಾಂಗ್ರೆಸ್‌ ಶಾಸಕ ಸುಖಪಾಲ್‌ ಖೈರಾ ಬಂಧನ, ಭಾರಿ ಹೈಡ್ರಾಮಾ

Punjab Congress MLA Sukhpal Khaira

Punjab Congress MLA Sukhpal Khaira Arrested In 2015 Drug Case

ಚಂಡೀಗಢ: ಪಂಜಾಬ್‌ನಲ್ಲಿ ಕಾಂಗ್ರೆಸ್‌ ಶಾಸಕ (Punjab Congress MLA) ಸುಖಪಾಲ್‌ ಸಿಂಗ್ ಖೈರಾ (Sukhpal Khaira) ಅವರಿಗೆ ಸಂಕಷ್ಟ ಎದುರಾಗಿದೆ. 2015ರ ಡ್ರಗ್ಸ್‌ ಪ್ರಕರಣಕ್ಕೆ (Drug Case) ಸಂಬಂಧಿಸಿದಂತೆ ಸುಖಪಾಲ್‌ ಖೈರಾ ಅವರನ್ನು ಪಂಜಾಬ್‌ ಪೊಲೀಸರು ಬಂಧಿಸಿದ್ದಾರೆ.

ನಾರ್ಕೊಟಿಕ್ಸ್‌ ಡ್ರಗ್ಸ್‌ ಆ್ಯಂಡ್‌ ಸೈಕೋಟ್ರಾಪಿಕ್‌ ಸಬ್‌ಸ್ಟನ್ಸಸ್‌ ಆ್ಯಕ್ಟ್‌ (NDPS) ಅಡಿಯಲ್ಲಿ ಸುಖಪಾಲ್‌ ಖೈರಾ ಅವರನ್ನು ಜಲಾಲಬಾದ್‌ ಪೊಲೀಸರು ಗುರುವಾರ ಬೆಳಗ್ಗೆ (ಸೆಪ್ಟೆಂಬರ್‌ 28) 6.30ರ ಸುಮಾರಿಗೆ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬಂಧನದ ವೇಳೆ ಹೈಡ್ರಾಮಾ

ಚಂಡೀಗಢದಲ್ಲಿರುವ ನಿವಾಸದಲ್ಲಿ ಪೊಲೀಸರು ಸುಖಪಾಲ್‌ ಖೈರಾ ಅವರನ್ನು ಬಂಧಿಸುವ ವೇಳೆ ಹೈಡ್ರಾಮಾ ನಡೆದಿದೆ. ಬಂಧನಕ್ಕೂ ಮೊದಲು ಸುಖಪಾಲ್‌ ಖೈರಾ ಅವರು ಪೊಲೀಸರ ಜತೆ ವಾಗ್ವಾದ ನಡೆಸಿದ್ದಾರೆ. ಹಾಗೆಯೇ, ಬಂಧನದ ಘಟನೆಯನ್ನು ಫೇಸ್‌ಬುಕ್‌ ಲೈವ್ ಮೂಲಕ ಜನರಿಗೆ ತೋರಿಸಿದ್ದಾರೆ. ಅಕ್ರಮವಾಗಿ ಮಾದಕವಸ್ತು ಸಾಗಣೆ ಪ್ರಕರಣದಲ್ಲಿ ಸುಖಪಾಲ್‌ ಖೈರಾ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಗೋಡ್ಸೆ ಆರಾಧಕ ಮೋದಿ ಎಂದ ಗುಜರಾತ್‌ ಶಾಸಕನ ಬಂಧನ: ಅಸ್ಸಾಂ ಪೊಲೀಸರಿಂದ ಮೇವಾನಿ ವಶಕ್ಕೆ

2021ರಲ್ಲೂ ಬಂಧನ ಆಗಿತ್ತು

ಸುಖಪಾಲ್‌ ಸಿಂಗ್‌ ಖೈರಾ ಅವರನ್ನು 2021ರಲ್ಲೂ ಬಂಧಿಸಲಾಗಿತ್ತು. ಅಕ್ರಮವಾಗಿ ಮಾದಕವಸ್ತು ಸಾಗಣೆ, ಮಾದಕವಸ್ತು ದಂಧೆ, ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸುಖಪಾಲ್‌ ಸಿಂಗ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ನಕಲಿ ಪಾಸ್‌ಪೋರ್ಟ್‌ ಪ್ರಕರಣವೂ ಸುಖಪಾಲ್‌ ಖೈರಾ ವಿರುದ್ಧ ಕೇಳಿಬಂದಿತ್ತು.

Exit mobile version