ನವದೆಹಲಿ: ಪಂಜಾಬ್‌ನಲ್ಲಿ (Punjab) ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ (Aam Aadmi Party Government) ಸರ್ಕಾರವು, ಕಳೆದ ಒಂದೂವರೆ ವರ್ಷದಲ್ಲಿ ಮಾಡಿದ ಸಾಲದ ಪೈಕಿ ಅರ್ಧದಷ್ಟು ಹಣವನ್ನು ಬಡ್ಡಿಯನ್ನು ನೀಡಲು ಬಳಸುತ್ತಿರುವುದಾಗಿ ಹೇಳಿದೆ(Interest Payment). ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ (Punjab Governor) ಅವರು ಸಾಲದ ಮಾಹಿತಿಯನ್ನು ನೀಡುವಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಕೋರಿದ್ದರು(CM Bhagwant Mann). ಇದಾದ ಮಾರನೇ ದಿನವಾಗಿ ಮೂರು ಪುಟಗಳ ಮಾಹಿತಿಯನ್ನು ನೀಡಿರುವ ಸಿಎಂ ಭಗವಂತ್ ಮಾನ್ ಅವರು, ಕಳೆದ ಒಂದೂವರೆ ವರ್ಷದಲ್ಲಿ ಪಂಜಾಬ್ ಸರ್ಕಾರವು 47,107.6 ಕೋಟಿ ರೂ. ಸಾಲ ಮಾಡಿದೆ. ಈ ಪೈಕಿ ಅರ್ಧದಷ್ಟು ಹಣವನ್ನು ಬಡ್ಡಿ ಪಾವತಿಸಲು ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.
2022 ಏಪ್ರಿಲ್ 1ರಿಂದ 2023ರ ಆಗಸ್ಟ್ 31ರ ವರೆಗೆ ಪಂಜಾಬ್ ಸರ್ಕಾರವು 47,107 ಕೋಟಿ ರೂಪಾಯಿಯನ್ನು ಸಾಲ ಮಾಡಿದೆ. ಈ ಮೊತ್ತವು, ಮಾರುಕಟ್ಟೆ ಸಾಲ ಮಾತ್ರವಲ್ಲದೇ, ಭಾರತ ಸರ್ಕಾರದಿಂದ ಅನುಮತಿಸಲಾದ ಬಾಹ್ಯ ನೆರವಿನ ಯೋಜನೆಯ ಸಾಲಗಳು ಮತ್ತು ಬಂಡವಾಳ ಸ್ವತ್ತುಗಳ ಸೃಷ್ಟಿಗೆ ವಿಶೇಷ ನೆರವಿನ ಅಡಿಯಲ್ಲಿ ನಬಾರ್ಡ್‌ನಿಂದ ದೀರ್ಘಾವಧಿಯ ಸಾಲ ಕೂಡ ಸೇರಿದೆ. ಒಟ್ಟು ಸಾಲದ ಪೈಕಿ 32,447 ಕೋಟಿ ರೂಪಾಯಿ 2022-23ರ ಹಣಕಾಸು ವರ್ಷದಲ್ಲಿ ಸಾಲವನ್ನು ತೆಗೆದುಕೊಂಡಿದ್ದರೆ, 14,660 ಕೋಟಿ ರೂಪಾಯಿಯನ್ನು ಪ್ರಸಕ್ತ ಸಾಲಿನ ಏಪ್ರಿಲ್ 1 ಮತ್ತು ಆಗಸ್ಟ್ 31ರ ನಡುವೆ ಸಾಲ ಪಡೆಯಲಾಗಿದೆ. ಒಟ್ಟು ಸಾಲದ ಪೈಕಿ 27016 ಕೋಟಿ ರೂಪಾಯಿಯನ್ನು ಸರಕಾರಿ ಸಾಲದ ಬಡ್ಡಿ ಪಾವತಿಗಾಗಿ ಬಳಸಲಾಗುತ್ತಿದೆ ಎಂದು ರಾಜ್ಯಪಾಲರಿಗ ಬರೆದ ಪತ್ರದಲ್ಲಿ ಸಿಎಂ ಭಗವಂತ್ ಮಾನ್ ಅವರು ತಿಳಿಸಿದ್ದಾರೆ.
ಪಂಜಾಬ್ ರಾಜ್ಯಪಾಲ ಪುರೋಹಿತ್ ಅವರು ಸೆಪ್ಟೆಂಬರ್ 21ರಂದು ಪತ್ರ ಬರೆದು, ತನ್ನ ಅವಧಿಯಲ್ಲಿ ಆಪ್ ಮಾಡಿರುವ 50 ಸಾವಿರ ಕೋಟಿ ರೂ. ಸಾಲದ ಬಳಕೆಯ ಮಾಹಿತಿ ನೀಡುವಂತೆ ಕೋರಿದ್ದರು. ನಿಮ್ಮ ಆಡಳಿತದಲ್ಲಿ ಪಂಜಾಬ್ ಸಾಲದ ಮೊತ್ತವು 50 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಈ ಬೃಹತ್ ಮೊತ್ತ ಸಾಲದ ಬಳಕೆಯ ವಿವರಗಳನ್ನು ನನಗೆ ಒದಗಿಸಬಹುದು. ಇದರಿಂದ ಹಣವನ್ನು ಸರಿಯಾಗಿ ಬಳಸಲಾಗಿದೆ ಎಂದು ನಾನು ಪ್ರಧಾನಿಗೆ ಮನವರಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು.
ಈ ಸುದ್ದಿಯನ್ನೂ ಓದಿ: Punjab CM | ದಿನಗೂಲಿ ಹೆಚ್ಚಳಕ್ಕೆ ಆಗ್ರಹಿಸಿ ಪಂಜಾಬ್ ಸಿಎಂ ಭಗವಂತ್ ಮಾನ್ ಮನೆಗೆ ದಲಿತ ಕೃಷಿ ಕಾರ್ಮಿಕರ ಮುತ್ತಿಗೆ
ಆಪ್ ಸರ್ಕಾರವು ಬೃಹತ್ ಮೊತ್ತದ ಹಣ ಬಳಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡಿಲ್ಲ ಮತ್ತು ಬೇಜವಾಬ್ದಾರಿಯಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ವಿಶೇಷವಾಗಿ ಕಾಂಗ್ರೆಸ್ ಪಕ್ಷವು ಆಪ್ ವಿರುದ್ಧ ಟೀಕೆ ಮಾಡಿತ್ತು. 2021-22ರ ಮುಕ್ತಾಯದ ಹೊತ್ತಿಗೆ ಪಂಜಾಬ್ ಸರ್ಕಾರವು 2.82 ಕೋಟಿ ರೂ. ಸಾಲ ಮಾಡಿತ್ತು. ಆ ಸಾಲದ ಮೊತ್ತವು 2022-23ರ ಹೊತ್ತಿಗೆ 3.12 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ದೇಶದ ಅತಿ ಹೆಚ್ಚು ಸಾಲ ಮಾಡಿದ ರಾಜ್ಯಗಳ ಪಟ್ಟಿಯಲ್ಲಿ ಪಂಜಾಬ್ ಕೂಡ ಒಂದಾಗಿದೆ.