ಚಂಡೀಗಢ: ಭ್ರಷ್ಟಾಚಾರ ಆರೋಪದ ಕುರಿತು ಕಳೆದ ನಾಲ್ಕು ತಿಂಗಳಿಂದ ಆರೋಪ ಕೇಳಿ ಬಂದಿದ್ದರೂ ಕ್ಯಾರೆ ಎನ್ನದ ಪಂಜಾಬ್ ತೋಟಗಾರಿಕೆ, ಆಹಾರ ಸಂಸ್ಕರಣೆ ಹಾಗೂ ರಕ್ಷಣಾ ಸೇವೆಗಳ ಕಲ್ಯಾಣ ಸಚಿವ ಫೌಜಾ ಸಿಂಗ್ ಸರಾರಿ (Punjab Minister Resigns) ಕೊನೆಗೂ ರಾಜೀನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಫೌಜಾ ಸಿಂಗ್ ಸರಾರಿ ರಾಜೀನಾಮೆ ಪತ್ರ ರವಾನಿಸಿದ್ದು, ಮಾನ್ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ. ಪಟಿಯಾಲ ಗ್ರಾಮೀಣ ಶಾಸಕ ಡಾ.ಬಲಬೀರ್ ಸಿಂಗ್ ಅವರಿಗೆ ಸರಾರಿ ಖಾತೆಗಳ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಅಧಿಕಾರಿಗಳನ್ನು ಬಳಸಿ ಗುತ್ತಿಗೆದಾರರಿಂದ ಹಣ ಸುಲಿಗೆ ಕುರಿತು ಫೌಜಾ ಸಿಂಗ್ ಸರಾರಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಕ್ಲಿಪ್‌ಅನ್ನು ಪ್ರತಿಪಕ್ಷಗಳು ನಾಲ್ಕು ತಿಂಗಳ ಹಿಂದೆಯೇ ಬಿಡುಗಡೆ ಮಾಡಿದ್ದವು. ಹಾಗೆಯೇ, ಸರಾರಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಲೇ ಬಂದಿದ್ದವು.
ಇದನ್ನೂ ಓದಿ | ಹರಿಯಾಣ ಕ್ರೀಡಾ ಸಚಿವ ಸಂದೀಪ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲು; ಮಹಿಳಾ ಕೋಚ್ರಿಂದ ದೂರು