Site icon Vistara News

Punjab MMS Scandal | ಎಸ್ಐಟಿ ರಚನೆ, ಮೂವರ ಬಂಧನ: ಪ್ರತಿಭಟನೆ ಕೈ ಬಿಟ್ಟ ವಿದ್ಯಾರ್ಥಿಗಳು

Chandigarh Universtiy

ಚಂಡೀಗಢ: ಇಲ್ಲಿನ ಚಂಡೀಗಡ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಗಳ ಖಾಸಗಿ ವಿಡಿಯೋ (Punjab MMS Scandal) ಸೋರಿಕೆಯಾದ ಪ್ರಕರಣದ ತನಿಖೆಗೆ ಪಂಜಾಬ್ ಸರ್ಕಾರವು ಮಹಿಳಾ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ಮೂವರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಏತನ್ಮಧ್ಯೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ ಮೂರಕ್ಕೇರಿದೆ.

ಚಂಡೀಗಢ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರ ಖಾಸಗಿ ದೃಶ್ಯಗಳಿರುವ ವಿಡಿಯೋಗಳು ಲೀಕ್ ಆಗಿದ್ದವು. ಇದನ್ನು ಖಂಡಿಸಿ ವಿವಿ ವಿದ್ಯಾರ್ಥಿಗಳು ಭಾನುವಾರ ಭಾರೀ ಪ್ರತಿಭಟನೆ ನಡೆಸಿದ್ದರು. ಮಹಿಳಾ ಎಸ್ಐಟಿ ತಂಡದ ನೇತೃತ್ವವನ್ನು ಹಿರಿಯ ಐಪಿಎಸ್ ಅಧಿಕಾರಿ ಗುರುಪ್ರೀತ್ ಕೌರ್ ದೇವ್ ಅವರು ವಹಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಒಬ್ಬ ವಿದ್ಯಾರ್ಥಿ ಮತ್ತು ಇತರ ಇಬ್ಬರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿ ಇದ್ದ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ವಶಪಡಿಸಿಕೊಂಡು, ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ.

6 ದಿನಗಳ ಕಾಲ ತರಗತಿ ಇಲ್ಲ
ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಚಂಡೀಗಢ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಆರು ದಿನಗಳ ಕಾಲ ತರಗತಿಗಳನ್ನು ರದ್ದು ಮಾಡಿದೆ. ಮತ್ತೊಂದೆಡೆ, ಆಡಳಿತ ಮಂಡಳಿಯು ವಿದ್ಯಾರ್ಥಿಗಳು ಇಟ್ಟಿದ್ದ ಬೇಡಿಕೆಯನ್ನು ಈಡೇರಿಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ, ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ವಿದ್ಯಾರ್ಥಿಗಳ ಬೇಡಿಕೆಯಂತೆ ಆಡಳಿತ ಮಂಡಳಿಯು, ಹಾಸ್ಟೆಲ್‌ನ ಇಬ್ಬರು ವಾರ್ಡನ್‌ಗಳನ್ನು ಸಸ್ಪೆಂಡ್ ಮಾಡಿದೆ. ಉಳಿದ ಎಲ್ಲ ಹಾಸ್ಟೆಲ್ ವಾರ್ಡನ್‌ಗಳನ್ನು ಟ್ರಾನ್ಸ್‌ಫರ್ ಮಾಡಲಾಗಿದೆ. ಜತೆಗೆ, ಹಾಸ್ಟೆಲ್ ಟೈಮ್ಸಿಂಗ್ ಕೂಡ ಚೇಂಜ್ ಮಾಡಲಾಗಿದೆ.

ಯಾಕೆ ಪ್ರತಿಭಟನೆ?
ಚಂಡೀಗಢ ವಿವಿಯ ಹಾಸ್ಟೆಲ್‌ನಲ್ಲಿರುವ ಅನೇಕ ವಿದ್ಯಾರ್ಥಿನಿಯರ ಖಾಸಗಿ ಮತ್ತು ಆಕ್ಷೇಪಾರ್ಹ ದೃಶ್ಯಗಳಿರುವ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಶನಿವಾರ ಮಧ್ಯೆ ರಾತ್ರಿ ಸೋರಿಕೆಯಾಯಿತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಭಾನುವಾರ ಪೂರ್ತಿ ದಿನ ಪ್ರತಿಭಟನೆ ನಡೆಸಿದ್ದರು. 60 ವಿದ್ಯಾರ್ಥಿನಿಯರ ಸ್ನಾದ ದೃಶ್ಯಗಳನ್ನು ಸೋರಿಕೆ ಮಾಡಲಾಗಿತ್ತು.

ಇದನ್ನೂ ಓದಿ | Punjab protest | ಚಂಡೀಗಢ ವಿವಿಯಲ್ಲಿ 60 ಹುಡುಗಿಯರ ವಿಡಿಯೊ ಲೀಕ್‌, ವ್ಯಾಪಕ ಪ್ರತಿಭಟನೆ

Exit mobile version