Site icon Vistara News

QR Code : ಅಲರ್ಟ್​ ಪ್ಲೀಸ್​; ಕ್ಯೂಆರ್​ ಕೋಡ್​ ಕಳಿಸಿ ಹೇಗೆಲ್ಲ ಮೋಸ ಮಾಡ್ತಾರೆ ನೋಡಿ!

QR Code

ಬೆಂಗಳೂರು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್​​ನ 30 ವರ್ಷದ ಪ್ರೊಫೆಸರ್ ಇತ್ತೀಚೆಗೆ ಆನ್​ಲೈನ್​ ಫ್ಲ್ಯಾಟ್​ಫಾರಂ ಮೂಲಕ ವಾಷಿಂಗ್ ಮೆಷಿನ್ ಮಾರಾಟ ಮಾಡಲು ಪ್ರಯತ್ನಿಸುವಾಗ ಕ್ಯೂಆರ್​ ಕೋಡ್​ (QR Code) ಮೋಸವೊಂದಕ್ಕೆ (QR Code Scam) ಬಲಿಯಾಗಿದ್ದಾರೆ. ಅವರು ಸಂಭಾವ್ಯ ಖರೀದಿದಾರರಿಂದ ಒಟಿಪಿ (OTP) ಸಂದೇಶವೊಂದನ್ನು ಪಡೆದುಕೊಂಡಿದ್ದರು. ಅವರು ಯಾವುದೇ ಮಾತುಕತೆಯಿಲ್ಲದೆ ಪ್ರಸ್ತಾಪಿತ ಬೆಲೆಗೆ ಒಪ್ಪಿಕೊಂಡಿದ್ದರು. ಪಾವತಿ ಪ್ರಕ್ರಿಯೆ ವೇಳೆ ಖರೀದಿದಾರ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಪ್ರೊಪೆಸರ್​ಗೆ ವಿನಂತಿಸಿದ್ದರು. ಹಾಗೆ ಮಾಡುವುದರಿಂದ ನಿಮ್ಮ ಖಾತೆಗೆ ಹಣ ಹಾಕಲು ಸುಲಭ ಎಂದು ಹೇಳಿದ್ದರು. ಆದರೆ, ಪ್ರೊಫೆಸರ್ ಸ್ಕ್ಯಾನ್ ಮಾಡಿದ ತಕ್ಷಣ ಅವರ ಖಾತೆಯಿಂದಲೇ 65 ಸಾವಿರ ರೂಪಾಯಿ ಎಗರಿ ಹೋಗಿತ್ತು!

ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ, 30 ವರ್ಷದ ಗೃಹಿಣಿಯೊಬ್ಬರು ತಮ್ಮ ವೀಣೆಯ ಚಿತ್ರವನ್ನು ಅದೇ ಆನ್ಲೈನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದರು. ಅವರೂ ಕ್ಯೂಆರ್​ ಕೋಡ್ ಸ್ಕ್ಯಾನ್​ ಮಾಡಲು ಹೋಗಿ 20,000 ರೂಪಾಯಿ ಕಳೆದುಕೊಂಡಿದ್ದರು. ಖರೀದಿದಾರನಂತೆ ನಟಿಸಿದ ಕರೆ ಮಾಡಿದವನು ಮಹಿಳೆಯ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡು ಅವಳ ಮೊಬೈಲ್ ಫೋನ್​ಗೆ ಲಿಂಕ್ ಅನ್ನು ರವಾನಿಸಿದ್ದ. ಅವರು ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಹಣವನ್ನು ಕೆಲವೇ ಸೆಕೆಂಡುಗಳಲ್ಲಿ ಅವರ ಬ್ಯಾಂಕ್​ನಿಂದ ಖಾಲಿಯಾಗಿತ್ತು.

ಕಳೆದ ಕೆಲವು ತಿಂಗಳುಗಳಲ್ಲಿ ಕ್ಯೂಆರ್ ಕೋಡ್ ಹಗರಣಗಳಲ್ಲಿ ವರದಿಯಾದ ನೂರಾರು ಪ್ರಕರಣಗಳಲ್ಲಿ ಇವು ಎರಡು ಉತ್ತಮ ಉದಾಹರಣೆಗಳು. ಯುಪಿಐ ಮತ್ತು ಡಿಜಿಟಲ್ ವಹಿವಾಟು ವಿಧಾನಗಳು ಪಾವತಿಗಳನ್ನು ಹಿಂದೆಂದಿಗಿಂತಲೂ ಸುಲಭಗೊಳಿಸಿವೆ. ಆದಾಗ್ಯೂ, ಈ ಅನುಕೂಲವು ವಂಚಕರಿಗೆ ನೆರವಾಗಿದೆ. ಕ್ಯೂಆರ್ ಕೋಡ್ ಕಳುಹಿಸಿ ವಂಚನೆ ಮಾಡುವುದು ದಿನದಿಂದ ದಿನಕ್ಕೆ ಹೆಚ್ಚಾಗಿದೆ.

ಹೇಗೆ ಇದು ವಂಚನೆ?

ಕ್ಯೂಆರ್ ಕೋಡ್ ಹಗರಣದಲ್ಲಿ, ವಂಚಕನು ಸಂತ್ರಸ್ತರಿಗೆ ಕ್ಯೂಆರ್ ಕೋಡ್ ಅನ್ನು ಕಳುಹಿಸುತ್ತಾನೆ. ಅದು ಕಾನೂನುಬದ್ಧ ಪಾವತಿಯಂತೆ ತೋರುತ್ತದೆ. ಕ್ಯೂಆರ್ ಕೋಡ್ ಬಳಸಿ ಹಣವನ್ನು ವರ್ಗಾಯಿಸುತ್ತಿದ್ದೇವೆ ಎಂದು ಜನರನ್ನು ಮನವೊಲಿಸಲು ಪ್ರಯತ್ನಿಸುತ್ತಾರೆ. ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಅವರು ಸ್ವೀಕರಿಸಿದಾಗ ಅವರ ಖಾತೆಯಿಂದ ಹಣ ಹೋಗುತ್ತದೆ.

ಕ್ಯೂಆರ್ ಕೋಡ್​ಗಳನ್ನು ಸಾಮಾನ್ಯವಾಗಿ ಹಣವನ್ನು ಕಳುಹಿಸಲು ಬಳಸಲಾಗುತ್ತದೆ. ಅದನ್ನು ಸ್ವೀಕರಿಸಲು ಅಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಆದ್ದರಿಂದ, ಜನರು ಯಾರದ್ದಾದರೂ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಒಟಿಪಿ ನಮೂದಿಸಿದಾಗ ಹಣ ಹೋಗುತ್ತದೆ ಎಂದು ತಿಳಿದುಕೊಳ್ಳಬೇಕು.

ಈ ವಂಚಕರು ಬಳಸುವ ಸಾಮಾನ್ಯ ತಂತ್ರವಾದ ನಿರಂತರ ಕರೆಗಳೂ ಆಗಾಗ್ಗೆ ಜನರನ್ನು ಗೊಂದಲಗೊಳಿಸುತ್ತದೆ. ಹೀಗಾಗಿ ಅವರು ತಕ್ಷಣ ವಂಚಕರು ಹೇಳಿದಂತೆ ಕೇಳಿ ಮೋಸ ಹೋಗುತ್ತಾರೆ.

ಕ್ಯೂಆರ್ ಕೋಡ್ ಹಗರಣಗಳನ್ನು ತಡೆಗಟ್ಟುವುದು ಹೇಗೆ?

Exit mobile version