Site icon Vistara News

ಶೀಘ್ರ ಗುಜರಾತ್-ಮೇಘಾಲಯದ ತನಕ ಭಾರತ್ ಜೋಡೋ ಯಾತ್ರೆ! ಮಹಾರಾಷ್ಟ್ರದಲ್ಲೂ ಪ್ರತ್ಯೇಕ ಪಾದಯಾತ್ರೆ

Bharat Jodo Yatra By Rahul Gandhi

ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ (Kanyakumari to Srinagar) ಭಾರತ್ ಜೋಡೋ ಯಾತ್ರೆ (Bharat Jodo Yatra) ಯಶಸ್ವಿಯಾದ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ಎರಡನೇ ಹಂತದ ಭಾರತ್ ಜೋಡೋ ಯಾತ್ರೆಯನ್ನು ಗುಜರಾತ್‌ನಿಂದ ಮೇಘಾಲಯದವರೆಗೆ (Gujarat to Meghalaya) ಕೈಗೊಳ್ಳಲಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ (Maharashtra Congress Chief Nana Patole) ಮಂಗಳವಾರ ಹೇಳಿದ್ದಾರೆ. ಇದೇ ವೇಳೆ, ಮಹಾರಾಷ್ಟ್ರದಲ್ಲೂ ತಾವು ಪಾದಯಾತ್ರೆ ಮಾಡುವುದಾಗಿ ಪಟೋಲೆ ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಯಾತ್ರೆಗೆ ಸಿದ್ಧತೆ ನಡೆಸಿದ್ದು, ರಾಜ್ಯದ ಪ್ರತಿ ಲೋಕಸಭಾ ಸ್ಥಾನಕ್ಕೆ 48 ಪಕ್ಷದ ವೀಕ್ಷಕರನ್ನು ನೇಮಿಸಲಾಗಿದೆ ಎಂದು ಪಟೋಲೆ ಹೇಳಿದರು. ಈ ವೀಕ್ಷಕರು ಆರು ದಿನಗಳಲ್ಲಿ ಕ್ಷೇತ್ರಗಳ ಪರಿಸ್ಥಿತಿಯ ಬಗ್ಗೆ ವರದಿಯನ್ನು ಸಲ್ಲಿಸಲಿದ್ದು, ನಂತರ ಆಗಸ್ಟ್ 16 ರಂದು ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.

ಪೂರ್ವ ವಿದರ್ಭದಲ್ಲಿ ಪಟೋಲೆ ಯಾತ್ರೆಯನ್ನು ಮುನ್ನಡೆಸಲಿದ್ದಾರೆ, ಮುಂಬೈನಲ್ಲಿ ವರ್ಷ ಗಾಯಕ್ವಾಡ್, ಪಶ್ಚಿಮ ವಿದರ್ಭದಲ್ಲಿ ವಿಜಯ್ ವಾಡೆತ್ತಿವಾರ್, ಉತ್ತರ ಮಹಾರಾಷ್ಟ್ರದಲ್ಲಿ ಬಾಳಾಸಾಹೇಬ್ ಥೋರಟ್, ಮರಾಠವಾಡದಲ್ಲಿ ಅಶೋಕ್ ಚವಾಣ್ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ಪೃಥ್ವಿರಾಜ್ ಚವಾಣ್ ಅವರು ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಬಳಿಕ ಎಲ್ಲ ಮುಖಂಡರು ಒಟ್ಟಾಗಿ ಕೊಂಕಣಕ್ಕೆ ತೆರಳಲಿದ್ದಾರೆ. ಪಾದಯಾತ್ರೆಯ ನಂತರ ಯಾತ್ರಾ ಬಸ್ ಯಾತ್ರೆ ನಡೆಯಲಿದೆ ಎಂದು ನಾನಾ ಪಟೋಲೆ ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Rahul Gandhi: ರಾಹುಲ್ ಗಾಂಧಿಗೆ ದಿಲ್ಲಿಯ 12, ತುಘಲಕ್ ಲೇನ್ ಸರ್ಕಾರಿ ಬಂಗಲೆ ಮರು ಹಂಚಿಕೆ! ವಾಪಸ್ ಬರ್ತಾರಾ ರಾಗಾ?

ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರ ನಾಡಾದ ಗುಜರಾತ್‌ನಿಂದ ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವನ್ನು ಪ್ರಾರಂಭಿಸಲು ನಾವು ರಾಹುಲ್ ಗಾಂಧಿಗೆ ಆಹ್ವಾನವನ್ನು ನೀಡಿದ್ದೇವೆ. ಎರಡನೇ ಹಂತವು ರಾಜ್ಯದಿಂದ ಪ್ರಾರಂಭವಾಗಬೇಕು ಎಂದು ಗುಜರಾತ್ ವಿರೋಧ ಪಕ್ಷದ ನಾಯಕ ಅಮಿತ್ ಚಾವ್ಡಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಸುದ್ದಿ ಹೊರ ಬಿದ್ದ ಮಾರನೇ ದಿನವೇ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥರು ಕೂಡ ಎರಡನೇ ಹಂತದ ಭಾರತ್ ಜೋಡೋ ಯಾತ್ರೆ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version