Site icon Vistara News

Rahul Gandhi: 3 ವರ್ಷದ ಅವಧಿಗೆ ಸಾಮಾನ್ಯ ಪಾಸ್‌ಪೋರ್ಟ್‌ ಪಡೆಯಲು ರಾಹುಲ್ ಗಾಂಧಿಗೆ ಅನುಮತಿ ನೀಡಿದ ದಿಲ್ಲಿ ಕೋರ್ಟ್

Rahul Gandhi can get ordinary passport, Says Delhi Court

ನವದೆಹಲಿ: ಮೂರು ವರ್ಷಗಳ ಅವಧಿಗೆ ಸಾಮಾನ್ಯ ಪಾಸ್‌ಪೋರ್ಟ್‌ (Passport) ಪಡೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ದಿಲ್ಲಿ ಕೋರ್ಟ್ ಅನುಮತಿ ನೀಡಿದೆ. ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ರಾಜತಾಂತ್ರಿಕ ಪಾಸ್‌ಪೋರ್ಟ್ ಸೌಲಭ್ಯ ಕೂಡ ರದ್ದಾಗಿತ್ತು. ಈ ಹಿನ್ನೆಲೆಯಲ್ಲಿ 10 ವರ್ಷಗಳ ಕಾಲ ಸಾಮಾನ್ಯ ಪಾಸ್‌ಪೋರ್ಟ್‌ ಪಡೆಯಲು ಅನುಮತಿ ನೀಡುವಂತೆ ರಾಹುಲ್ ಗಾಂಧಿ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣ ವಿಚಾರಣೆ ನಡೆಸುತ್ತಿರುವ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಆದರೆ, ಖಾಸಗಿ ದೂರು ದಾಖಲಿಸಿರುವ ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ (Subramanian Swamy) ರಾಹುಲ್ ಗಾಂಧಿಗೆ ಪಾಸ್‌ಪೋರ್ಟ್ ನೀಡಲು ವಿರೋಧ ವ್ಯಕ್ತಪಡಸಿದ್ದರು.

ಈ ಕುರಿತು ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ ಅವರು, ನಿಮ್ಮ ಮನವಿಯನ್ನು ಭಾಗಶಃವಾಗಿ ಪರಿಗಣಿಸಿದ್ದೇನೆ. 10 ವರ್ಷಗಳ ಬದಲಿಗೆ ಮೂರು ವರ್ಷಕ್ಕೆ ಸಾಮಾನ್ಯ ಪಾಸ್‌ಪೋರ್ಟ್‌ ಪಡೆಯಲು ಅನುಮತಿ ನೀಡುತ್ತಿದ್ದೇನೆ ಎಂದು ರಾಹುಲ್ ಪರವಾಗಿ ಹಾಜರಾದ ವಕೀಲರಿಗೆ ಶುಕ್ರವಾರ ತಿಳಿಸಿದರು.

ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಹಣ ವರ್ಗಾವಣೆ ಮತ್ತು ಹಣ ದುರುಪಯೋಗವನ್ನು ಒಳಗೊಂಡ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಆರೋಪಿಯಾಗಿರುವುದರಿಂದ, ರಾಹುಲ್ ಗಾಂಧಿ ಅವರು ಪಾಸ್‌ಪೋರ್ಟ್‌ ಪಡೆಯಲು ನ್ಯಾಯಾಲಯವು ಅನುಮತಿ ನೀಡುವುದು ಅಗತ್ಯವಾಗಿತ್ತು.

ಇದನ್ನೂ ಓದಿ: ಪ್ರಧಾನಿ ಮೋದಿಗೂ ಮುನ್ನ ಯುಎಸ್​ಎ ಪ್ರವಾಸಕ್ಕೆ ಹೊರಟು ನಿಂತ ರಾಹುಲ್ ಗಾಂಧಿ; 10ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ರಾಹುಲ್ ಗಾಂಧಿ ಅವರು ಅನುಮತಿ ಕೋರಿ ಮನವಿ ಸಲ್ಲಿಸುತ್ತಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬಿಜೆಪಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ಕೋರ್ಟ್ ತಿಳಿಸಿತ್ತು. ಆದರೆ, ರಾಹುಲ್ ಗಾಂಧಿ ಅವರಿಗೆ ಪಾಸ್‌ಪೋರ್ಟ್ ಪಡೆಯಲು ಎನ್‌ಒಸಿ ನೀಡಲು ಸ್ವಾಮಿ ವಿರೋಧ ವ್ಯಕ್ತಡಿಸಿದ್ದರು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version