Site icon Vistara News

Rahul Gandhi : ತೋಡಾ ಬುಡಕಟ್ಟು ಸಮುದಾಯದ ಜನರೊಂದಿಗೆ ನರ್ತಿಸಿದ ರಾಹುಲ್ ಗಾಂಧಿ

Rahul Gandhi

ತಿರುವನಂತಪುರ: ತಮಿಳುನಾಡು ಮತ್ತು ಕೇರಳಗಳಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಊಟಿ ಬಳಿಯ ಮುತ್ತುನಾಡು ಗ್ರಾಮದಲ್ಲಿ ತೋಡಾ ಬುಡಕಟ್ಟು ಸಮುದಾಯದ ಜನರೊಂದಿಗೆ ಬುಡಕಟ್ಟು ನೃತ್ಯದಲ್ಲಿ ಮಾಡಿದರು. ಸುದ್ದಿ ಸಂಸ್ಥೆ ಎಎನ್ಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಕಾಂಗ್ರೆಸ್​ ಸಂಸದ ಜನಪದ ಶೈಲಿಯ ಉಡುಪನ್ನು ಧರಿಸಿ ಕೈ ಕೈ ಹಿಡಿದು ನರ್ತಿಸುವುದು ಕಂಡು ಬಂದಿದೆ.

ರಾಹುಲ್ ಗಾಂಧಿ ಶನಿವಾರ ಬೆಳಿಗ್ಗೆ ದೆಹಲಿಯಿಂದ ಇಂಡಿಗೋ ವಿಮಾನದಲ್ಲಿ ಕೊಯಮತ್ತೂರಿಗೆ ಪ್ರಯಾಣಿಸಿದ್ದರು. ನಂತರ ಅವರು ತಮ್ಮ ಕ್ಷೇತ್ರ ವಯನಾಡ್ ಗೆ ಭೇಟಿ ನೀಡಿದರು. ‘ಮೋದಿ’ ಉಪನಾಮ ಪ್ರಕರಣದಲ್ಲಿ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ನಂತರ ಲೋಕಸಭೆಯಲ್ಲಿ ಸಂಸತ್​ಗೆ ಮರುಪ್ರವೇಶ ಪಡೆದ ನಂತರ ವಯನಾಡ್ ಗೆ ಇದು ಅವರ ಮೊದಲ ಭೇಟಿ.

ರಾಹುಲ್ ಗಾಂಧಿ ಅವರ ವಯನಾಡ್ ಭೇಟಿಯ ಬಗ್ಗೆ ಮಾತನಾಡಿದ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಅಧ್ಯಕ್ಷ ವಿ.ಟಿ.ಸಿದ್ದಿಕಿ ರಾಹುಲ್ ಗಾಂಧಿ ಆಗಸ್ಟ್ 12ರಂದು ವಯನಾಡ್ ಗೆ ಬರಲಿದ್ದಾರೆ. ನಾವು ಅವರಿಗೆ ಆತ್ಮೀಯ ಸ್ವಾಗತ ವ್ಯವಸ್ಥೆ ಮಾಡಿದ್ದೇವೆ. ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ. ನಾಳೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ನಡೆಯಲಿದ್ದು 13ರಂದು ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ರಾಜಸ್ಥಾನದಲ್ಲಿ ತಾವು ನಡೆಸಿದ ಬುಡಕಟ್ಟು ಸಮುದಾಯದ ಪ್ರಚಾರ ರ್ಯಾಲಿಯಲ್ಲಿ, ಕಾಂಗ್ರೆಸ್​ನ ರಾಷ್ಟ್ರೀಯ ನಾಯಕರಾಗಿರುವ ರಾಹುಲ್ ಗಾಂಧಿ ರಾಜಸ್ಥಾನ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳನ್ನು ಶ್ಲಾಘಿಸಿದ್ದರು. ಕಾಂಗ್ರೆಸ್ ಒಗ್ಗೂಡಲು ಕೆಲಸ ಮಾಡಿದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ದ್ವೇಷ ಮತ್ತು ವಿಭಜನೆಯನ್ನು ಹರಡಲು ಕೆಲಸ ಮಾಡುತ್ತದೆ ಎಂದು ಹೇಳಿದರು. ಅವರು ಬುಡಕಟ್ಟು ಪ್ರಾಬಲ್ಯದ ಬನ್​ಸ್ವಾರಾದ ಮಂಗರ್ ಧಾಮ್​ನಲ್ಲಿ ಈ ರ್ಯಾಲಿ ನಡೆಯಿತು.

ಇದನ್ನೂ ಓದಿ : Amit Shah: ಬೆಳಗ್ಗೆ 4ಕ್ಕೇ ಮೋದಿಯಿಂದ ಕರೆ; ಭಾರತ ಮಾತೆಯ ಹತ್ಯೆ ಎಂದ ರಾಹುಲ್‌ ಗಾಂಧಿಗೆ ಅಮಿತ್‌ ಶಾ ತಪರಾಕಿ

ಬಿಜೆಪಿಯ ಸಿದ್ಧಾಂತವು ಮಣಿಪುರಕ್ಕೆ ಬೆಂಕಿ ಹಚ್ಚಿದೆ. ಜನರನ್ನು ಕೊಲ್ಲಲಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ಪ್ರಧಾನಿ ಮೋದಿ ಬಯಸಿದರೆ, ಎರಡು-ಮೂರು ದಿನಗಳಲ್ಲಿ ಬೆಂಕಿಯನ್ನು ನಂದಿಸಬಹುದು. ಆದರೆ ಅವರು ಬೆಂಕಿಯನ್ನು ಹೆಚ್ಚಿಸಲು ಬಯಸುತ್ತಾರೆ ಎಂದು ರಾಹುಲ್ ಗಾಂಧಿ ಈ ರ್ಯಾಲಿಯಲ್ಲಿ ಹೇಳಿದ್ದರು.

ರಾಹುಲ್ ಗಾಂಧಿ ಸೆಪ್ಟೆಂಬರ್​​ನಲ್ಲಿ ಯುರೋಪ್ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಅಲ್ಲಿ ಅವರು ಯುರೋಪಿಯನ್ ಯೂನಿಯನ್ ಸಂಸದರು ಮತ್ತು ಭಾರತೀಯ ವಲಸೆಗಾರರ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.

Exit mobile version