Site icon Vistara News

Rahul Gandhi: ರಾಹುಲ್ ಗಾಂಧಿಗೆ ಮತ್ತೆ ಸೋಲು; ಜೈಲು ಶಿಕ್ಷೆಗೆ ತಡೆ ನೀಡದ ಗುಜರಾತ್ ಹೈಕೋರ್ಟ್​

Rahul Gandhi

New Rift In INDIA Bloc; SP Leader Calls Rahul Gandhi 'Crazy Dimwit'

2019ರಲ್ಲಿ ಮೋದಿ ಸರ್​ನೇಮ್​ಗೆ (Modi Sir name Case) ಮಾಡಿದ್ದ ಅಪಮಾನ ಮಾಡಿದ್ದ ಕೇಸ್​​ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi)ಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. ತಮ್ಮನ್ನು ದೋಷಮುಕ್ತರನ್ನಾಗಿ ಮಾಡಬೇಕು, ಸೂರತ್​ ಕೋರ್ಟ್​ ವಿಧಿಸಿದ್ದ ಜೈಲು ಶಿಕ್ಷೆಗೆ ತಡೆ ನೀಡಬೇಕು ಎಂದು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ (Gujarat High Court)​ ತಿರಸ್ಕರಿಸಿದೆ. ‘ಸೂರತ್ ಕೋರ್ಟ್​ ನೀಡಿದ್ದ ತೀರ್ಪು ಸೂಕ್ತವಾಗಿದೆ, ಕಾನೂನು ಬದ್ಧವಾಗಿದೆ’ ಎಂದು ಹೈಕೋರ್ಟ್​ ತಿಳಿಸಿದೆ. ರಾಹುಲ್ ಗಾಂಧಿ ಕಾನೂನು ಹೋರಾಟದಲ್ಲಿ ಇಲ್ಲಿಯೂ ಸೋಲೇ ಉಂಟಾಗಿದ್ದು, ಅವರಿನ್ನು ಸುಪ್ರೀಂಕೋರ್ಟ್​ ಮೆಟ್ಟಿಲೇರಬಹುದಾಗಿದೆ.

2019ರಲ್ಲಿ ರಾಹುಲ್ ಗಾಂಧಿಯವರು ಕೋಲಾರದಲ್ಲಿ ಮಾತನಾಡುತ್ತ, ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಎಂದು ಹೇಳಿದ್ದರು. ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ರಾಹುಲ್ ಗಾಂಧಿ ವಿರುದ್ಧ ಸೂರತ್ ಕೋರ್ಟ್​ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2023ರ ಮಾರ್ಚ್​ 23ರಂದು ತೀರ್ಪು ನೀಡಿದ್ದ ಸೂರತ್ ಕೋರ್ಟ್​ ಈ ಕೇಸ್​ನಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಹೇಳಿತ್ತು ಮತ್ತು 2ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಜಾಮೀನು ನೀಡಿತ್ತು. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದನ ಸ್ಥಾನದಿಂದ ಅನರ್ಹರಾದರು. ಬಳಿಕ ರಾಹುಲ್ ಗಾಂಧಿ ಗುಜರಾತ್ ಸೆಷನ್ಸ್ ಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿ, ಸೂರತ್ ಕೆಳನ್ಯಾಯಾಲಯ ಕೊಟ್ಟಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿದ್ದರು. ಆದರೆ ಸೆಷನ್ಸ್​ ಕೋರ್ಟ್​​ನಲ್ಲೂ ಹಿನ್ನಡೆಯಾಗಿತ್ತು. ರಾಹುಲ್ ಗಾಂಧಿ ಅರ್ಜಿ ವಜಾಗೊಂಡಿತ್ತು. ಹೀಗಾಗಿ ಅವರು ಗುಜರಾತ್ ಹೈಕೋರ್ಟ್​​ ಮೆಟ್ಟಿಲೇರಿದ್ದರು.

ಮೋದಿ ಸರ್​ನೇಮ್​ಗೆ ಅವಮಾನ ಮಾಡಿದ ಕೇಸ್​​ನ್ನು ಸೂರತ್​ ಕೋರ್ಟ್​​ನಲ್ಲಿ ಮುಖ್ಯ ಜ್ಯುಡಿಶಿಯಲ್​ ಮ್ಯಾಜಿಸ್ಟ್ರೇಟ್​ ಎಚ್​.ಎಚ್​.ವರ್ಮಾ ಅವರು ವಿಚಾರಣೆ ನಡೆಸಿದ್ದರು. ಮಾರ್ಚ್​ 23ರಂದು ತೀರ್ಪು ನೀಡಿ ಎರಡು ವರ್ಷ ಜೈಲುಶಿಕ್ಷೆ, ದಂಡ ವಿಧಿಸಿದ್ದರು. ಹಾಗೇ, ಗುಜರಾತ್​ ಹೈಕೋರ್ಟ್​ನಲ್ಲಿ ನ್ಯಾಯಾಧೀಶ ಹೇಮಂತ್ ಪ್ರಾಚಕ್​ ಅವರು ರಾಹುಲ್ ರಾಹುಲ್ ಗಾಂಧಿ ಅರ್ಜಿ ವಿಚಾರಣೆ ನಡೆಸಿದ್ದರು. ಈ ಹಿಂದೊಮ್ಮೆ ವಿಚಾರಣೆ ಮುಂದೂಡಲಾಗಿತ್ತು.

ಇದನ್ನೂ ಓದಿ: Rahul Gandhi: ಮೋದಿಗೆ ಅವಮಾನ; ರಾಹುಲ್‌ ಗಾಂಧಿಗೆ ಹೈಕೋರ್ಟ್‌ ಬಿಗ್‌ ರಿಲೀಫ್‌

ಮೋದಿ ಸರ್​ನೇಮ್​ಗೆ ಅಪಮಾನ ಮಾಡಿದ ಕೇಸ್​ಗೆ ಸಂಬಂಧಪಟ್ಟಂತೆ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರು ಪಾಟ್ನಾ ಹೈಕೋರ್ಟ್​​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹಾಗೇ, ವಕೀಲರಾದ ಪ್ರದೀಪ್ ಮೋದಿ ಎಂಬುವರು ಜಾರ್ಖಂಡ ಕೋರ್ಟ್​ನಲ್ಲಿ ಕೇಸ್ ಹಾಕಿದ್ದಾರೆ. ಈ ಎರಡೂ ಮೊಕದ್ದಮೆಗಳ ವಿಚಾರಣೆಗಳೂ ನಡೆಯುತ್ತಿವೆ.

Exit mobile version