Rahul Gandhi: ರಾಹುಲ್ ಗಾಂಧಿಗೆ ಮತ್ತೆ ಸೋಲು; ಜೈಲು ಶಿಕ್ಷೆಗೆ ತಡೆ ನೀಡದ ಗುಜರಾತ್ ಹೈಕೋರ್ಟ್​ - Vistara News

ದೇಶ

Rahul Gandhi: ರಾಹುಲ್ ಗಾಂಧಿಗೆ ಮತ್ತೆ ಸೋಲು; ಜೈಲು ಶಿಕ್ಷೆಗೆ ತಡೆ ನೀಡದ ಗುಜರಾತ್ ಹೈಕೋರ್ಟ್​

2019ರಲ್ಲಿ ರಾಹುಲ್ ಗಾಂಧಿಯವರು ಕೋಲಾರದಲ್ಲಿ ಮಾತನಾಡುತ್ತ, ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಎಂದು ಹೇಳಿದ್ದರು. ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

VISTARANEWS.COM


on

Rahul Gandhi
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

2019ರಲ್ಲಿ ಮೋದಿ ಸರ್​ನೇಮ್​ಗೆ (Modi Sir name Case) ಮಾಡಿದ್ದ ಅಪಮಾನ ಮಾಡಿದ್ದ ಕೇಸ್​​ನಲ್ಲಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ (Rahul Gandhi)ಗೆ ಮತ್ತೊಮ್ಮೆ ತೀವ್ರ ಹಿನ್ನಡೆಯಾಗಿದೆ. ತಮ್ಮನ್ನು ದೋಷಮುಕ್ತರನ್ನಾಗಿ ಮಾಡಬೇಕು, ಸೂರತ್​ ಕೋರ್ಟ್​ ವಿಧಿಸಿದ್ದ ಜೈಲು ಶಿಕ್ಷೆಗೆ ತಡೆ ನೀಡಬೇಕು ಎಂದು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ (Gujarat High Court)​ ತಿರಸ್ಕರಿಸಿದೆ. ‘ಸೂರತ್ ಕೋರ್ಟ್​ ನೀಡಿದ್ದ ತೀರ್ಪು ಸೂಕ್ತವಾಗಿದೆ, ಕಾನೂನು ಬದ್ಧವಾಗಿದೆ’ ಎಂದು ಹೈಕೋರ್ಟ್​ ತಿಳಿಸಿದೆ. ರಾಹುಲ್ ಗಾಂಧಿ ಕಾನೂನು ಹೋರಾಟದಲ್ಲಿ ಇಲ್ಲಿಯೂ ಸೋಲೇ ಉಂಟಾಗಿದ್ದು, ಅವರಿನ್ನು ಸುಪ್ರೀಂಕೋರ್ಟ್​ ಮೆಟ್ಟಿಲೇರಬಹುದಾಗಿದೆ.

2019ರಲ್ಲಿ ರಾಹುಲ್ ಗಾಂಧಿಯವರು ಕೋಲಾರದಲ್ಲಿ ಮಾತನಾಡುತ್ತ, ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಎಂದು ಹೇಳಿದ್ದರು. ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ರಾಹುಲ್ ಗಾಂಧಿ ವಿರುದ್ಧ ಸೂರತ್ ಕೋರ್ಟ್​ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. 2023ರ ಮಾರ್ಚ್​ 23ರಂದು ತೀರ್ಪು ನೀಡಿದ್ದ ಸೂರತ್ ಕೋರ್ಟ್​ ಈ ಕೇಸ್​ನಲ್ಲಿ ರಾಹುಲ್ ಗಾಂಧಿ ದೋಷಿ ಎಂದು ಹೇಳಿತ್ತು ಮತ್ತು 2ವರ್ಷಗಳ ಜೈಲು ಶಿಕ್ಷೆ ವಿಧಿಸಿ, ಜಾಮೀನು ನೀಡಿತ್ತು. ಅದರ ಬೆನ್ನಲ್ಲೇ ರಾಹುಲ್ ಗಾಂಧಿ ಸಂಸದನ ಸ್ಥಾನದಿಂದ ಅನರ್ಹರಾದರು. ಬಳಿಕ ರಾಹುಲ್ ಗಾಂಧಿ ಗುಜರಾತ್ ಸೆಷನ್ಸ್ ಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿ, ಸೂರತ್ ಕೆಳನ್ಯಾಯಾಲಯ ಕೊಟ್ಟಿರುವ ಶಿಕ್ಷೆಗೆ ತಡೆ ನೀಡುವಂತೆ ಕೋರಿದ್ದರು. ಆದರೆ ಸೆಷನ್ಸ್​ ಕೋರ್ಟ್​​ನಲ್ಲೂ ಹಿನ್ನಡೆಯಾಗಿತ್ತು. ರಾಹುಲ್ ಗಾಂಧಿ ಅರ್ಜಿ ವಜಾಗೊಂಡಿತ್ತು. ಹೀಗಾಗಿ ಅವರು ಗುಜರಾತ್ ಹೈಕೋರ್ಟ್​​ ಮೆಟ್ಟಿಲೇರಿದ್ದರು.

ಮೋದಿ ಸರ್​ನೇಮ್​ಗೆ ಅವಮಾನ ಮಾಡಿದ ಕೇಸ್​​ನ್ನು ಸೂರತ್​ ಕೋರ್ಟ್​​ನಲ್ಲಿ ಮುಖ್ಯ ಜ್ಯುಡಿಶಿಯಲ್​ ಮ್ಯಾಜಿಸ್ಟ್ರೇಟ್​ ಎಚ್​.ಎಚ್​.ವರ್ಮಾ ಅವರು ವಿಚಾರಣೆ ನಡೆಸಿದ್ದರು. ಮಾರ್ಚ್​ 23ರಂದು ತೀರ್ಪು ನೀಡಿ ಎರಡು ವರ್ಷ ಜೈಲುಶಿಕ್ಷೆ, ದಂಡ ವಿಧಿಸಿದ್ದರು. ಹಾಗೇ, ಗುಜರಾತ್​ ಹೈಕೋರ್ಟ್​ನಲ್ಲಿ ನ್ಯಾಯಾಧೀಶ ಹೇಮಂತ್ ಪ್ರಾಚಕ್​ ಅವರು ರಾಹುಲ್ ರಾಹುಲ್ ಗಾಂಧಿ ಅರ್ಜಿ ವಿಚಾರಣೆ ನಡೆಸಿದ್ದರು. ಈ ಹಿಂದೊಮ್ಮೆ ವಿಚಾರಣೆ ಮುಂದೂಡಲಾಗಿತ್ತು.

ಇದನ್ನೂ ಓದಿ: Rahul Gandhi: ಮೋದಿಗೆ ಅವಮಾನ; ರಾಹುಲ್‌ ಗಾಂಧಿಗೆ ಹೈಕೋರ್ಟ್‌ ಬಿಗ್‌ ರಿಲೀಫ್‌

ಮೋದಿ ಸರ್​ನೇಮ್​ಗೆ ಅಪಮಾನ ಮಾಡಿದ ಕೇಸ್​ಗೆ ಸಂಬಂಧಪಟ್ಟಂತೆ ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರು ಪಾಟ್ನಾ ಹೈಕೋರ್ಟ್​​ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಹಾಗೇ, ವಕೀಲರಾದ ಪ್ರದೀಪ್ ಮೋದಿ ಎಂಬುವರು ಜಾರ್ಖಂಡ ಕೋರ್ಟ್​ನಲ್ಲಿ ಕೇಸ್ ಹಾಕಿದ್ದಾರೆ. ಈ ಎರಡೂ ಮೊಕದ್ದಮೆಗಳ ವಿಚಾರಣೆಗಳೂ ನಡೆಯುತ್ತಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Lok Sabha Election 2024: ಈಗಲೂ ಹೇಳ್ತೇನೆ ಕೇಳಿ, ಬಿಜೆಪಿಯೇ ಗೆಲ್ಲೋದು! ಎಕ್ಸಿಟ್ ಪೋಲ್‌ಗೆ ಮೊದಲು ಪ್ರಶಾಂತ್ ಕಿಶೋರ್ ಫೈನಲ್ ಲೆಕ್ಕಾಚಾರ ಹೀಗಿದೆ!

Lok Sabha Election 2024: ಮತ್ತೊಮ್ಮೆ ಬಿಜೆಪಿ 303 ಸ್ಥಾನಗಳನ್ನು ಗೆಲ್ಲಬಹುದು ಎಂದು ಪ್ರಶಾಂತ್‌ ಕಿಶೋರ್‌ ಅವರು ಮತ್ತೆ ಭವಿಷ್ಯ ನುಡಿದಿದ್ದಾರೆ. ಇದು 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಗೆದ್ದಿರುವ ಸ್ಥಾನಗಳ ಸಂಖ್ಯೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು.

VISTARANEWS.COM


on

prashant kishor
Koo

ಹೊಸದಿಲ್ಲಿ: ಎಕ್ಸಿಟ್ ಪೋಲ್ 2024ರ (Exit poll 2024) ಫಲಿತಾಂಶಗಳ ಬಿಡುಗಡೆಗೆ ಕೆಲವೇ ಗಂಟೆಗಳ ಮೊದಲು, ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಗೆಲುವು ಖಚಿತ ಎಂದು ಚುನಾವಣಾ ವ್ಯೂಹಚತುರ ಪ್ರಶಾಂತ್ ಕಿಶೋರ್ (Prashant Kishor) ಪುನರುಚ್ಚರಿಸಿದ್ದಾರೆ. ಅವರು ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಭಾರತೀಯ ಜನತಾ ಪಾರ್ಟಿ (BJP) ನೇತೃತ್ವದ ಎನ್‌ಡಿಎ (NDA) ಕಾರ್ಯಕ್ಷಮತೆಯ ಬಗ್ಗೆ ತಮ್ಮ ಭವಿಷ್ಯವನ್ನು ಮತ್ತೆ ಒತ್ತಿ ಹೇಳಿದ್ದಾರೆ.

ಮತ್ತೊಮ್ಮೆ ಬಿಜೆಪಿ 303 ಸ್ಥಾನಗಳನ್ನು ಗೆಲ್ಲಬಹುದು ಎಂದು ಅವರು ಭವಿಷ್ಯ ನುಡಿದಿದ್ದಾರೆ. ಇದು 2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಗೆದ್ದಿರುವ ಸ್ಥಾನಗಳ ಸಂಖ್ಯೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು. “ನನ್ನ ಅಂದಾಜಿನ ಪ್ರಕಾರ, ಬಿಜೆಪಿ ಹಿಂದಿನ ಅಥವಾ ಸ್ವಲ್ಪ ಹೆಚ್ಚಿನ ಸಂಖ್ಯೆಗಳೊಂದಿಗೆ ಅಧಿಕಾರಕ್ಕೆ ಹಿಂತಿರುಗಲಿದೆ. ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಸ್ಥಾನಗಳ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ಆಗದು. ಆದರೆ ಭಾರತದ ಪೂರ್ವ ಮತ್ತು ದಕ್ಷಿಣ ಪ್ರದೇಶಗಳಿಂದ ಪಕ್ಷವು ಸಾಕಷ್ಟು ಬೆಂಬಲ ಗಳಿಸಲಿದೆ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಜೂನ್ 1ರ ಶನಿವಾರ ಸಾರ್ವತ್ರಿಕ ಚುನಾವಣೆಯ 7ನೇ ಹಂತದ ಮತದಾನದ ಮುಕ್ತಾಯದ ನಂತರ, ಹಲವಾರು ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿ ವಾಹಿನಿಗಳು, ಚುನಾವಣಾ ಸಮೀಕ್ಷೆ ಏಜೆನ್ಸಿಗಳೊಂದಿಗೆ ತಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಸಂಜೆ 6.30ರ ಸುಮಾರಿಗೆ ಬಿಡುಗಡೆ ಮಾಡಲು ಸಿದ್ಧವಾಗಿವೆ.

ಪ್ರಶಾಂತ್ ಕಿಶೋರ್ ಅವರು ಪೂರ್ವ ಮತ್ತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿಯ ಸ್ಥಾನಗಳ ಸಂಖ್ಯೆ ಮತ್ತು ಮತ ಹಂಚಿಕೆಯಲ್ಲಿ ಸಂಭಾವ್ಯ ಏರಿಕೆಯನ್ನು ಸೂಚಿಸಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡುಗಳಲ್ಲಿ ತನ್ನ ಅಸ್ತಿತ್ವವನ್ನು ಪಕ್ಷ ಹೆಚ್ಚಿಸಿಕೊಂಡಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ಬಗ್ಗೆ ಯಾವುದೇ ಗಮನಾರ್ಹ ಅತೃಪ್ತಿ ಇಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ಪರ್ಯಾಯಕ್ಕಾಗಿ ಬಲವಾದ ಬೇಡಿಕೆ ಇಲ್ಲ ಎಂದು ರಾಜಕೀಯ ತಂತ್ರಜ್ಞ ಪಿಕೆ ಈ ಹಿಂದೆ ಹೇಳಿಕೊಂಡಿದ್ದರು. ಕೇಸರಿ ಪಕ್ಷದ ಸ್ಥಾನಗಳ ಸಂಖ್ಯೆ 2019ರ ಲೆಕ್ಕಾಚಾರಕ್ಕೆ (303) ಹತ್ತಿರವಾಗಬಹುದು ಅಥವಾ ಮೀರಬಹುದು ಎಂದು ಭವಿಷ್ಯ ನುಡಿದಿದ್ದರು.

“ನಾವು ಕೆಲವು ಮೂಲಭೂತ ಅಂಶಗಳನ್ನು ನೋಡಬೇಕು. ಅಧಿಕಾರದಲ್ಲಿರುವ ಸರ್ಕಾರ ಮತ್ತು ಅದರ ನಾಯಕನ ವಿರುದ್ಧ ಕೋಪವಿದ್ದರೆ, ಪರ್ಯಾಯವಿದೆಯೇ ಎಂಬುದನ್ನು ಲೆಕ್ಕಿಸದೆ, ಜನರು ಅವರ ವಿರುದ್ಧ ಮತ ಹಾಕುವ ಸಾಧ್ಯತೆಯಿದೆ. ಆದರೆ ಇಲ್ಲಿಯವರೆಗೆ ಅಂಥ ಅಲೆಯನ್ನು ನಾವು ಕಂಡಿಲ್ಲ. ಮೋದಿಜಿ ವಿರುದ್ಧ ವ್ಯಾಪಕವಾದ ನಿರಾಶೆ, ಈಡೇರದ ಆಕಾಂಕ್ಷೆಗಳು ಇರಬಹುದು, ಆದರೆ ವ್ಯಾಪಕವಾದ ಕೋಪವನ್ನು ನಾವು ಕೇಳಿಲ್ಲ” ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.

ಶನಿವಾರದ ಮತದಾನದೊಂದಿಗೆ, ಏಪ್ರಿಲ್ 19ರಂದು ಪ್ರಾರಂಭವಾದ ಮ್ಯಾರಥಾನ್ ಸರಣಿ ಮತದಾನದ ಪ್ರಕ್ರಿಯೆ ಮುಗಿಯುತ್ತಿದೆ. ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ಅಸೆಂಬ್ಲಿಗಳು ಸಹ ಚುನಾವಣೆಗೆ ಹೋಗಿವೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ. ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಜೂನ್ 2ರಂದು ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದೆ.

ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜವಾಬ್ದಾರಿಯಿಂದ ಮತ್ತು ಹೆಮ್ಮೆಯಿಂದ ಮತ ಚಲಾಯಿಸುವಂತೆ ಚುನಾವಣಾ ಆಯೋಗ ಕರೆ ನೀಡಿದೆ. ಸಾರ್ವತ್ರಿಕ ಚುನಾವಣೆಯ ಮೊದಲ ಆರು ಹಂತಗಳಲ್ಲಿ ಕ್ರಮವಾಗಿ ಶೇ.66.14, ಶೇ.66.71, ಶೇ.65.68, ಶೇ.69.16, ಶೇ.62.2, ಮತ್ತು ಶೇ.63.36ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ದೂರದರ್ಶನ ಚಾನೆಲ್‌ಗಳು ಮತ್ತು ಸುದ್ದಿವಾಹಿನಿಗಳು ಸಂಜೆ 6.30ರ ನಂತರ ಎಕ್ಸಿಟ್ ಪೋಲ್ ಡೇಟಾವನ್ನು ಮತ್ತು ಅದರ ಫಲಿತಾಂಶಗಳನ್ನು ಪ್ರಕಟಿಸಲಿವೆ.

ಇದನ್ನೂ ಓದಿ: Lok Sabha Election: ಪ್ರಶಾಂತ್‌ ಕಿಶೋರ್‌ ಬಳಿಕ ಯೋಗೇಂದ್ರ ಯಾದವ್‌ ಕೂಡ ಮೋದಿ ಮತ್ತೊಮ್ಮೆ ಪ್ರಧಾನಿ ಖಚಿತ ಅಂತಿದ್ದಾರೆ!

Continue Reading

ದೇಶ

IndiGo Flight: ಮತ್ತೊಂದು ಹುಸಿ ಬಾಂಬ್‌ ಕರೆ; ಮುಂಬೈಯಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್‌

IndiGo Flight: ಶನಿವಾರ ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ 6ಇ 5314 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲಾಯಿತು. ಈ ಬಗ್ಗೆ ವಿಮಾನ ವಕ್ತಾರರು ಮಾಹಿತಿ ನೀಡಿ, ʼʼಚೆನ್ನೈಯಿಂದ ಮುಂಬೈಗೆ ತೆರಳುವ ಇಂಡಿಗೋ 6ಇ 5314 ವಿಮಾನಕ್ಕೆ ಬಾಂಬ್‌ ಬೆದರಿಕೆ ಕರೆ ಬಂದಿದೆ. ಮುಂಬೈಯಲ್ಲಿ ವಿಮಾನವನ್ನು ತುರ್ತಾಗಿ ಲ್ಯಾಂಡಿಂಗ್‌ ಮಾಡಲಾಗಿದ್ದು, ಭದ್ರತಾ ಏಜೆನ್ಸಿಯ ಮಾರ್ಗಸೂಚಿಗಳ ಪ್ರಕಾರ ವಿಮಾನವನ್ನು ಪ್ರತ್ಯೇಕ ಬೇಗೆ ಕೊಂಡೊಯ್ಯಲಾಯಿತು” ಎಂದು ತಿಳಿಸಿದ್ದಾರೆ.

VISTARANEWS.COM


on

IndiGo Flight
Koo

ಮುಂಬೈ: ದೇಶದಲ್ಲಿ ಹುಸಿ ಬಾಂಬ್‌ ಬೆದರಿಕೆ ಕರೆಗಳ ಹಾವಳಿ ಹೆಚ್ಚುತ್ತಿದೆ. ಶಾಲೆ, ಆಸ್ಪತ್ರೆಗಳ ಜತೆಗೆ ವಿಮಾನಗಳಿಗೂ ಬಾಂಬ್‌ ಬೆದರಿಕೆ ಕರೆ ಬರುತ್ತಿವೆ. ಶುಕ್ರವಾರವಷ್ಟೇ ದಿಲ್ಲಿಯಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದ ವಿಸ್ತಾರ ವಿಮಾನ(Vistara Flight)ಕ್ಕೆ ಹುಸಿಬಾಂಬ್‌ ಬಂದಿತ್ತು. ಇದೀಗ ಇಂಡಿಗೋ ವಿಮಾನಕ್ಕೆ ಇಂತಹದ್ದೇ ಕರೆ ಬಂದಿದೆ. ಶನಿವಾರ ಚೆನ್ನೈನಿಂದ ಮುಂಬೈಗೆ ಹೊರಟಿದ್ದ ಇಂಡಿಗೋ 6ಇ 5314 ವಿಮಾನಕ್ಕೆ (IndiGo Flight) ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲಾಯಿತು.

ಈ ಬಗ್ಗೆ ವಿಮಾನ ವಕ್ತಾರರು ಮಾಹಿತಿ ನೀಡಿ, ʼʼಚೆನ್ನೈಯಿಂದ ಮುಂಬೈಗೆ ತೆರಳುವ ಇಂಡಿಗೋ 6ಇ 5314 ವಿಮಾನಕ್ಕೆ ಬಾಂಬ್‌ ಬೆದರಿಕೆ ಕರೆ ಬಂದಿದೆ. ಮುಂಬೈಯಲ್ಲಿ ವಿಮಾನವನ್ನು ತುರ್ತಾಗಿ ಲ್ಯಾಂಡಿಂಗ್‌ ಮಾಡಲಾಗಿದ್ದು, ಭದ್ರತಾ ಏಜೆನ್ಸಿಯ ಮಾರ್ಗಸೂಚಿಗಳ ಪ್ರಕಾರ ವಿಮಾನವನ್ನು ಪ್ರತ್ಯೇಕ ಬೇಗೆ ಕೊಂಡೊಯ್ಯಲಾಯಿತು” ಎಂದು ತಿಳಿಸಿದ್ದಾರೆ.

“ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ. ವಿಮಾನವನ್ನು ಪ್ರಸ್ತುತ ತಪಾಸಣೆಗೆ ಒಳಪಡಿಸಲಾಗಿದ್ದು, ಎಲ್ಲ ಭದ್ರತಾ ತಪಾಸಣೆಗಳು ಪೂರ್ಣಗೊಂಡ ನಂತರ, ವಿಮಾನವನ್ನು ಟರ್ಮಿನಲ್ ಪ್ರದೇಶಕ್ಕೆ ಮತ್ತೆ ಕೊಂಡೊಯ್ಯಲಾಗುವುದು. ತಪಾಸಣೆ ವೇಳೆ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲʼʼ ಎಂದು ವಿವರಿಸಿದ್ದಾರೆ.

ನಿಲ್ಲುತ್ತಲೇ ಇಲ್ಲ ಹುಸಿಬಾಂಬ್‌ ಕರೆ ಹಾವಳಿ

ಶುಕ್ರವಾರ ಬೆಳಗ್ಗೆ 12.10ಗೆ ದಿಲ್ಲಿ ವಿಮಾನ ನಿಲ್ದಾಣದಿಂದ ವಿಸ್ತಾರ UK611 ವಿಮಾನಕ್ಕೆ ಬಾಂಬ್‌ ಬೆದರಿಕೆ ಬಂದಿತ್ತು. ಈ ಕರೆ ಶ್ರೀನಗರದ ಏರ್‌ ಟ್ರಾಫಿಕ್‌ ಕಂಟ್ರೋಲ್‌(ATC)ಗೆ ಬಂದಿದ್ದ ಹಿನ್ನೆಲೆಯಲ್ಲಿ ತಕ್ಷಣ ಆ ವಿಮಾನವನ್ನು ಪ್ರತ್ಯೇಕವಾಗಿ ಲ್ಯಾಂಡಿಂಗ್‌ ಮಾಡಿಸಲಾಗಿತ್ತು. ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ ಕೆಳಗಿಸಲಾಗಿದ್ದು, ಏರ್‌ಪೋರ್ಟ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸ್ಥಳಕ್ಕೆ ಬಾಂಬ್‌ ನಿಷ್ಕ್ರೀಯ ದಳವೂ ದೌಡಾಯಿಸಿ ಪರಿಶೀಲನೆ ನಡೆಸಿದೆ. ಯಾವುದೇ ಬಾಂಬ್, ಸ್ಫೋಟಕ ವಸ್ತುಗಳು ಪರಿಶೀಲನೆ ವೇಳೆ ಪತ್ತೆ ಆಗಿಲ್ಲ.

ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೂ ಬಾಂಬ್‌ ಬೆದರಿಕೆ ಸಂದೇಶ ಬಂದಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅನಾಮಿಕ ವ್ಯಕ್ತಿಯೊಬ್ಬ ಏರ್‌ಪೋರ್ಟ್‌ನ ಬಾತ್ ರೂಮ್‌ನ ಕನ್ನಡಿ ಮೇಲೆ ಬೆದರಿಕೆ ಸಂದೇಶ ಬರೆದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಏರ್‌ಪೋರ್ಟ್‌ನ ಅಲ್ಪಾ 2ರ ಆಡಳಿತ ಕಚೇರಿಯ ಬಾತ್ ರೂಮ್‌ನಲ್ಲಿ ಅಪರಿಚಿತ ವ್ಯಕ್ತಿ ಬೆದರಿಕೆ ಸಂದೇಶ ಬರೆದಿದ್ದ. ತಕ್ಷಣ ಶ್ವಾನದಳ, ಬಾಂಬ್ ಸ್ಕ್ವಾಡ್‌ನೊಂದಿಗೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಸಂದೇಶ ಅಂತ ಗೊತ್ತಾಗಿ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ದಿಲ್ಲಿಯಿಂದ ವಾರಣಾಸಿಗೆ ಪ್ರಯಾಣಿಸಬೇಕಾಗಿದ್ದ ಇಂಡಿಗೋ ಏರ್‌ಲೈನ್ಸ್‌ನ 6E2211 ವಿಮಾನಕ್ಕೆ ಮಂಗಳವಾರ ಬೆಳಗ್ಗೆ ಬಾಂಬ್‌ ಬೆದರಿಕೆ ಕರೆ ಬಂದಿತ್ತು. ಇನ್ನೇನು ಟೇಕ್‌ ಆಫ್‌ ಆಗಬೇಕಾಗಿದ್ದ ವಿಮಾನವನ್ನು ಪ್ರತ್ಯೇಕ ರನ್‌ ವೇ ಒಯ್ದು ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಇತ್ತೀಚೆಗೆ ಪದೇಪದೆ ಕೆಲ ಕಿಡಿಗೇಡಿಗಳು ಬೆದರಿಕೆ ಸಂದೇಶ ಕಳುಹಿಸುತ್ತಿರುವುದು ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: Bomb Threat: ತಡರಾತ್ರಿ ಬಾಂಬ್‌ ಬೆದರಿಕೆ ಕರೆ; ಬೆಂಗಳೂರು ಪೊಲೀಸರು ಅಲರ್ಟ್, ಆರೋಪಿ ಸೆರೆ

Continue Reading

ದೇಶ

Modi Meditation: ಕನ್ಯಾಕುಮಾರಿಯಲ್ಲಿ ಧ್ಯಾನಾಸಕ್ತ ಪ್ರಧಾನಿ ಮೋದಿಯಿಂದ ಸೂರ್ಯ ವಂದನೆ; ವಿಡಿಯೊ ನೋಡಿ

ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲೆ ಸ್ಮಾರಕದಲ್ಲಿ (Vivekananda Rock Memorial) 45 ಗಂಟೆಗಳ ಧ್ಯಾನ ನಡೆಸುತ್ತಿದ್ದಾರೆ. ಮೋದಿ ಅವರ ಧ್ಯಾನ ಶನಿವಾರ ಕೊನೆಯ ದಿನಕ್ಕೆ ಕಾಲಿಟ್ಟಿದೆ (Modi Meditation). ಮೋದಿ ಧ್ಯಾನ ಮಾಡುತ್ತಿರುವ ವಿಡಿಯೊ ಸದ್ಯ ಹೊರ ಬಂದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

Modi Meditation
Koo

ಚೆನ್ನೈ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲೆ ಸ್ಮಾರಕದಲ್ಲಿ (Vivekananda Rock Memorial) 45 ಗಂಟೆಗಳ ಧ್ಯಾನ ನಡೆಸುತ್ತಿದ್ದಾರೆ. ಮೋದಿ ಅವರ ಧ್ಯಾನ ಶನಿವಾರ ಕೊನೆಯ ದಿನಕ್ಕೆ ಕಾಲಿಟ್ಟಿದೆ (Modi Meditation). ಮೋದಿ ಧ್ಯಾನ ಮಾಡುತ್ತಿರುವ ವಿಡಿಯೊ ಸದ್ಯ ಹೊರ ಬಂದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಶನಿವಾರ ಬೆಳಗಿನ ಜಾವವೇ ಎದ್ದ ಪ್ರಧಾನಿ ಮೋದಿ ಭಕ್ತಿಯ ಪ್ರತೀಕವಾಗಿರುವ ಕಾವಿ ಉಡುಗೆ ತೊಟ್ಟು ಹಣೆಗೆ ವಿಭೂತಿ ಮತ್ತು ತಿಲಕವನ್ನಿಟ್ಟು ಕೈಯಲ್ಲಿ ಜಪಮಣಿಯೊಂದಿಗೆ ಮಂತ್ರ ಪಠಿಸುತ್ತಾ ಸೂರ್ಯೋದಯ ವೀಕ್ಷಿಸಿದರು ಮತ್ತು ಸೂರ್ಯನಿಗೆ ವಂದನೆ ಸಲ್ಲಿಸಿದರು.

ಮೋದಿ ದಿನಚರಿ ಹೀಗಿದೆ

ಸೂರ್ಯೋದಯದ ವೇಳೆ ವಿವೇಕಾನಂದ ಶಿಲೆ ಸ್ಮಾರಕದಲ್ಲಿ ಮೋದಿ ಸೂರ್ಯ ಆರ್ಘ್ಯವನ್ನೂ ಅರ್ಪಿಸಿದರು. ಸೂರ್ಯನ ರೂಪದಲ್ಲಿ ಪ್ರಕಟವಾದ ಸರ್ವಶಕ್ತನಿಗೆ ನಮಸ್ಕರಿಸುವ ಆಧ್ಯಾತ್ಮಿಕ ರೀತಿಗೆ ‘ಸೂರ್ಯ ಅರ್ಘ್ಯ’ ಎಂದು ಕರೆಯಲಾಗುತ್ತದೆ. ಸಣ್ಣ ಪಾತ್ರೆಯಿಂದ ಸ್ವಲ್ಪ ನೀರನ್ನು ಸಮುದ್ರಕ್ಕೆ ಅರ್ಘ್ಯವಾಗಿ ಸುರಿದ ಪ್ರಧಾನಿ ಜಪಮಾಲೆ ಬಳಸಿ ಪ್ರಾರ್ಥಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಜತೆಗೆ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮೋದಿ ಪುಷ್ಪ ನಮನ ಸಲ್ಲಿಸಿದರು. ಅವರು ಕೈಯಲ್ಲಿ ಜಪಮಾಲೆ ಹಿಡಿದು ಮಂಟಪದ ಸುತ್ತಲೂ ಹೆಜ್ಜೆ ಹಾಕಿದರು. ಆಧ್ಯಾತ್ಮಿಕ, ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ನಂತರ ಅವರು ರಾಕ್ ಮೆಮೋರಿಯಲ್ ಮೆಟ್ಟಿಲುಗಳ ಮೇಲೆ ಸ್ವಲ್ಪ ಹೊತ್ತು ಕುಳಿತುಕೊಂಡರು.

ಮೋದಿ ಈ ಸ್ಥಳ ಆಯ್ಕೆ ಮಾಡಿದ್ದು ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ಅವರನ್ನು ತಮ್ಮ ಜೀವನಕ್ಕೆ ಆದರ್ಶ ಎಂದು ಪರಿಗಣಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್‌ನ ಸದಸ್ಯರೂ ಆಗಿದ್ದಾರೆ. ಕಳೆದ ವರ್ಷ ರಾಮಕೃಷ್ಣ ಮಿಷನ್‌ನ 125 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೋದಿ, ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿರುವ ಕನಸನ್ನು ನನಸು ಮಾಡಲು ಭಾರತವು ಕೆಲಸ ಮಾಡುವುದನ್ನು ಅವರು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು. ಇದೇ ಕಾರಣಕ್ಕಾಗಿ ವಿವೇಕಾನಂದ ರಾಕ್‌ ಮೆಮೋರಿಯಲ್‌ನಲ್ಲಿ ಮೋದಿ ಅವರು ಧ್ಯಾನ ಮಾಡಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ವಿವೇಕಾನಂದ ಬಂಡೆಯ ಮಹತ್ವ ಏನು?

ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ವವತುರೈ ಕಡಲತೀರದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಈ ದ್ವೀಪದ ಮೇಲೆ ಧ್ಯಾನ ಮಾಡುವಾಗ ಸ್ವಾಮಿ ವಿವೇಕಾನಂದರು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು. ಭಾರತದಾದ್ಯಂತ ನಾಲ್ಕು ವರ್ಷಗಳ ಕಾಲ ಅಲೆದಾಡಿದ ಅವರು ದೈವಿಕ ಸ್ವಭಾವ, ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಪರಿಶ್ರಮ, ಧೈರ್ಯ, ಶಕ್ತಿ ಮತ್ತು ಪ್ರೀತಿಯಲ್ಲಿ ನಂಬಿಕೆಯ ಇಡುವ ತತ್ತ್ವವನ್ನು ಸಾರಿದರು.

ಇದನ್ನೂ ಓದಿ: PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

Continue Reading

ಪ್ರಮುಖ ಸುದ್ದಿ

Rahul Gandhi: ಬಿಜೆಪಿ ಮಾನನಷ್ಟ ಕೇಸ್‌ನಲ್ಲಿ ಸಿಎಂ, ಡಿಸಿಎಂಗೆ ಶರತ್ತುಬದ್ಧ ಜಾಮೀನು; ರಾಹುಲ್‌ ಗಾಂಧಿ ಮೇಲೆ ಕೋರ್ಟ್‌ ಗರಂ

Rahul Gandhi: ವಿಚಾರಣೆಗೆ ಮುನ್ನ ಆಗಮಿಸಿದ ಸಿಎಂ ಹಾಗೂ ಡಿಸಿಎಂ, ಕೋರ್ಟ್ ಹಾಲ್ ಮುಂದೆ ಸಾಮಾನ್ಯರಂತೆ, ಜೊತೆಯಾಗಿ ಕುಳಿತರು. ನಂತರ ನ್ಯಾಯಾಲಯಕ್ಕೆ ಆಗಮಿಸಿದ ನ್ಯಾಯಾಧೀಶ ಕೆ. ಎನ್. ಶಿವಕುಮಾರ್ ಮುಂದೆ ಇಬ್ಬರೂ ಹಾಜರಾದರು.

VISTARANEWS.COM


on

rahul gandhi
Koo

ಬೆಂಗಳೂರು: ಬಿಜೆಪಿಗೆ (BJP) ಮಾನನಷ್ಟ (Defamation Case) ಮಾಡಿರುವ ಪ್ರಕರಣದಲ್ಲಿ ಎಸಿಎಂಎಂ ಕೋರ್ಟ್‌ (ACMM court) ಮುಂದೆ ಇಂದು ಹಾಜರಾದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಶರತ್ತುಬದ್ಧ ಜಾಮೀನು (Bail) ಪಡೆದರು. ಪ್ರಕರಣದ ಇನ್ನೊಬ್ಬ ಆರೋಪಿ ರಾಹುಲ್‌ ಗಾಂಧಿ (Rahul Gandhi) ಗೈರು ಹಾಜರಾಗಿರುವ ಕುರಿತು ನ್ಯಾಯಾಧೀಶರು ಗರಂ ಆದರು.

ವಿಧಾನ ಪರಿಷತ್‌ ಸದಸ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಅವರು ಸಲ್ಲಿಸಿರುವ ಖಾಸಗಿ ದೂರು ಇಂದು ವಿಚಾರಣೆಗೆ ಬಂದಿದ್ದು, ನ್ಯಾಯಾಧೀಶರ ಮುಂದೆ ಸಿಎಂ, ಡಿಸಿಎಂ ಹಾಜರಾದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಕೈ ನಾಯಕರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ A4 ಆರೋಪಿಯಾಗಿದ್ದಾರೆ.

ವಿಚಾರಣೆಗೆ ಮುನ್ನ ಆಗಮಿಸಿದ ಸಿಎಂ ಹಾಗೂ ಡಿಸಿಎಂ, ಕೋರ್ಟ್ ಹಾಲ್ ಮುಂದೆ ಸಾಮಾನ್ಯರಂತೆ, ಜೊತೆಯಾಗಿ ಕುಳಿತರು. ನಂತರ ನ್ಯಾಯಾಲಯಕ್ಕೆ ಆಗಮಿಸಿದ ನ್ಯಾಯಾಧೀಶ ಕೆ. ಎನ್. ಶಿವಕುಮಾರ್ ಮುಂದೆ ಇಬ್ಬರೂ ಹಾಜರಾದರು. ಪಾರ್ಟಿ ಪ್ರೆಸಿಡೆಂಟ್ ಹಾಗೂ ಎರಡನೇ ಆರೋಪಿ ಒಂದೇ ಎಂದು ವಕೀಲರು ತಿಳಿಸಿದರು. ಇಬ್ಬರನ್ನೂ ಹೊರ ಹೋಗಬಹುದೆಂದು ಜಡ್ಜ್‌ ಸೂಚಿಸಿದರು. ಇಬ್ಬರಿಗೂ ಶರತ್ತುಬದ್ಧ ಜಾಮೀನು ಮಂಜೂರು ಮಾಡಲಾಯಿತು. ಡಿಸಿಎಂ ಪರ ಎಎಜಿ ಎಸ್.ಎ ಅಹಮದ್ ವಾದಿಸಿದರು.

ನಾಲ್ಕನೇ ಆರೋಪಿ ರಾಹುಲ್ ಗಾಂದಿ ದೆಹಲಿಯಲ್ಲಿದ್ದಾರೆ. ಇಂದು ಇಂಡಿಯಾ ಕೂಟದ ಮೀಟಿಂಗ್ ಇದೆ. ಹೀಗಾಗಿ ರಾಹುಲ್ ಗಾಂಧಿ ಹಾಜರಾಗಲಾಗುತ್ತಿಲ್ಲ. ನಾಲ್ಕನೇ ತಾರೀಕು ಚುನಾವಣೆ ರಿಸಲ್ಟ್ ಇದೆ. ಹೀಗಾಗಿ ಕಾಲಾವಕಾಶ ನೀಡುವಂತೆ ವಿನಂತಿಸಿದರು. ಹಾಗಿದ್ದರೆ ಇಂದೇ ಬಂದು ಮುಗಿಸಿಕೊಂಡು ಹೋಗಬಹುದಿತ್ತಲ್ಲ, ದೆಹಲಿಗೆ ಹೋಗೋದಕ್ಕೆ ಐದು ದಿನ ಬೇಕಾಗಿಲ್ಲವಲ್ಲ ಎಂದು ಜಡ್ಜ್ ಪ್ರಶ್ನಿಸಿದರು. ನಂತರ ಮಧ್ಯಾಹ್ನ ಮೂರು ಗಂಟೆಗೆ ತಮ್ಮ ಆದೇಶವನ್ನು ಕಾಯ್ದಿರಿಸಿದರು.

ದೂರುದಾರರ ಪರ ಹಾಜರಾದ ವಕೀಲ ವಿನೋದ್ ಕುಮಾರ್, “ನ್ಯಾಯಾಲಯದಿಂದ ಸಮನ್ಸ್ ಜಾರಿ ಆದಾಗ ಬರಬೇಕು. ಪದೇ ಪದೆ ಕಾರಣ ನೀಡಿದ್ರೆ ಹೇಗೆ? ಎರಡು ಮೂರು ಸಲ ವಿನಾಯಿತಿ ನೀಡಲು ಅವಕಾಶ ಇಲ್ಲ ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಮುಂದೆಯೂ ಬೇರೆ ಬೇರೆ ಸಭೆ ಇದೆ ಅಂತ ಹಾಜರಾಗದೇ ಇರಬಹುದು. ಇವತ್ತಿಗೆ ಎಲೆಕ್ಷನ್ ಮುಗಿಯುತ್ತೆ. ರಾಹುಲ್ ಗಾಂಧಿ ರಾಷ್ಟ್ರೀಯ ನಾಯಕರೇ ಆಗಿರಲಿ, ಕಾನೂನಿನ ಮುಂದೆ ಎಲ್ಲರೂ ಒಂದೇ. ಹೀಗಾಗಿ ರಾಹುಲ್ ಗಾಂಧಿಗೆ ವಾರೆಂಟ್ ಜಾರಿ ಮಾಡಿ” ಎಂದು ಮನವಿ ಮಾಡಿದರು.

ಶರತ್ತುಬದ್ಧ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಶ್ಯೂರಿಟಿ ಪತ್ರಗಳಿಗೆ ಸಹಿ ಹಾಕಿ ತೆರಳಿದರು. “ನನಗೂ ಮತ್ತು ಸಿಎಂಗೆ ಸಮನ್ಸ್ ನೀಡಲಾಗಿತ್ತು. ಹೀಗಾಗಿ ಬಂದಿದ್ದೇವೆ. ರಾಹುಲ್ ಗಾಂಧಿ ಅವರು ಸಹ ಬರಬೇಕಿತ್ತು. ಆದರೆ INDIA ಕೂಟದ ಸಭೆ ಇದೆ. ರಾಹುಲ್ ಗಾಂಧಿ ಸಹ ಬರುತ್ತಾರೆ. ಅವರಿಗೆ ನ್ಯಾಯಾಂಗದ ಮೇಲೆ ಗೌರವ ಇದೆ. ನಾವು ಯಾರನ್ನೂ ರಕ್ಷಣೆ ಮಾಡಲ್ಲ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.

ರಾಹುಲ್‌ ಗಾಂಧಿ ಅವರಿಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶ ಉಲ್ಲೇಖಿಸಿ ವಕೀಲ ಬಿ.ಎನ್ ಜಗದೀಶ್ ವಾದ ಮಂಡಿಸಿದರು.

ಏನಿದು ಪ್ರಕರಣ?

08-05-2023ರಂದು 42ನೇ ವಿಶೇಷ ನ್ಯಾಯಾಲಯದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.‌ ಕೇಶವ ಪ್ರಸಾದ್ ಖಾಸಗಿ ದೂರ ದಾಖಲು ಮಾಡಿದ್ದರು. ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ A4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ.

“ಬಿಜೆಪಿ ಸರ್ಕಾರ 2019ರಿಂದ 2023ರವರೆಗೆ ಭ್ರಷ್ಟ ಆಡಳಿತ ನಡೆಸಿತ್ತು. ಆಗಿನ ಸಿಎಂ ಹುದ್ದೆ ರೂ. 2500 ಕೋಟಿಗೆ ಮಾರಾಟವಾಗಿತ್ತು. ಮಂತ್ರಿಗಳ ಹುದ್ದೆ ರೂ. 500 ಕೋಟಿ ಬಿಜೆಪಿ ಹೈಕಮಾಂಡ್‌ಗೆ ನೀಡಿ ಪಡೆದಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್‌ನಲ್ಲಿ 75% ಡೀಲ್ ನಡೆದಿದೆ. ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್‌ಗಳಲ್ಲಿ 40% ಡೀಲ್, ಮಠಕ್ಕೆ ನೀಡುವ ಅನುದಾನದಲ್ಲಿ 30% ಡೀಲ್, ಉಪಕರಣಗಳ ಪೂರೈಕೆಯಲ್ಲಿ 40% ಡೀಲ್, ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್‌ನಲ್ಲಿ 30% ಡೀಲ್, ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ 40% ಡೀಲ್ ನಡೆದಿದೆ” ಎಂದು ಆರೋಪಿಸಿದ್ದರು.

ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಪಡೆದ ಆರೋಪ ಮಾಡಿ ಈ ಬಗ್ಗೆ ಅನೇಕ ಜಾಹೀರಾತುಗಳನ್ನೂ ಕಾಂಗ್ರೆಸ್‌ ನೀಡಿತ್ತು. ಇದರಿಂದ ಬಿಜೆಪಿ ಪಕ್ಷಕ್ಕೆ ಅಪಮಾನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಐಪಿಸಿ 499, 500 ಅಡಿ ಖಾಸಗಿ ದೂರು ದಾಖಲು ಮಾಡಿದ್ದರು. ಈ ಬಗ್ಗೆ ವಾದ ಆಲಿಸಿ ಆರೋಪಿಗಳನ್ನು ಹಾಜರು ಪಡಿಸಲು ಕೋರ್ಟ್‌ ಸೂಚಿಸಿತ್ತು.

ಇದನ್ನೂ ಓದಿ: CM Siddaramaiah: ಸಿಎಂ, ಡಿಸಿಎಂ ಕೂಡ ಇಂದು ಕೋರ್ಟ್‌ ಕಟಕಟೆಯಲ್ಲಿ! ಏನಿದು ಕೇಸ್?‌

Continue Reading
Advertisement
Cow Smuggling
ಕ್ರೈಂ21 mins ago

Cow Smuggling : ಕಂಟೇನರ್‌, ಮಿಲ್ಕ್‌ ವ್ಯಾನ್‌ನಲ್ಲಿತ್ತು 70ಕ್ಕೂ ಹೆಚ್ಚು ಜಾನುವಾರು; ಹಿಂಸೆ ಕೊಟ್ಟವರು ಅರೆಸ್ಟ್‌

Gautam Gambhir
ಕ್ರೀಡೆ44 mins ago

Gautam Gambhir: ಗೌತಮ್​ ಗಂಭೀರ್​ ಭಾರತದ ಮುಂದಿನ ಕೋಚ್​; ಅಧಿಕೃತ ಘೋಷಣೆಯೊಂದೇ ಬಾಕಿ

Rameshwaram Cafe food on Anant Ambani, Radhika Merchant
ಸಿನಿಮಾ46 mins ago

Rameshwaram Cafe: ಅನಂತ್ ಅಂಬಾನಿ ಎರಡನೇ ಪ್ರಿ ವೆಡ್ಡಿಂಗ್‌ನಲ್ಲಿ ಮೇನ್‌ ಮೆನು ರಾಮೇಶ್ವರಂ ಕೆಫೆಯ ಪುಡಿ ಇಡ್ಲಿ ಮತ್ತು ಪುಡಿ ದೋಸೆ!

Family Fighting in Belgavi
ಬೆಳಗಾವಿ50 mins ago

Family Fighting : ಜಮೀನಿನ ವಿಚಾರದಲ್ಲಿ ಕುಟುಂಬಗಳ ಫೈಟ್; ಕುಡುಗೋಲು, ದೊಣ್ಣೆ ಹಿಡಿದು ಮಾರಾಮಾರಿ

Valmiki Corporation Scam
ಕರ್ನಾಟಕ51 mins ago

Valmiki Corporation Scam: ಮೃತ ಅಧೀಕ್ಷಕ ಚಂದ್ರಶೇಖರನ್‌ ಪತ್ನಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು

prashant kishor
ಪ್ರಮುಖ ಸುದ್ದಿ53 mins ago

Lok Sabha Election 2024: ಈಗಲೂ ಹೇಳ್ತೇನೆ ಕೇಳಿ, ಬಿಜೆಪಿಯೇ ಗೆಲ್ಲೋದು! ಎಕ್ಸಿಟ್ ಪೋಲ್‌ಗೆ ಮೊದಲು ಪ್ರಶಾಂತ್ ಕಿಶೋರ್ ಫೈನಲ್ ಲೆಕ್ಕಾಚಾರ ಹೀಗಿದೆ!

IndiGo Flight
ದೇಶ56 mins ago

IndiGo Flight: ಮತ್ತೊಂದು ಹುಸಿ ಬಾಂಬ್‌ ಕರೆ; ಮುಂಬೈಯಲ್ಲಿ ಇಂಡಿಗೋ ವಿಮಾನದ ತುರ್ತು ಲ್ಯಾಂಡಿಂಗ್‌

bhavani revanna SIT team
ಪ್ರಮುಖ ಸುದ್ದಿ1 hour ago

Bhavani Revanna: ಮಗ ಬಂದ, ಅಮ್ಮ ನಾಪತ್ತೆ! ಮನೆಯಿಂದ ಮಾಯವಾದ ಭವಾನಿ ರೇವಣ್ಣ; ಕಾದು ಕುಳಿತ ಎಸ್‌ಐಟಿ

Valmiki Corporation Scam
ಪ್ರಮುಖ ಸುದ್ದಿ2 hours ago

Valmiki Corporation Scam: ವಾಲ್ಮೀಕಿ ನಿಗಮ ಹಗರಣ ತನಿಖೆಗೆ ಸಿಬಿಐ ಎಂಟ್ರಿ ಫಿಕ್ಸ್; ನಾಗೇಂದ್ರ ವಿರುದ್ಧ ಕ್ರಮಕ್ಕೆ ಖರ್ಗೆ ಸೂಚನೆ

Assault Case
ಬೆಳಗಾವಿ2 hours ago

Assault Case : ಮಾರಾಮಾರಿಯಲ್ಲಿ ತಂದೆ ಕಿವಿ ಕಟ್‌; ಚಾಲಕ ಇಲ್ಲದ್ದಕ್ಕೆ ತಾನೇ ಆಂಬ್ಯುಲೆನ್ಸ್‌ ಓಡಿಸಿ ಆಸ್ಪತ್ರೆಗೆ ಕರೆತಂದ ಮಗ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌