ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು ಸಮಾಜದ ವಿವಿಧ ಸ್ತರದ ನಾಗರಿಕರೊಂದಿಗೆ ಬೆರೆತು, ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಬೆಲೆ ಏರಿಕೆ (Price Hike) ಹೇಗೆ ತಮ್ಮ ಜೀವನವನ್ನು ಬರ್ಬಾದ್ ಮಾಡುತ್ತಿದೆ ಎಂದು ಹೇಳುವ ಮೂಲಕ ಸೋಷಿಯಲ್ ಮೀಡಿಯಾದ (Social Media) ವೈರಲ್ (Viral Video) ಆಗಿದ್ದ ತರಕಾರಿ ಮಾರಾಟಗಾರ ರಾಮೇಶ್ವರ್ (Vegetable Vendor Rameshwar) ಜತೆಗೆ ಸೋಮವಾರ ರಾಹುಲ್ ಗಾಂಧಿ ಅವರು ಊಟ ಮಾಡಿದ್ದಾರೆ. ಜತೆ ಅವರ ಕಷ್ಟ ಕಾರ್ಪಣ್ಯಗಳನ್ನು ಆಲಿಸಿದ್ದಾರೆ.
ರಾಮೇಶ್ವರ್ ಜೊತೆಗಿನ ತಮ್ಮ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ ಅವರು, “ರಾಮೇಶ್ವರ್ ಒಬ್ಬ ಉತ್ಸಾಹಭರಿತ ವ್ಯಕ್ತಿ! ಅವರಲ್ಲಿ ಕೋಟಿಗಟ್ಟಲೆ ಭಾರತೀಯರ ಸೌಹಾರ್ದಯುತ ಸ್ವಭಾವದ ನೋಟವನ್ನು ಕಾಣಬಹುದು” ಎಂದು ಬರೆದುಕೊಂಡಿದ್ದಾರೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ನಗುಮುಖದಿಂದ ಮುನ್ನಡೆಯುವವರು ನಿಜವಾಗಿಯೂ ‘ಭಾರತ ಭಾಗ್ಯ ವಿಧಾತರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ತರಕಾರಿ ಮಾರಾಟಗಾರನ ಜತೆ ರಾಹುಲ್ ಗಾಂಧಿ
रामेश्वर जी एक ज़िंदादिल इंसान हैं!
— Rahul Gandhi (@RahulGandhi) August 14, 2023
उनमें करोड़ों भारतीयों के सहज स्वभाव की झलक दिखती है।
विपरीत परिस्थितियों में भी मुस्कुराते हुए मज़बूती से आगे बढ़ने वाले ही सही मायने में 'भारत भाग्य विधाता' हैं। pic.twitter.com/DjOrqzLwhj
ಕಾಂಗ್ರೆಸ್ ಪಕ್ಷವೂ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಈ ಮಾಹಿತಿಯನ್ನು ಷೇರ್ ಮಾಡಿದೆ. ರಾಮೇಶ್ವರ್ ಅವರು ಜನರ ನಾಯಕ(ರಾಹುಲ್ ಗಾಂಧಿ)ನನ್ನು ಭೇಟಿ ಮಾಡುವ ಬಯಕೆ ಹೊಂದಿದ್ದರು. ಅವರ ಬಯಕೆ ಈಗ ಈಡೇರಿದೆ ಎಂದು ಬರೆದುಕೊಂಡಿದೆ. ಎಕ್ಸ್‌ನಲ್ಲಿ (ಟ್ವಿಟರ್) ಬಹಳಷ್ಟು ಜನರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ ಹಾಗೂ ರಾಮೇಶ್ವರ್ ಅವರು ಊಟ ಮಾಡುವುದನ್ನು ಕಾಣಬಹುದು. ಈ ಸಮಯದಲ್ಲಿ ಇಬ್ಬರು ಉಭಯಕುಶಲೋಪರಿ ವಿಚಾರಿಸಿಕೊಳ್ಳುವುದನ್ನು ಕಾಣಬಹುದಾಗಿದೆ.
ಈ ರಾಮೇಶ್ವರ್ ಅವರು ಟೊಮೆಟೋ ಬೆಲೆ ಏರಿಕೆಯಾಗಿದ್ದರಿಂದ ಖರೀದಿಸಲು ಆಗುತ್ತಿಲ್ಲ ಎಂದು ತಮ್ಮ ಖಾಲಿಯಾದ ಮಾರಾಟ ಬಂಡಿಯನ್ನು ತೋರಿಸುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಬೇರೆ ತರಕಾರಿ ಕೊಳ್ಳುತ್ತೀಯಾ ಎಂದು ಕೇಳಿದಾಗ ಹಣ ಇಲ್ಲ ಎಂದು ಕಣ್ಣೀರಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು. ಬೆಲೆ ಏರಿಕೆಯ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದುಕ್ಕಾಗಿ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಈ ವಿಡಿಯೋ ಷೇರ್ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: Viral Video: ಕಾರು-ಫ್ಲೈಟ್ ಬಿಟ್ಟು, ರಾತ್ರಿ ಟ್ರಕ್ನಲ್ಲಿ ಚಂಡಿಗಢಕ್ಕೆ ಹೋದ ರಾಹುಲ್ ಗಾಂಧಿ
Rahul Gandhi: ಹಲವು ಜನರನ್ನು ಭೇಟಿ ಮಾಡುತ್ತಿರುವ ರಾಗಾ
ರಾಹುಲ್ ಗಾಂಧಿ ಅವರು ಸಮಾಜದ ವಿವಿಧ ಸ್ತರದ ಜನರನ್ನು ಭೇಟಿ ಮಾಡುತ್ತಿದ್ದಾರೆ. ಬೆಂಗಳೂರಲ್ಲಿ ಫುಡ್ ಡೆಲಿವರಿ ಹುಡುಗರನ್ನು ಭೇಟಿ ಮಾಡಿದ್ದ ರಾಗಾ, ಇತ್ತೀಚೆಗೆ ದಿಲ್ಲಿಯಲ್ಲಿ ಗ್ಯಾರೇಜ್‌ವೊಂದಕ್ಕೆ ಭೇಟಿ ನೀಡಿ, ಅಲ್ಲಿನ ಕೆಲಸಗಾರರ ಜತೆ ಮಾತನಾಡಿದ್ದರು. ಬಳಿಕ ಅವರು ಲಾರಿಯಲ್ಲಿ ಪ್ರಯಾಣಿಸಿ, ಚಾಲಕರ ಕಷ್ಟ ಸುಖಗಳನ್ನು ಆಲಿಸಿದ್ದರು. ಇದಾದ ಬಳಿಕ, ಹರ್ಯಾಣದ ಹೊಲವೊಂದರಲ್ಲಿ ರೈತ ಮಹಿಳೆಯರನ್ನು ಭೇಟಿ ಮಾಡಿ, ಅವರಿಗೆ ದಿಲ್ಲಿ ದರ್ಶನ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಇತ್ತೀಚೆಗೆ ಅಮೆರಿಕ ಪ್ರವಾಸದಲ್ಲಿದ್ದಾಗ ಅಲ್ಲಿನ ಭಾರತೀಯ ಟ್ರಕ್ ಡ್ರೈವರ್ ಜತೆಗೆ ಪ್ರಯಾಣಿಸಿದ್ದರು.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.