Site icon Vistara News

Rahul Gandhi Disqualified: ಲೋಕಸಭೆಯಿಂದ ಅನರ್ಹರಾದ ರಾಹುಲ್ ಮುಂದಿರುವ ದಾರಿಗಳೇನು?

Who is the best politician cooks food and Rahul Gandhi answered

ನವದೆಹಲಿ: 2019ರ ಮಾನಹಾನಿ ಪ್ರಕರಣದಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ(Rahul Gandhi Disqualified). ಈ ಪ್ರಕ್ರಿಯೆಯ ಬಗ್ಗೆ ಕಾನೂನು ತಜ್ಞರಲ್ಲೇ ಭಿನ್ನಾಭಿಪ್ರಾಯ ಮೂಡಿದೆ. ಕೆಲವರ ಪ್ರಕಾರ, ನ್ಯಾಯಾಲಯದಿಂದ ದೋಷಿ ಎಂದು ಘೋಷಿಸುತ್ತಿದ್ದಂತೆ ಆಟೋಮ್ಯಾಟಿಕ್ ಆಗಿ ಅವರ ಸದಸ್ಯತ್ವ ರದ್ದಾಗುತ್ತದೆ. ಮತ್ತೆ ಕೆಲವರ ಪ್ರಕಾರ, ಒಂದೊಮ್ಮೆ ಉನ್ನತ ನ್ಯಾಯಾಲಯದಲ್ಲಿ ಶಿಕ್ಷೆ ರದ್ದಾದರೆ, ಅನರ್ಹ ಪ್ರಕ್ರಿಯೆಯಿಂದ ಪಾರಾಗಬಹುದು.

ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯವು ಗರಿಷ್ಠ 2 ವರ್ಷ ಜೈಲು ಶಿಕ್ಷೆ ಹಾಗೂ ವಿಧಿಸಿತ್ತು. ಅಲ್ಲದೇ, ಜಾಮೀನು ಕೂಡ ಮಂಜೂರು ಮಾಡಿ, ಉನ್ನತ ಕೋರ್ಟ್‌ಗೆ ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶವನ್ನು ನೀಡಿದೆ.

1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್(8)3 ಪ್ರಕಾರ, ಸಂಸತ್ ಸದಸ್ಯರು ಯಾವುದೇ ಅಪರಾಧಕ್ಕಾಗಿ ಕನಿಷ್ಠ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಶಿಕ್ಷೆಗೆ ಗುರಿಯಾದರೆ, ಅವರು ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ. ಸೂರತ್ ಕೋರ್ಟ್‌ ಆದೇಶದ ಅನುಸಾರ ಲೋಕಸಭೆಯ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ್ದಾರೆ. ಅಲ್ಲದೇ, ಅವರ ಪ್ರತಿನಿಧಿಸುತ್ತಿರುವ ಕೇರಳದ ವಯನಾಡ್ ಕೇತ್ರವು ಖಾಲಿಯಾಗಿದೆ ಎಂದು ತಿಳಿಸಿದ್ದಾರೆ. ಪರಿಣಾಮ, ಕೇಂದ್ರ ಚುನಾವಣಾ ಆಯೋಗವು ಈ ಕ್ಷೇತ್ರಕ್ಕೆ ಹೊಸದಾಗಿ ಚುನಾವಣೆ ನಡೆಸಬೇಕಾಗುತ್ತದೆ. ಇದೇ ವೇಳೆ, ಅವರು ಕೇಂದ್ರ ದಿಲ್ಲಿಯಲ್ಲಿರುವ ತಮ್ಮ ಸರ್ಕಾರಿ ಬಂಗ್ಲೆಯನ್ನು ಖಾಲಿ ಮಾಡಬೇಕಾಗುತ್ತದೆ.

ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವುಂಟು?

ಸೂರತ್ ಕೋರ್ಟ್ ನೀಡಿರುವ ತೀರ್ಪನ್ನು ರಾಹುಲ್ ಗಾಂಧಿ ಅವರು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಇದೇ ವೇಳೆ, ಕಾಂಗ್ರೆಸ್ ನಾಯಕರು ಕಾನೂನು ಬದ್ಧತೆಯನ್ನು ಪ್ರಶ್ನಿಸಿದ್ದು, ಸಂಸದರ ಸದಸ್ಯತ್ವವನ್ನು ರದ್ದುಗೊಳಿಸುವ ಅಧಿಕಾರ ರಾಷ್ಟ್ರಪತಿಗಳಿಗಿದ್ದು, ಅವರು ಚುನಾವಣಾ ಆಯೋಗದ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಚುನಾವಣೆಗೆ ರಾಹುಲ್ ಸ್ಪರ್ಧಿಸಬಹುದೇ?

ನ್ಯಾಯಾಲಯವು ದೋಷಿ ಎಂದು ಘೋಷಿಸುತ್ತಿದ್ದಂತೆ ರಾಹುಲ್ ಗಾಂಧಿ ಅವರು ಆಟೋಮ್ಯಾಟಿಕ್ ಆಗಿ ಅನರ್ಹರಾಗುತ್ತಾರೆ. ಒಂದು ವೇಳೆ, ನ್ಯಾಯಾಲಯವು ಶಿಕ್ಷೆಯನ್ನು ಅಮಾನತುಗೊಳಿಸಿದರೂ, ಅನರ್ಹತೆಯಿಂದ ಪಾರಾಗಲು ಸಾಧ್ಯವಿಲ್ಲ. ಕೋರ್ಟ್ ಶಿಕ್ಷೆಗೆ ತಡೆ ನೀಡಬೇಕು. ರಾಹುಲ್ ಗಾಂಧಿ ಅಪರಾಧ ನಿರ್ಣಯಕ್ಕೆ ತಡೆ ನೀಡಿದರೆ ಮಾತ್ರ ಸಂಸತ್ತಿನ ಸದಸ್ಯರಾಗಿ ಉಳಿಯಬಹುದು ಎನ್ನುತ್ತಾರೆ ಕಾಂಗ್ರೆಸ್ ಮಾಜಿ ನಾಯಕರೂ ಆಗಿರುವ ವಕೀಲ ಕಪಿಲ್ ಸಿಬಲ್ ಅವರು.

ಇದನ್ನೂ ಓದಿ: Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್​ ಶಾಕ್​; ಸಂಸದ ಸ್ಥಾನದಿಂದ ಅನರ್ಹ

ಒಂದು ವೇಳೆ, ತೀರ್ಪನ್ನು ಯಾವುದೇ ಉನ್ನತ ನ್ಯಾಯಾಲಯವು ರದ್ದುಗೊಳಿಸದೇ ಇದ್ದರೆ ರಾಹುಲ್ ಗಾಂಧಿ ಅವರು ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವ ಅರ್ಹತೆಯನ್ನೂ ಕಳೆದುಕೊಳ್ಳುತ್ತಾರೆ. ಆದರೆ, ಈಗಿರುವ ಮಾಹಿತಿಯ ಪ್ರಕಾರ, ಸೂರತ್ ಕೋರ್ಟ್ ತೀರ್ಪನ್ನು ಪ್ರಶ್ನಿಸಲು ಕಾಂಗ್ರೆಸ್ ಕಾನೂನು ತಂಡವು ಸಜ್ಜಾಗಿದೆ ಎನ್ನಲಾಗಿದೆ.

Exit mobile version