ಚಂಡೀಗಢ: ಕಾಂಗ್ರೆಸ್ ನಾಯಕರು ಭಾರತ್ ಜೋಡೋ ಯಾತ್ರೆಯ ವೇಳೆ ಹಾಗೂ ಯಾತ್ರೆಯ ಬಳಿಕ ಜನರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದಾರೆ. ಅದರಲ್ಲೂ, ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರಿಗೆ ಅಪಾರ ಜನಬೆಂಬಲ ದೊರೆತಿದೆ. ಹಾಗಾಗಿ, ಅವರು ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಹರಿಯಾಣದ ಸೋನಿಪತ್‌ನಲ್ಲಿ ರಾಹುಲ್ ಗಾಂಧಿ (Rahul Gandhi) ಅವರು ಗದ್ದೆಗೆ ಇಳಿದು ಭತ್ತ ನಾಟಿ ಮಾಡಿದ್ದಾರೆ.
Haryana में किसानों के बीच पहुंचे जननायक Rahul Gandhi, देश की अन्नदाता की परेशानियां सुनीं | Sonipat pic.twitter.com/5RZSe70C0w
— Anup Dhote || अनुप धोटे (@AnupD_INC) July 8, 2023
ಹೌದು, ರಾಹುಲ್ ಗಾಂಧಿ ಅವರು ಶನಿವಾರ ಬೆಳಗ್ಗೆ ಹಿಮಾಚಲ ಪ್ರದೇಶದ ಶಿಮ್ಲಾಗೆ ತೆರಳುವ ಮಾರ್ಗದ ಮಧ್ಯೆ ಸೋನಿಪತ್ ಜಿಲ್ಲೆಯ ಮದಿನಾ ಗ್ರಾಮದ ಬಳಿ ರೈತರೊಂದಿಗೆ ಮಾತುಕತೆ ನಡೆಸಿದರು. ಇದೇ ವೇಳೆ ಅವರು ಭತ್ತದ ಗದ್ದೆಗೆ ಇಳಿದು, ರೈತರ ಜತೆಗೂಡಿ ಭತ್ತದ ನಾಟಿ ಮಾಡಿದರು.
ಹಾಗೆಯೇ, ಗದ್ದೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿದರು. ರಾಹುಲ್ ಗಾಂಧಿ ಅವರು ಬೆಳಗ್ಗೆ ಬೆಳಗ್ಗೆಯೇ ಬತ್ತ ನಾಟಿ ಮಾಡಿರುವ ಫೋಟೊಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: Rahul Gandhi: ಮೋದಿ ಚಾಯ್‌ವಾಲಾ ಆದರೆ, ರಾಹುಲ್ ಗಾಂಧಿ ಬೈಕ್ ರಿಪೇರಿವಾಲಾ; ಸಿಕ್ಕಿದೆ ಸಾಕ್ಷಿ
ಕೆಲ ದಿನಗಳ ಹಿಂದಷ್ಟೇ ರಾಹುಲ್ ಗಾಂಧಿ ಅವರು ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿರುವ ಬೈಕ್ ಮೆಕ್ಯಾನಿಕ್ ಶಾಪ್‌ಗಳಿಗೆ ಭೇಟಿ ನೀಡಿದ್ದರು. ಅಲ್ಲದೆ, ಅವರು ಬೈಕ್ ಮೆಕ್ಯಾನಿಕ್‌ಗಳಿಂದ ಬೈಕ್ ರಿಪೇರಿ ಮಾಡುವುದನ್ನು ಕಲಿತಿದ್ದರು. ಈಗ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ರಾಹುಲ್ ಗಾಂಧಿ ಮತ್ತೆ ಜನರಿಗೆ ಹತ್ತಿರವಾಗಿದ್ದಾರೆ. ರಾಹುಲ್ ಗಾಂಧಿ ನಡೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಎಂದಿನಂತೆ, ಒಂದಷ್ಟು ಜನ ಕಾಲೆಳೆದಿದ್ದಾರೆ.