ನವದೆಹಲಿ: ಸಂಸತ್‌ನ ಬಜೆಟ್ ಅಧಿವೇಶನದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬಳಸಿದ ಪದಗಳು ಅಸಾಂವಿಧಾನಿಕ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರಿಗೆ ಲೋಕಸಭೆ ಸಚಿವಾಲಯವು ನೋಟಿಸ್ ನೀಡಿದೆ.
ನರೇಂದ್ರ ಮೋದಿ ಅವರ ಕುರಿತು ರಾಹುಲ್ ಗಾಂಧಿ ಅವರು ಸದನದಲ್ಲಿ ಅಸಾಂವಿಧಾನಿಕ ಪದ ಬಳಸಿದ್ದಾರೆ ಎಂದು ಬಿಜೆಪಿ ಸಂಸದರಾದ ಪ್ರಹ್ಲಾದ್ ಜೋಶಿ ಹಾಗೂ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಗಮನಕ್ಕೆ ತಂದಿದ್ದರು. ಮೋದಿ ಕುರಿತು ರಾಹುಲ್ ಗಾಂಧಿ ಬಳಸಿದ ಪದ ಅಸಾಂವಿಧಾನಿಕ ಎಂದಿದ್ದರು. ಹಾಗಾಗಿ, ಫೆಬ್ರವರಿ ೧೫ರೊಳಗೆ ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ.
ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಅದರಲ್ಲೂ, ಉದ್ಯಮಿ ಗೌತಮ್ ಅದಾನಿ ಕುರಿತು ಹಿಂಡನ್‌ಬರ್ಗ್ ವರದಿಯನ್ನು ರಾಹುಲ್ ಗಾಂಧಿ ಉಲ್ಲೇಖಿಸಿದ್ದರು. ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅದಾನಿಯವರ ಆಸ್ತಿ ಹೆಚ್ಚಾಗಿದೆ ಎಂದು ಟೀಕಿಸಿದ್ದರು.
ಇದನ್ನೂ ಓದಿ: ಪ್ರಧಾನಿ ಮೋದಿ ಸಿಕ್ಕಾಪಟೆ ಶಾಕ್ ಆಗಿದ್ದಾರೆ, ಸಂಸತ್ತಿನಲ್ಲಿ ನನ್ನ ಯಾವ ಪ್ರಶ್ನೆಗೂ ಉತ್ತರಿಸಿಲ್ಲ ಎಂದ ರಾಹುಲ್ ಗಾಂಧಿ