ಜೈಪುರ: ಭಾರತ್ ಜೋಡೋ ಯಾತ್ರೆ (Bharat Jodo Yatra) ಕೈಗೊಳ್ಳುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಸದ್ಯ, ರಾಹುಲ್ ಗಾಂಧಿ ಅವರು ರಾಜಸ್ಥಾನದಲ್ಲಿ ಪಾದಯಾತ್ರೆ ಕೈಗೊಳ್ಳುತ್ತಿದ್ದಾರೆ. ಹೀಗೆ, ಯಾತ್ರೆ ಮಧ್ಯೆ ರೈತರೊಬ್ಬರ ಮನೆಗೆ ಚಹಾ ಕುಡಿಯಲು ಹೋದ ಕಾಂಗ್ರೆಸ್ ನಾಯಕನಿಗೆ ಮುಜುಗರದ ಸಂಗತಿ ಎದುರಾಗಿದೆ.
ಸೋಮವಾರ (ಡಿಸೆಂಬರ್ 12) ಸವಾಯಿ ಮಾಧೋಪುರ ಜಿಲ್ಲೆಯಲ್ಲಿ ಪಾದಯಾತ್ರೆ ಕೈಗೊಂಡ ರಾಹುಲ್, ಬೆಳಗ್ಗೆ ಖಿಜುರಿ ಗ್ರಾಮದಲ್ಲಿ ರೈತರೊಬ್ಬರ ಮನೆಗೆ ಚಹಾ ಕುಡಿಯಲು ಹೋದರು. ವಾಣಿಪ್ರಸಾದ್ ಮೀನಾ ಎಂಬ ರೈತರು ರಾಹುಲ್ ಗಾಂಧಿ ಅವರನ್ನು ಸತ್ಕರಿಸಿ, ಚಹಾ ನೀಡಿದರು. ಇದೇ ವೇಳೆ ಅವರು ತಮ್ಮ ಮನೆಯ ವಿದ್ಯುತ್ ಬಿಲ್ ಸಮಸ್ಯೆಯನ್ನೂ ಹೇಳಿಕೊಂಡರು.
“ಮೀಟರ್ ರೀಡಿಂಗ್‌ಗೆ ಅಧಿಕಾರಿಗಳು ಮನೆಗೆ ಬರುವುದಿಲ್ಲ. ತಮಗೆ ಬೇಕಾದಷ್ಟು ಶುಲ್ಕವನ್ನು ಹಾಕಿ, ಬಿಲ್ ಕಳುಹಿಸುತ್ತಾರೆ. ಇದರಿಂದ ನಾನು ಹೆಚ್ಚಿನ ಬಿಲ್ ಪಾವತಿಸಬೇಕಾಗಿದೆ. ಇಡೀ ಗ್ರಾಮದಲ್ಲಿ ಇಂತಹದ್ದೇ ಪರಿಸ್ಥಿತಿ ಇದೆ. ರಸಗೊಬ್ಬರಕ್ಕೂ ನಿಗದಿಗಿಂತ ಹೆಚ್ಚಿನ ಬೆಲೆ ನೀಡಬೇಕಿದೆ” ಎಂದು ದೂರಿದರು. ರೈತರ ಸಮಸ್ಯೆ ಕೇಳಿದ ರಾಹುಲ್ ಗಾಂಧಿ, ಬಗೆಹರಿಸುವ ಭರವಸೆ ನೀಡಿದರು ಎಂದು ತಿಳಿದುಬಂದಿದೆ. ರಾಹುಲ್ ಗಾಂಧಿ ಜತೆ ಪ್ರಿಯಾಂಕಾ ವಾದ್ರಾ ಕೂಡ ಇದ್ದರು.
ಇದನ್ನೂ ಓದಿ | Video| ಭಾರತ್ ಜೋಡೋ ಯಾತ್ರೆಗೆ ನಟಿ ಸ್ವರಾ ಭಾಸ್ಕರ್ ಸಾಥ್; ರಾಹುಲ್ ಗಾಂಧಿ ಜತೆ ಮಾತು-ನಡಿಗೆ