Site icon Vistara News

Viral Video | ವೇದಿಕೆ ಮೇಲೆ ತಂಗಿ ಪ್ರಿಯಾಂಕಾರನ್ನು ಅಪ್ಪಿ, ಮುತ್ತಿಕ್ಕಿ ಮುದ್ದು ಮಾಡಿದ ರಾಹುಲ್​ ಗಾಂಧಿ

Priyanka Gandhi

ನವ ದೆಹಲಿ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಂಗಳವಾರ ಮುಂಜಾನೆ ಉತ್ತರ ಪ್ರದೇಶವನ್ನು ಪ್ರವೇಶಿಸಿದೆ. ಘಾಜಿಯಾಬಾದ್​ನ ಲೋನಿ ಮೂಲಕ ಉತ್ತರಪ್ರದೇಶಕ್ಕೆ ಕಾಲಿಟ್ಟ ಯಾತ್ರೆಯನ್ನು ರಾಹುಲ್​ ಗಾಂಧಿ ಸೋದರಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸ್ವಾಗತಿಸಿದರು. ಇಲ್ಲೊಂದು ಸಣ್ಣ ಕಾರ್ಯಕ್ರಮವೂ ನಡೆಯಿತು.

ಈ ಕಾರ್ಯಕ್ರಮದ ವೇದಿಕೆ ಮೇಲೆ ರಾಹುಲ್​ ಗಾಂಧಿ ತನ್ನ ತಂಗಿ ಪ್ರಿಯಾಂಕಾ ಗಾಂಧಿಯನ್ನು ಅಪ್ಪಿಕೊಂಡು ಮುದ್ದಾಡಿಬಿಟ್ಟಿದ್ದಾರೆ. ಆ ವಿಡಿಯೊ ವೈರಲ್ ಆಗಿದೆ. ರಾಹುಲ್ ಗಾಂಧಿಗಿಂತ ಪ್ರಿಯಾಂಕಾ ಗಾಂಧಿ 2 ವರ್ಷಕ್ಕೆ ಚಿಕ್ಕವರು. ಈ ಅಣ್ಣ-ತಂಗಿ ಮಧ್ಯೆ ಚೆಂದನೆಯ ಬಾಂಧವ್ಯ ಇದೆ. ಅದನ್ನು ನಾವು ಹಲವು ಬಾರಿ ನೋಡಿದ್ದೇವೆ. ಅದು ಈಗ ಭಾರತ್​ ಜೋಡೋ ಯಾತ್ರೆಯ ಸ್ಟೇಜ್​ ಮೇಲೆ ಇನ್ನೊಮ್ಮೆ ಗೋಚರವಾಯಿತು.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ವೇದಿಕೆ ಮೇಲೆ ಅಕ್ಕ-ಪಕ್ಕ ಕುಳಿತಿದ್ದರು. ರಾಹುಲ್ ಗಾಂಧಿ ತನ್ನ ತಂಗಿಯ ಹೆಗಲ ಸುತ್ತ ತೋಳು ಬಳಸಿಕೊಂಡು ಕುಳಿತಿದ್ದವರು, ಪ್ರಿಯಾಂಕಾರನ್ನು ತನ್ನೆಡೆಗೆ ಎಳೆದುಕೊಂಡು ಅವರ ಕೆನ್ನೆಗೆ, ತಲೆಗೆ ಮುತ್ತುಕೊಟ್ಟಿದ್ದಾರೆ. ಪ್ರಿಯಾಂಕಾ ತಲೆಯ ಮೇಲೆ ಕೈ ಸವರಿದ್ದಾರೆ. ಈ ವೇಳೆ ಅಣ್ಣ-ತಂಗಿ ಇಬ್ಬರೂ ಬಾಯ್ತುಂಬ ನಗುತ್ತಿರುವುದನ್ನು ವೈರಲ್ ಆದ ವಿಡಿಯೊದಲ್ಲಿ ನೋಡಬಹುದು.

ರಾಹುಲ್ ಗಾಂಧಿ ತನ್ನ ತಂಗಿಯನ್ನು ಮುದ್ದು ಮಾಡಿದ ವಿಡಿಯೊವನ್ನು ಕಾಂಗ್ರೆಸ್ ಶೇರ್​ ಮಾಡಿಕೊಂಡಿದ್ದು, ಕ್ಯಾಪ್ಷನ್​ನಲ್ಲಿ ಎರಡು ಹೃದಯದ ಇಮೋಜಿಯನ್ನು ಕೊಟ್ಟಿದೆ. ವಿಡಿಯೊಕ್ಕೆ ಮೈ ರಹೂನ್​ ನಾ ತೇರೆ ಬಿನಾ (ನನಗೆ ನಿನ್ನನ್ನು ಬಿಟ್ಟು ಇರಲು ಇಷ್ಟವಿಲ್ಲ ಎಂಬ ಹಾಡನ್ನು ಹೊಂದಿಸಲಾಗಿದೆ. ಈ ಹಾಡು ಕೂಡ ಅಣ್ಣ-ತಂಗಿಯರ ಬಾಂಧವ್ಯ ಸಾರುವ ಹಾಡೇ ಆಗಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ರಾಹುಲ್​ ಗಾಂಧಿ ತನ್ನಮ್ಮ ಸೋನಿಯಾ ಗಾಂಧಿಯವರ ಕೆನ್ನೆ ಹಿಡಿದು ಕೀಟಲೆ ಮಾಡುತ್ತಿದ್ದ ವಿಡಿಯೊ-ಫೋಟೋಗಳು ವೈರಲ್​ ಆಗಿದ್ದವು.

ಇದನ್ನೂ ಓದಿ: Viral Video | ತಾಯಿಯ ಕೆನ್ನೆ ಹಿಡಿದು ಕೀಟಲೆ ಮಾಡಿದ ರಾಹುಲ್‌ ಗಾಂಧಿ, ಮಗನ ಚೇಷ್ಟೆಗೆ ನಕ್ಕ ಸೋನಿಯಾ, ಕ್ಯೂಟ್ ವಿಡಿಯೊ ನೋಡಿ

Exit mobile version