ರಾಯ್‌ಬರೇಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಕೇರಳದ ವಯನಾಡು ಜತೆಗೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲೂ ಕಣಕ್ಕಿಳಿದಿದ್ದಾರೆ. ಸೋನಿಯಾ ಗಾಂಧಿ ಅವರು ಸ್ಪರ್ಧಿಸುತ್ತಿದ್ದ ಕ್ಷೇತ್ರದಲ್ಲಿ ಈ ಬಾರಿ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರು ರಾಯ್‌ಬರೇಲಿಯಲ್ಲಿ ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ, ರಾಹುಲ್ ಗಾಂಧಿ ಅವರಿಗೆ ಹಲವೆಡೆ ಜನ ಜೈ ಶ್ರೀರಾಮ್ (Jai Shri Ram) ಎಂದು ಘೋಷಣೆ ಕೂಗಿ ಸ್ವಾಗತಿಸುತ್ತಿದ್ದಾರೆ.
ಇದಕ್ಕೆ ನಿದರ್ಶನ ಎಂಬಂತೆ, ರಾಯ್‌ಬರೇಲಿಯ ಗ್ರಾಮವೊಂದರಲ್ಲಿ ಜನರು ರಾಹುಲ್ ಗಾಂಧಿ ಅವರ ಎದುರು ಜೈ ಶ್ರೀರಾಮ್ ಎಂಬುದಾಗಿ ಘೋಷಣೆ ಕೂಗಿದ್ದಾರೆ. ಇದನ್ನು ಕೇಳುತ್ತಲೇ ರಾಹುಲ್ ಗಾಂಧಿ ಅವರು ಕೈ ಮುಗಿದು ಗ್ರಾಮದಿಂದ ತೆರಳಿದ್ದಾರೆ. ರಾಯ್‌ಬರೇಲಿಯ ಮತ್ತೊಂದು ಕಡೆಯೂ ರಾಹುಲ್ ಗಾಂಧಿ ಅವರಿಗೆ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿ ಜನ ಸ್ವಾಗತಿಸಿದ್ದಾರೆ. ಈ ಎರಡೂ ವಿಡಿಯೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Rahul Gandhi goes back after Locals of Rai Bareilly greeted him with chants of Jai Shree Ram and Har Har Mahadev pic.twitter.com/bjoaOHKtsH
— Megh Updates 🚨™ (@MeghUpdates) May 20, 2024
ಹನುಮಾನ್ ದೇಗುಲಕ್ಕೆ ಭೇಟಿ
ರಾಯ್‌ಬರೇಲಿಯಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ತೆರಳಿದ ರಾಹುಲ್ ಗಾಂಧಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಈ ವಿಡಿಯೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನೂ ಕೆಲವೊಬ್ಬರು, ಅವಸರ ಅವಸರದಲ್ಲಿ ಪೂಜೆ ಮಾಡುವುದು, ದೇವರ ಮೇಲೆ ಪೂಜಾ ಸಾಮಗ್ರಿಗಳನ್ನು ಎಸೆಯುವುದು ನೋಡಿದರೆ ಇವರು ಎಂತಹ ಹಿಂದು ಎಂಬುದು ಗೊತ್ತಾಗುತ್ತದೆ ಎಂಬುದಾಗಿ ಟೀಕಿಸಿದ್ದಾರೆ.
Look at the way Rahul Gandhi is doing puja… Just throwing away things at Hanuman ji.
— BALA (@erbmjha) May 20, 2024
Yesterday, Priyanka Gandhi said that Rahul Gandhi knows more about Hinduism than PM Modi…
I mean, why are these clowns allowed to visit temples? Rahul Gandhi should be banned from doing puja… pic.twitter.com/FNZKWlJEc8
ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ಕಾಂಗ್ರೆಸ್ ಬಹಿಷ್ಕರಿಸಿದ ಕಾರಣ ಕಾಂಗ್ರೆಸ್ ನಾಯಕರ ಎದುರು ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್ ಎಂಬುದಾಗಿ ಘೋಷಣೆ ಕೂಗುತ್ತಾರೆ. ಅದೇ ರೀತಿ, ರಾಹುಲ್ ಗಾಂಧಿ ಅವರ ಎದುರು ಕೂಡ ಜನ ಜೈ ಶ್ರೀರಾಮ್ ಎಂಬುದಾಗಿ ಕೂಗಿದ್ದಾರೆ. 2004ರಿಂದ ಸೋನಿಯಾ ಗಾಂಧಿ ಅವರು ರಾಯ್‌ಬರೇಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. ಅವರೀಗ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾರಣ ಅವರ ಪುತ್ರ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ರಾಹುಲ್ ಗಾಂಧಿ ಅವರು ರಾಯ್‌ಬರೇಲಿಯಲ್ಲಿ ನಾಮಪತ್ರ ಕೂಡ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪ್ರಚಾರದ ವೇಳೆ ರಾಹುಲ್ ಗಾಂಧಿಯಿಂದ ಚೀನಾ ಸಂವಿಧಾನ ಪ್ರತಿ ಪ್ರದರ್ಶನ; ಹಿಮಂತ ಬಿಸ್ವಾ ಗಂಭೀರ ಆರೋಪ