Site icon Vistara News

No Confidence Motion: ಮಣಿಪುರದಲ್ಲಿ ವಿಷಯದಲ್ಲಿ ರಾಹುಲ್ ಗಾಂಧಿ ಡ್ರಾಮಾ! ಸಚಿವ ಅಮಿತ್ ಶಾ ಕಿಡಿ

Amit Shah in Lok Sabha

ನವದೆಹಲಿ: ಬಿಜೆಪಿ (Bharatiya Janata Party – BJP) ನೇತೃತ್ದವ ಎನ್‌ಡಿಎ (NDA Government) ಸರ್ಕಾರದ ವಿರುದ್ಧ ಮಂಡಿಸಲಾಗಿರುವ ಅವಿಶ್ವಾಸ ನಿರ್ಣಯ (No Confidence Motion) ಚರ್ಚೆಯಲ್ಲಿ ಪಾಲ್ಗೊಂಡ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Government Home Minister Amit Shah), ಈಶಾನ್ಯ ಭಾರತದಲ್ಲಿ ತಮ್ಮ ಸರ್ಕಾರ ಹೇಗೆ ರೈತರು, ಮಹಿಳೆಯರು ಮತ್ತು ಬಡವರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ವಿವರಿಸಿದರು. ಅಲ್ಲದೇ, ಮಣಿಪುರ (Manipur Violence) ವಿಷಯದಲ್ಲಿ ರಾಹುಲ್ ಗಾಂಧಿ (Rahul Gandhi) ಅವರು ಡ್ರಾಮಾ ಮಾಡುತ್ತಿದ್ದಾರೆ ಎಂದು ದೂರಿದರು. ಈಶಾನ್ಯ ರಾಜ್ಯವನ್ನು ನಿರ್ಲಕ್ಷಿಸಲಾಗಿದೆ ಎಂಬುದನ್ನು ಅಲ್ಲಗಳೆದ ಅವರು, ನರೇಂದ್ರ ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವು “ರಾಜಕೀಯ ಪ್ರೇರಿತ” ಆಗಿರುವುದರಿಂದ ಸರ್ಕಾರದ “ಸಾಧನೆಗಳ” ಮೇಲೆ ಕೇಂದ್ರೀಕರಿಸಬೇಕಾಗಿದೆ ಎಂದು ಹೇಳಿದರು.

ಮಣಿಪುರದ ಕುರಿತು ರಾಜಕೀಯ ಮಾಡುತ್ತಿರುವುದು ನಾಚಿಕೆಗೇಡು. ಅವರು (ಕಾಂಗ್ರೆಸ್) ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಏನು ಮಾಡಿಲ್ಲ. ನಾವು ಈ ರಾಜ್ಯಗಳ ಅಭಿವೃದ್ಧಿಯನ್ನು ಕೈಗೊಳ್ಳುತ್ತಿದ್ದೇವೆ. 10 ವರ್ಷಗಳ ಯುಪಿಎ ಅವಧಿಯಲ್ಲಿ ಏನನ್ನೂ ಮಾಡಲಿಲ್ಲ. ಆದರೆ, ಕಾಂಗ್ರೆಸ್ ಕೇವಲ ಒಳಜಗಳವನ್ನು ಪ್ರೇರೇಪಿಸುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.

ಈಶಾನ್ಯ ರಾಜ್ಯಗಳಿಗೆ ಮೋದಿ 50 ಬಾರಿ ಭೇಟಿ

ಈಶಾನ್ಯ ರಾಜ್ಯಗಳಲ್ಲಿನ ಹಿಂಸಾಚಾರ ಪ್ರಕರಣಗಳಲ್ಲಿ ಶೇ.68ರಷ್ಟು ಕಡಿಮೆಯಾಗಿವೆ. ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ಸಮಯ ಮತ್ತು ಅಂತರವನ್ನು ಕಡಿಮೆ ಮಾಡಿವೆ. ಕಳೆದ 9 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 50ಕ್ಕೂ ಹೆಚ್ಚು ಬಾರಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಅವರು ಈಶಾನ್ಯ ರಾಜ್ಯಗಳನ್ನು ಭಾರತದ ಜೆತೆಗೆ ಬೆಸೆದಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಿರುಗೇಟು ನೀಡಿದರು.

ಜನರನ್ನು ತಪ್ಪುದಾರಿಗೆಳೆಯಲು ಅವಿಶ್ವಾಸ ನಿರ್ಣಯ

ಜನರನ್ನು ತಪ್ಪುದಾರಿಗೆ ಎಳೆಯುವ ಕಾರಣಕ್ಕಾಗಿಯೇ ಅವಿಶ್ವಾಸ ನಿರ್ಣಯವನ್ನು ಮಂಡಿಸಲಾಗಿದೆ ಎಂದು ಆರೋಪಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 30 ವರ್ಷಗಳ ಕಾಲ ಭಾರತವು ವಂಶಪಾರಂಪರ್ಯ ರಾಜಕಾರಣ, ಭ್ರಷ್ಟಾಚಾರ, ಜಾತಿಯತೆ ಬಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಎಲ್ಲ ಅನಿಷ್ಠಗಳನ್ನು ಮುಗಿಸಿದ್ದಾರೆ ಮತ್ತು ದೇಶವು ಪ್ರದರ್ಶನವನ್ನು ತೋರುವ ರಾಜಕಾರಣವನ್ನು ನೀಡಿದ್ದಾರೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Rahul Gandhi: ಸಂಸತ್ತಲ್ಲಿ ಸ್ಮೃತಿ ಇರಾನಿಗೆ ಫ್ಲೈಯಿಂಗ್‌ ಕಿಸ್‌ ಕೊಟ್ಟ ರಾಹುಲ್‌ ಗಾಂಧಿ; ಸಂಸದೆಯರಿಂದ ದೂರು

ಮೋದಿ ಮೇಲೆ ಭಾರತದ ವಿಶ್ವಾಸ

ಸ್ವತಂತ್ರ ಭಾರತದಲ್ಲಿ ಒಬ್ಬ ಒಬ್ಬನೇ ನಾಯಕನ ಮೇಲೆ ಇಡೀ ದೇಶವನ್ನು ನಂಬಿಕೆಯನ್ನು, ವಿಶ್ವಾಸವನ್ನು ಹೊಂದಿದ್ದರೆ ಅದು ನರೇಂದ್ರ ಮೋದಿ ಅವರು ಮಾತ್ರ. ಈ ಅವಿಶ್ವಾಸ ನಿರ್ಣಯವು ಜನರು ತಮ್ಮ ಆಯ್ಕೆಯನ್ನು ಮಾಡುವುದರಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಅಡೆತಡೆಯನ್ನು ಸೃಷ್ಟಿಸುವುದಕ್ಕಾಗಿ ಮಾತ್ರವೇ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೂರಿದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version