ನವದೆಹಲಿ: ರಾಹುಲ್ ಗಾಂಧಿ (Rahul Gandhi) ಅವರ 3,500 ಕಿ.ಮೀ. ಭಾರತ್ ಜೋಡೋ ಯಾತ್ರೆ ನಾನಾ ಕಾರಣಗಳಿಂದಾಗಿ ಸದ್ದು ಮಾಡುತ್ತಿದೆ. ಅದೇ ರೀತಿ, ಈ ಹಿಂದೆ ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ (Prashant Kishor) ಅವರು, ”ಅವರೆಲ್ಲ(ರಾಹುಲ್ ಗಾಂಧಿ) ದೊಡ್ಡ ಮಂದಿ,” ಎಂದು ವ್ಯಂಗ್ಯದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಶಾಂತ್ ಕಿಶೋರ್ ಕೂಡ ಬಿಹಾರದಲ್ಲಿ ಜನ್ ಸುರಾಜ್ ಹೆಸರಿನಲ್ಲಿ ಪಾದಯಾತ್ರೆಯನ್ನು ಮಾಡುತ್ತಿದ್ದಾರೆ. ಬಿಹಾರದ ಮೋತಿಹಾರ್‌ನಲ್ಲಿ ಪ್ರಶಾಂತ್ ಕಿಶೋರ್ ಅವರಿಗೆ, ”ನೀವು ನಡೆಸುತ್ತಿರುವ ಪಾದಯಾತ್ರೆ ಹಾಗೂ ರಾಹುಲ್ ಗಾಂಧಿ ನಡೆಸುತ್ತಿರುವ ಪಾದಯಾತ್ರೆ ಮಧ್ಯೆ ಸಾಮ್ಯತೆ ಇದೆಯೇ” ಎಂದು ಪ್ರಶ್ನಿಸಿದರು. ಆಗ ಉತ್ತರಿಸಿದ ಕಿಶೋರ್ ಅವರು, ”ಅವರು ದೊಡ್ಡ ಮಂದಿ, ಅವರೊಂದಿಗೆ ಹೋಲಿಸಿದರೆ ನಾನೂ ಏನೂ ಅಲ್ಲ” ಎಂದು ಉತ್ತರಿಸಿದ್ದರು.
ರಾಹುಲ್ ಗಾಂಧಿ 3,500 ಕಿ ಮೀ ಪಾದಯಾತ್ರೆ ಮಾಡುತ್ತಿದ್ದಾರೆ. ನನಗೆ ಕಿಲೋಮೀಟರ್ ಮುಖ್ಯವಲ್ಲ. ನಾನು ಅಕ್ಟೋಬರ್‌ನಿಂದ ನಿರಂತರವಾಗಿ ಪಾದಯಾತ್ರೆ ಮಾಡುತ್ತಿದ್ದೇನೆ. ಆದರೆ, ನನ್ನ ದೈಹಿಕ ಸಾಮರ್ಥ್ಯದ ಪುರಾವೆಯಾಗಿ ಅದನ್ನು ತೋರಿಸಲು ನಾನು ಬಯಸುವುದಿಲ್ಲ ಎಂದು ಕಿಶೋರ್ ಅವರು ವ್ಯಂಗ್ಯವಾಗಿ ಹೇಳಿದರು.
ಇದನ್ನೂ ಓದಿ | ಕಾಂಗ್ರೆಸ್ ಆಫರ್ Not OK ಎಂದ PK: ಪ್ರಶಾಂತ್ ಕಿಶೋರ್ ತೀರ್ಮಾನಕ್ಕೆ 4 ಕಾರಣಗಳು