Site icon Vistara News

Bharat Jodo Yatra 2: ಗಾಂಧೀಜಿ ಜನ್ಮಸ್ಥಳದಿಂದ ರಾಹುಲ್‌ ಗಾಂಧಿ ಭಾರತ್‌ ಜೋಡೋ 2; ಡೇಟ್‌ ಫಿಕ್ಸ್

Rahul Gandhi Bharat Jodo Yatra

Rahul Gandhi Plans To Launch Bharat Jodo Yatra 2 From Mahatma Gandhi's Birtplace

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮಿಳುನಾಡಿನ ಕನ್ಯಾಕುಮಾರಿಯಿಂದ ಜಮ್ಮು-ಕಾಶ್ಮೀರದ ಶ್ರೀನಗರದವರೆಗೆ ಕೈಗೊಂಡ ಭಾರತ್‌ ಜೋಡೋ ಯಾತ್ರೆಯು ಅಭೂತಪೂರ್ವ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ (Rahul Gandhi) ಅವರು ಎರಡನೇ ಹಂತದಲ್ಲಿ ಭಾರತ್‌ ಜೋಡೋ ಯಾತ್ರೆ (Bharat Jodo Yatra 2) ಕೈಗೊಳ್ಳಲು ಸಿದ್ಧರಾಗುತ್ತಿದ್ದಾರೆ. ಭಾರತ್‌ ಜೋಡೋ ಯಾತ್ರೆ 2.0ಅನ್ನು ರಾಹುಲ್‌ ಗಾಂಧಿ ಅವರು ಮಹಾತ್ಮ ಗಾಂಧೀಜಿ ಅವರ ಜನ್ಮಸ್ಥಳದಿಂದಲೇ ಕೈಗೊಳ್ಳಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಮಹಾತ್ಮ ಗಾಂಧೀಜಿ ಅವರ ಹುಟ್ಟೂರಾದ ಗುಜರಾತ್‌ನ ಪೋರಬಂದರ್‌ನಿಂದ ಗಾಂಧೀಜಿ ಜಯಂತಿಯಾದ ಅಕ್ಟೋಬರ್‌ 2ರಂದೇ ಎರಡನೇ ಹಂತದ ಭಾರತ್‌ ಜೋಡೋ ಯಾತ್ರೆಯನ್ನು ಆರಂಭಿಸಲಿದ್ದಾರೆ. ಇದಕ್ಕಾಗಿ ಕಾಂಗ್ರೆಸ್‌ ಹಿರಿಯ ನಾಯಕರಾದ ಕೆ.ಸಿ.ವೇಣುಗೋಪಾಲ್‌ ಹಾಗೂ ಜೈರಾಮ್‌ ರಮೇಶ್‌ ಅವರು ಸಕಲ ಸಿದ್ಧತೆ ಕೈಗೊಳ್ಳುತ್ತಿದ್ದಾರೆ. ಭಾರತ್‌ ಜೋಡೋ ಯಾತ್ರೆಯ ಪಾದಯಾತ್ರೆ ಸಾಗುವ ಮಾರ್ಗವನ್ನು ಅವರು ಅಂತಿಮಗೊಳಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Rahul Gandhi Bharat Jodo Yatra

ಎಲ್ಲಿಂದ ಎಲ್ಲಿಗೆ ಸಾಗಲಿದೆ ಯಾತ್ರೆ?

ಎರಡನೇ ಹಂತದ ಭಾರತ್‌ ಜೋಡೋ ಯಾತ್ರೆಯನ್ನು ಗುಜರಾತ್‌ನಿಂದ ಮೇಘಾಲಯವರೆಗೆ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಗುಜರಾತ್‌ನಿಂದ ಆರಂಭವಾಗುವ ಭಾರತ್‌ ಜೋಡೋ ಯಾತ್ರೆಯು ವಿಧಾನಸಭೆ ಚುನಾವಣೆ ನಡೆಯುವ ರಾಜಸ್ತಾನ, ಮಧ್ಯಪ್ರದೇಶದಲ್ಲಿ ಸಾಗಲಿದೆ. ಹಾಗೆಯೇ, ಛತ್ತೀಸ್‌ಗಢ, ಮಿಜೋರಾಂ ಮೂಲಕ ಸಾಗಿ ಮೇಘಾಲಯದಲ್ಲಿ ಜನವರಿಯಲ್ಲಿ ಸಮಾರೋಪಗೊಳ್ಳಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆ ಶುರುವಾಗಿ 3ನೇ ದಿನಕ್ಕೆ ರಾಹುಲ್​ ಗಾಂಧಿ ಇನ್ನು ನಡೆಯಲಾಗದು ಎಂದಿದ್ದರು: ಕಾರಣ ತಿಳಿಸಿದ ವೇಣುಗೋಪಾಲ್​

ಮೊದಲ ಹಂತದ ಭಾರತ್‌ ಜೋಡೋ ಯಾತ್ರೆಯು 2022ರ ಸೆಪ್ಟೆಂಬರ್‌ 7ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗಿ 2023ರ ಜನವರಿ 30ರಂದು ಶ್ರೀನಗರದಲ್ಲಿ ಸಮಾರೋಪಗೊಂಡಿತ್ತು. ಪ್ರತಿಯೊಂದು ರಾಜ್ಯಗಳಲ್ಲಿಯೂ ರಾಹುಲ್‌ ಗಾಂಧಿ ಅವರಿಗೆ ಯುವಕರಿಂದ ಹಿಡಿದು ಹಿರಿಯರವರೆಗೆ, ಮಕ್ಕಳಿಂದ ಹಿಡಿದು ಮಹಿಳೆಯರವರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಲೋಕಸಭೆ ಚುನಾವಣೆ ಹಾಗೂ ರಾಹುಲ್‌ ಗಾಂಧಿ ರಾಜಕೀಯ ಏಳಿಗೆಯ ದೃಷ್ಟಿಯಿಂದ ಭಾರತ್‌ ಜೋಡೋ ಯಾತ್ರೆಯು ತುಂಬ ಮಹತ್ವ ಪಡೆದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

Exit mobile version