Site icon Vistara News

Rahul Gandhi : ರಾಹುಲ್ ಗಾಂಧಿಗೆ ಉತ್ತರ ಪ್ರದೇಶದ ಕೋರ್ಟ್​​ನಿಂದ ಸಮನ್ಸ್​

Rahul Gandhi

ಜೈಪುರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಶಿಕ್ಷೆಗೆ ಒಳಗಾಗುವ ಜತೆಗೆ ಸಂಸತ್​ ಸದಸ್ಯ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿಗೆ (Rahul Gandhi : ) ಮತ್ತೊಂದು ಇದೇ ಮಾದರಿಯ ಸಂಕಷ್ಟ ಎದುರಾಗಿದೆ. ಗೃಹಸಚಿವ ಅಮಿತ್​ ಶಾ ವಿರುದ್ಧ ನೀಡಿದ್ದ ಹೇಳಿಕೆ ಕುರಿತು ದಾಖಲಾಗಿದ್ದ ಪ್ರಕರಣದ ವಿಚಾರಣೆಗೆ ಹಾಜರಾಗದ ಅವರಿಗೆ ಉತ್ತರ ಪ್ರದೇಶದ ಸುಲ್ತಾನ್​ಪುರದ ಕೋರ್ಟ್​ನಿಂದ​​ ಸಮನ್ಸ್​ ಜಾರಿಯಾಗಿದೆ.

ಗೃಹ ಸಚಿವ ಅಮಿತ್ ಶಾ ವಿರುದ್ಧ ಕೆಲವು ಹೇಳಿಕೆಗಳನ್ನು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಸಂಸದ-ಶಾಸಕ ನ್ಯಾಯಾಲಯವು ಜನವರಿ 6ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ ಎಂದು ವಕೀಲರು ತಿಳಿಸಿದ್ದಾರೆ. ಶನಿವಾರ (ಡಿಸೆಂಬರ್​16ರಂದು) ಹಾಜರಾಗುವಂತೆ ನ್ಯಾಯಾಲಯವು ಈ ಹಿಂದೆ ಗಾಂಧಿಗೆ ನಿರ್ದೇಶನ ನೀಡಿತ್ತು ಆದರೆ ಅವರು ಹಾಜರಾಗಲಿಲ್ಲ. ಹೀಗಾಗಿ ಸಮನ್ಸ್ ಜಾರಿ ಮಾಡಲಾಗಿದೆ.

2018ರ ಆಗಸ್ಟ್ 4ರಂದು ಬಿಜೆಪಿ ನಾಯಕ ವಿಜಯ್ ಮಿಶ್ರಾ ಅವರು ರಾಹುಲ್ ಗಾಂಧಿ ಅವರು ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು.

ಇದನ್ನೂ ಓದಿ : Gautam Adani : ಎನ್​ಡಿಟಿವಿ ಆಯ್ತು; ಈಗ ಸುದ್ದಿ ಸಂಸ್ಥೆ ಐಎಎನ್​ಎಸ್​ ಅದಾನಿ ಪಾಲು

ಮಿಶ್ರಾ ಅವರ ವಕೀಲ ಸಂತೋಷ್ ಪಾಂಡೆ, ಸುಲ್ತಾನ್ಪುರದ ಎಂಪಿ-ಎಂಎಲ್ಎ ನ್ಯಾಯಾಲಯವು ಈ ಪ್ರಕರಣದಲ್ಲಿ ಡಿಸೆಂಬರ್ 16 ರಂದು ರಾಹುಲ್ ಗಾಂಧಿಗೆ ಸಮನ್ಸ್ ನೀಡಿತ್ತು. ಆದರೆ ಅವರು ಹಾಜರಾಗಲಿಲ್ಲ ಎಂದು ಹೇಳಿದ್ದಾರೆ. ನವೆಂಬರ್ 18 ರಂದು ನ್ಯಾಯಾಧೀಶ ಯೋಗೇಶ್ ಯಾದವ್ ಅವರು ವಾದಗಳ ನಂತರ ತೀರ್ಪನ್ನು ಕಾಯ್ದಿರಿಸಿದರು ಮತ್ತು ಮುಂದಿನ ವಿಚಾರಣೆಯನ್ನು ನವೆಂಬರ್ 27 ಕ್ಕೆ ಮುಂದೂಡಿದ್ದರು. ಡಿಸೆಂಬರ್ 16 ರಂದು ಹಾಜರಾಗುವಂತೆ ರಾಹುಲ್ ಗಾಂಧಿಗೆ ಸಮನ್ಸ್ ನೀಡಿದರು ಎಂದು ಪಾಂಡೆ ಹೇಳಿದರು. ಮಿಶ್ರಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಮತ್ತು ಹನುಮಾನ್​ಗಂಜ್​ ನಿವಾಸಿ.

ಲೋಕ ಸಭೆ ಚುನಾವಣೆ ಖರ್ಚಿಗೆ ಕಾಂಗ್ರೆಸ್​ನಿಂದ ಕ್ರೌಡ್ ಫಂಡಿಂಗ್

ಮುಂಬರುವ ಲೋಕಸಭಾ ಚುನಾವಣಾ ವೆಚ್ಚಕ್ಕಾಗಿ ಕ್ರೌಂಡ್ ಫಂಡಿಂಗ್​ ಮಾಡಲು ಕಾಂಗ್ರೆಸ್ ಪಕ್ಷ (Congress Party) ನಿರ್ಧರಿಸಿದೆ. ಡಿಸೆಂಬರ್ 18ರಂದು ‘ದೇಶಕ್ಕಾಗಿ ದೇಣಿಗೆ’ ಎಂಬ ಹೆಸರಲ್ಲಿ ಆನ್​ಲೈನ್​ ಕ್ರೌಡ್ ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸುವುದಾಗಿ ಕಾಂಗ್ರೆಸ್ ಶನಿವಾರ ಘೋಷಿಸಿದೆ. ಇದು 1920-21 ರಲ್ಲಿ ಮಹಾತ್ಮ ಗಾಂಧಿಯವರ ಐತಿಹಾಸಿಕ ‘ತಿಲಕ್ ಸ್ವರಾಜ್ ನಿಧಿ’ ಯಿಂದ ಸ್ಫೂರ್ತಿ ಪಡೆದುಕೊಂಡಿದೆ ಎಂಬುದಾಗಿಯೂ ಹೇಳಿದೆ. 138 ರೂ, 1380 ರೂ, 13,800 ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚು ದೇಣಿಗೆ ನೀಡಬಹುದು ಎಂದು ತಿಳಿಸಿದೆ. ಕಾಂಗ್ರೆಸ್​​ನ 138ನೇ ಸಂಸ್ಥಾಪನಾ ದಿನಾಚರಣೆ ಡಿಸೆಂಬರ್​ 18ರಂದು ನಡೆಯಲಿದ್ದು ಅಂದು ಅಭಿಯಾನಕ್ಕೆ ಚಾಲನೆ ಸಿಗಲಿದೆ ಹಾಗೂ ಮೊತ್ತವನ್ನು 138ರಿಂದ ಆರಂಭಗೊಳ್ಳುವಂತೆ ಮಾಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, “ಇಂದು ನಾವು ‘ದೇಶಕ್ಕಾಗಿ ದೇಣಿಗೆ ಎಂಬ ಆನ್​ಲೈನ್​ ಕ್ರೌಡ್ ಫಂಡಿಂಗ್ ಕಾರ್ಯಕ್ರಮವನ್ನು ಘೋಷಿಸುತ್ತಿದ್ದೇವೆ. ಈ ಯೋಜನೆಯು ಮಹಾತ್ಮ ಗಾಂಧಿಯವರ ಐತಿಹಾಸಿಕ “ತಿಲಕ್ ಸ್ವರಾಜ್ ನಿಧಿ” ಯಿಂದ 1920-21 ರಲ್ಲಿ ಸ್ಫೂರ್ತಿ ಪಡೆದಿದೆ. ಸಮಾನ ಸಂಪನ್ಮೂಲ ವಿತರಣೆ ಮೂಲಕ ಸಮೃದ್ಧವಾದ ಭಾರತವನ್ನು ರಚಿಸುವ ಯೋಜನೆಯೊಂದಿಗೆ ನಮ್ಮ ಪಕ್ಷವನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅವರು ಹೇಳಿದ್ದಾರೆ.

‘ಉತ್ತಮ ಭಾರತಕ್ಕಾಗಿ ದೇಣಿಗೆ’ ಎಂಬಯದಾಗಿ ಕ್ರೌಡ್ ಫಂಡಿಂಗ್​ನ ಉದ್ಘಾಟನಾ ಅಭಿಯಾನ ನಡೆಯಲಿದೆ. ಇದು ಭಾರತೀಯ ರಾಷ್ಟ್ರೀಯ ಕಾಂಗ್ರಸ್​​ನ 138 ವರ್ಷಗಳ ಪ್ರಯಾಣವನ್ನು ಸ್ಮರಿಸುತ್ತದೆ ನಮ್ಮ ಇತಿಹಾಸವನ್ನು ಸ್ವೀಕರಿಸಿ, ಉತ್ತಮ ಭಾರತಕ್ಕಾಗಿ ಪಕ್ಷದ ನಿರಂತರ ಬದ್ಧತೆಯನ್ನು ಸಂಕೇತಿಸುವ 138 ಅಥವಾ 1380 ಅಥವಾ 13,800 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ದಾನ ಮಾಡಲು ನಾವು ಬೆಂಬಲಿಗರನ್ನು ಕೋರುತ್ತೇವೆ ಎಂದು ವೇಣುಗೋಪಾಲ್ ಮಾಹಿತಿ ಹೇಳಿದ್ದಾರೆ.

Exit mobile version