Site icon Vistara News

Rahul Gandhi: ಲಾಲ್‌ ಚೌಕ್‌ನಲ್ಲಿ ಧ್ವಜಾರೋಹಣ ವೇಳೆ ರಾಷ್ಟ್ರಧ್ವಜಕ್ಕಿಂತ ರಾಹುಲ್‌ ಗಾಂಧಿ ಕಟೌಟ್‌ ಎತ್ತರ, ಟೀಕಿಸಿದ ಜನ

Rahul Gandhi's Bharat Jodo Yatra will conclude today at srinagar, Kashmir

ಶ್ರೀನಗರ: ಭಾರತ್‌ ಜೋಡೊ ಯಾತ್ರೆಯ ಕೊನೆಯ ಹಂತದಲ್ಲಿರುವ ರಾಹುಲ್‌ ಗಾಂಧಿ (Rahul Gandhi) ಅವರು ಭಾನುವಾರ ಶ್ರೀನಗರದ ಲಾಲ್‌ ಚೌಕ್‌ನಲ್ಲಿ ತಿರಂಗಾ ಹಾರಿಸಿದ್ದಾರೆ. ಇದೇ ವೇಳೆ ರಾಷ್ಟ್ರಧ್ವಜಕ್ಕಿಂತ ರಾಹುಲ್‌ ಗಾಂಧಿ ಕಟೌಟ್‌ ಎತ್ತರದಲ್ಲಿರುವುದು ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೊ ಈಗ ವೈರಲ್‌ ಆಗಿದ್ದು, ಜನ ರಾಹುಲ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧ್ವಜಾರೋಹಣದ ಸ್ತಂಭಕ್ಕಿಂತ ಎತ್ತರದಲ್ಲಿ ರಾಹುಲ್‌ ಗಾಂಧಿ ಅವರ ಕಟೌಟ್‌ ಎತ್ತರದಲ್ಲಿದೆ. ಈ ವಿಡಿಯೊ ವೈರಲ್‌ ಆಗುತ್ತಲೇ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ದೇಶದ ಧ್ವಜಕ್ಕಿಂತ ರಾಹುಲ್‌ ಗಾಂಧಿ ಮಿಗಿಲಾದರೇ’ ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, “ನರೇಂದ್ರ ಮೋದಿ ಸರ್ಕಾರವು 370ನೇ ವಿಧಿ ರದ್ದುಗೊಳಿಸಿದ ಕಾರಣಕ್ಕಾಗಿಯೇ ರಾಹುಲ್‌ ಗಾಂಧಿ ಲಾಲ್‌ ಚೌಕ್‌ನಲ್ಲಿ ತಿರಂಗಾ ಹಾರಿಸಲು ಸಾಧ್ಯವಾಗಿದೆ” ಎಂದು ಕುಟುಕಿದ್ದಾರೆ. “ಇದು ಕಾನೂನಿನ ಉಲ್ಲಂಘನೆ” ಎಂದೂ ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ರಾಹುಲ್‌ ಗಾಂಧಿ ಅವರು ಕೈಗೊಂಡ ಭಾರತ್‌ ಜೋಡೋ ಯಾತ್ರೆಯು ಸೋಮವಾರ (ಜನವರಿ 30) ಕಾಶ್ಮೀರದಲ್ಲಿ ಸಮಾರೋಪಗೊಳ್ಳಲಿದೆ. ಇದಕ್ಕೂ ಮೊದಲೇ ಅವರು ವಿವಾದಕ್ಕೆ ಗುರಿಯಾಗಿದ್ದಾರೆ.

ಇದನ್ನೂ ಓದಿ: Surgical Strike | ಸೇನೆ ಸಾಕ್ಷ್ಯ ಕೊಡಬೇಕಿಲ್ಲ, ಸ್ವಪಕ್ಷದ ದಿಗ್ವಿಜಯ್‌ ಸಿಂಗ್‌ಗೆ ರಾಹುಲ್‌ ಗಾಂಧಿ ತಿರುಗೇಟು

Exit mobile version