Site icon Vistara News

Sona Mohapatra: ಮೋದಿ ಟೀಕಿಸಲು ಐಶ್ವರ್ಯಾ ಹೆಸರು ಬಳಕೆ, ರಾಹುಲ್ ಗಾಂಧಿ ವಿರುದ್ಧ ಆಕ್ರೋಶ

Rahul Gandhi used Aishwarya Rai name to criticize Modi Says Sona Mohapatra

ಮುಂಬೈ : ಒಬಿಸಿಗೆ ಸಿಗಬೇಕಾದಷ್ಟು (OBC Politics) ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ ಎಂಬುದನ್ನು ಹೇಳುವುದಕ್ಕಾಗಿ ರಾಹುಲ್ ಗಾಂಧಿ (Rahul Gandhi) ಅವರು ಐಶ್ವರ್ಯ ರೈ ಬಚ್ಚನ್ (Aiswharya Rai) ಅವರ ಹೆಸರನ್ನು ಬಳಸಿಕೊಂಡಿದ್ದರು. ರಾಹುಲ್ ಅವರ ಈ ನಡವಳಿಕೆಗೆ ಖ್ಯಾತ ಹಾಡುಗಾರ್ತಿ ಸೋನಾ ಮೋಹಾಪಾತ್ರ (Sona Mohapatra) ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಮ ಮಂದಿರ ಉದ್ಘಾಟನೆಯ ವೇಳೆ ಯಾರಾದರೂ ಒಬಿಸಿಯವರಿದ್ದರೇ, ಅಲ್ಲಿದ್ದದ್ದು ಅಮಿತಾಭ್ ಬಚ್ಚನ್, ಐಶ್ವರ್ಯನಂಥವರು ಎಂದು ರಾಹುಲ್ ಗಾಂಧಿ ಹೇಳಿದ್ದರು.

ಸಮಾಜ, ಮಹಿಳೆಯರು, ಲೈಂಗಿಕತೆ, ರಾಜಕೀಯ ಮತ್ತು ಮನರಂಜನಾ ಉದ್ಯಮದ ಬಗ್ಗೆ ಆಗಾಗ್ಗೆ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಹಂಚಿಕೊಳ್ಳುವ ಸೋನಾ ಮೋಹಾಪಾತ್ರ ಅವರು ಬುಧವಾರ ಟ್ವೀಟ್ ಮಾಡಿ, ಸೆಕ್ಸಿಸ್ಟ್ ಆಗಿ ಲಾಭ ಪಡೆಯಲುರಾಜಕಾರಣಿಗಳು ತಮ್ಮ ಭಾಷಣಗಳಲ್ಲಿ ಮಹಿಳೆಯರನ್ನು ಕೀಳಾಗಿಸುವುದರಲ್ಲಿ ಏನಿದೆ? ಆತ್ಮೀಯ ರಾಹುಲ್ ಗಾಂಧಿ , ಖಚಿತವಾಗಿ ಯಾರಾದರೂ ನಿಮ್ಮ ಸ್ವಂತ ತಾಯಿ (ಸೋನಿಯಾ ಗಾಂಧಿ), ಸಹೋದರಿ (ಪ್ರಿಯಾಂಕಾ ಗಾಂಧಿ) ಅವರನ್ನು ಈ ಹಿಂದೆಯೂ ಇದೇ ರೀತಿ ಕೀಳಾಗಿ ನೋಡಿದ್ದಾರೆ ಮತ್ತು ಅದನ್ನು ಲೆಕ್ಕಿಸದೆ ನೀವು ಚೆನ್ನಾಗಿ ತಿಳಿದುಕೊಳ್ಳಬೇಕಲ್ಲವೇ? ಅಲ್ಲದೆ, ಐಶ್ವರ್ಯಾ ರೈ ಸುಂದರವಾಗಿ ನೃತ್ಯ ಮಾಡುತ್ತಾರೆ ಎಂದು ಬರೆದುಕೊಂಡಿದ್ದಾರೆ.

ಮೋದಿಯನ್ನು ಟೀಕಿಸಲು ಐಶ್ವರ್ಯಾ, ಅಮಿತಾಭ್ ಬಚ್ಚನ್​ ಎಳೆದು ತಂದ ರಾಹುಲ್ ಗಾಂಧಿ

ಕಳೆದ ತಿಂಗಳು ನಡೆದ ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ (rahul gandhi) ಭಾನುವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರನ್ನು ಹೆಸರಿಸಿಕೊಂಡು ಟೀಕೆ ಮಾಡಿದ್ದಾರೆ.

ತಮ್ಮ ಭಾರತ್ ಜೋಡೋ ನ್ಯಾಯ್ ಯಾತ್ರೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ ತಲುಪುತ್ತಿದ್ದಂತೆ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶವನ್ನು ನಡೆಸುವ ಜನರನ್ನೇ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಿಂದ ದೂರವಿಡಲಾಗಿದೆ. ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಹಾಜರಿದ್ದರು ಎಂದು ಟೀಕಿಸಿದರು.

ಈ ಭವ್ಯ ಕಾರ್ಯಕ್ರಮಕ್ಕೆ ಯಾವುದೇ ಒಬಿಸಿ ಅಥವಾ ಎಸ್ಟಿ / ಎಸ್ಸಿ ಮುಖಗಳನ್ನು ಆಹ್ವಾನಿಸಲಾಗಿಲ್ಲ ಎಂಬುದಾಗಿ ಹೇಳಲು ಅವರು ಬಚ್ಚನ್​ ಕುಟುಬದ ಉದಾಹರಣೆ ತೆಗೆದುಕೊಂಡರು.

“ನೀವು ‘ರಾಮ ಮಂದಿರ ಪ್ರಾಣ ಪ್ರತಿಷ್ಠಾನ’ವನ್ನು ನೋಡಿದ್ದೀರಾ? ನೀವು ಯಾವುದೇ ಒಬಿಸಿ ಅಥವಾ ಎಸ್ಟಿ / ಎಸ್ಸಿ ಮುಖಗಳನ್ನು ನೋಡಿದ್ದೀರಾ? ಇದರಲ್ಲಿ ಅಮಿತಾಬ್ ಬಚ್ಚನ್, ಐಶ್ವರ್ಯಾ ಬಚ್ಚನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಆದರೆ ದೇಶವನ್ನು ನಿಜವಾಗಿಯೂ ನಡೆಸುವ ಜನರನ್ನು ನಾವು ನೋಡಲಿಲ್ಲ. ನಿಮಗೆ ಎಂದಿಗೂ ದೇಶವನ್ನು ನಿಯಂತ್ರಿಸಲು ಸಾಮರ್ಥ್ಯವಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ಜನರು ಬಯಸುತ್ತಾರೆ” ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರು ರಾಮ ಮಂದಿರ ಪ್ರತಿಷ್ಠಾಪನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದರಲ್ಲಿ ಸಾವಿರಾರು ಸೆಲೆಬ್ರಿಟಿಗಳು, ರಾಜಕಾರಣಿಗಳು ಮತ್ತು ಇತರ ಗಣ್ಯರು ಭಾಗವಹಿಸಿದ್ದರು. ಆದರೆ, ಪ್ರತಿಪಕ್ಷಗಳು ಈ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದವು.

ಈ ಸುದ್ದಿಯನ್ನೂ ಓದಿ :Rahul Gandhi: ನ್ಯಾಯ ಯಾತ್ರೆಗೆ ದಿಢೀರ್‌ ವಿರಾಮ ನೀಡಿದ ರಾಹುಲ್‌ ಗಾಂಧಿ; ಏಕೆ?

Exit mobile version