ಹೈದರಾಬಾದ್: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ (Bharat Jodo Yatra) ಕೈಗೊಳ್ಳುತ್ತಿರುವ ರಾಹುಲ್ ಗಾಂಧಿ (Rahul Gandhi) ಅವರು ಪಾದಯಾತ್ರೆ ವೇಳೆ ಅಲ್ಲಿನ ಜನರೊಡನೆ ಬೆರೆಯುತ್ತಿದ್ದಾರೆ. ಅಲ್ಲಿನ ಸಾಂಪ್ರದಾಯಿಕ ಚಟುವಟಿಕೆ, ಆಚರಣೆಗಳ ಭಾಗವಾಗುತ್ತಿದ್ದಾರೆ. ಸದ್ಯ, ತೆಲಂಗಾಣದಲ್ಲಿ ಯಾತ್ರೆ ಕೈಗೊಳ್ಳುತ್ತಿರುವ ರಾಹುಲ್, ಅಲ್ಲಿನ ಸಾಂಪ್ರದಾಯಿಕ ಪೋತರಾಜು ಅವತಾರ ತಾಳಿ, ಚಾಟಿ ಏಟು ಬಾರಿಸಿಕೊಂಡಿದ್ದಾರೆ. ಈ ಕುರಿತ ವಿಡಿಯೊ ಈಗ ವೈರಲ್ (Viral Video) ಆಗಿದೆ.
ಭಾರತ್ ಜೋಡೋ ಯಾತ್ರೆಯು 57ನೇ ದಿನಕ್ಕೆ ಕಾಲಿಟ್ಟಿದ್ದು, ತೆಲಂಗಾಣದಲ್ಲಿ ಜನಬೆಂಬಲ ವ್ಯಕ್ತವಾಗುತ್ತಿದೆ. ಇದರ ಭಾಗವಾಗಿಯೇ ರಾಹುಲ್ ಗಾಂಧಿ ಅವರು ಸಾಂಪ್ರದಾಯಿಕ ಬೊನಾಲು ಹಬ್ಬದಲ್ಲಿ (Bonalu Festival) ಪಾಲ್ಗೊಂಡಿದ್ದಾರೆ. ಹಾಗೆಯೇ, ಪೋತರಾಜು ಅವರಂತೆ ತಮಗೆ ತಾವೇ ಚಾಟಿ ಏಟು ಬೀಸಿಕೊಂಡಿದ್ದಾರೆ. ಬುಧವಾರವೂ (ನ.2) ರಾಹುಲ್ ಗಾಂಧಿ ರಸ್ತೆ ಮೇಲೆಯೇ ಮಕ್ಕಳ ಜತೆ ಕ್ರಿಕೆಟ್ ಆಡಿದ್ದರು.
ಇದನ್ನೂ ಓದಿ | ಭಾರತ್ ಜೋಡೋ ಯಾತ್ರೆಯಲ್ಲಿ ನಟಿ ಪೂನಮ್ ಕೈ ಹಿಡಿದು ಸಾಗಿದ ರಾಹುಲ್ ಗಾಂಧಿ; ವ್ಯಂಗ್ಯ ಮಾಡಿದ ಪ್ರೀತಿ ಗಾಂಧಿ ಟ್ರೋಲ್