Site icon Vistara News

Rahul Gandhi: ಅಮೇಠಿಯಿಂದ ರಾಹುಲ್ ಸ್ಪರ್ಧೆ, ಮೋದಿ ಕ್ಷೇತ್ರಕ್ಕೆ ಪ್ರಿಯಾಂಕಾ? ಯುಪಿ ಕಾಂಗ್ರೆಸ್‌ನ ಹೊಸ ಮುಖ್ಯಸ್ಥ ಹೇಳೋದೇನು?

Priyanka Gandhi Rahul Gandhi

ನವದೆಹಲಿ: ಕಾಂಗ್ರೆಸ್ ನಾಯಕ ಅಜಯ್ ರಾಯ್ (Congress Leader Ajay Rai) ಅವರು ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ (UP congress committee President) ಅಧ್ಯಕ್ಷರಾದ ಮಾರನೇ ದಿನವೇ ಬೋಲ್ಡ್ ಹೇಳಿಕೆಯನ್ನು ನೀಡಿದ್ದು, ಮುಂಬರುವ ಲೋಕಸಭೆ ಚುನಾವಣೆ (Lok Sabha election) ವೇಳೆ ರಾಹುಲ್ ಗಾಂಧಿ (Rahul Gandhi) ಅವರು ಅಮೇಠಿ ಕ್ಷೇತ್ರದಿಂದ (Amethi Constituency) ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ, ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra)ಅವರು ಉತ್ತರ ಪ್ರದೇಶದಲ್ಲಿ ಇವರು ಇಚ್ಛಿಸಿದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಬಹುದು ಎಂದು ಹೇಳುವ ಮೂಲಕ ಪ್ರಿಯಾಂಕಾ ಸ್ಪರ್ಧೆಯನ್ನು ಖಚಿತಪಡಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಾಸಿ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರೆ, ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಅವರ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಲಿದ್ದಾರೆ ಎಂದು ಅಜರ್ ರಾಯ್ ಹೇಳಿದರು. ಇದೇ ವೇಳೆ ಸ್ಮೃತಿ ಇರಾನಿ ಅವರ ಬಗ್ಗೆ ಮಾತನಾಡಿದ ರೈ, ಸ್ಮೃತಿ ಇರಾನಿ ಅವರು ಕಳೆದ ಚುನಾವಣೆ ವೇಳೆ, ಸಕ್ಕರೆ ಪ್ರತಿ ಕೆಜಿಗೆ 13 ರೂ.ಗೆ ಸಿಗುವಂತೆ ಮಾಡುವೆ ಎಂದು ಹೇಳಿದ್ದರು. ಸಿಗುತ್ತಿದೆಯೇ? ಆ ಸಕ್ಕರೆ ಎಲ್ಲಿ ಹೋಯಿತು ಎಂದು ಸ್ಮೃತಿ ಇರಾನಿ ಅವರು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಹೇಳಿದರು.

2019 ರಲ್ಲಿ ಪ್ರಿಯಾಂಕಾ ಗಾಂಧಿ ಅವರು ವಾರಾಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಬಹುದು ಎಂಬ ಊಹಾಪೋಹಗಳು ಹರಡಿಕೊಂಡಾಗ, ಕೊನೆಯ ಕ್ಷಣದಲ್ಲಿ ಅಜಯ್ ರಾಯ್ ಅವರನ್ನು ವಾರಣಾಸಿಯಿಂದ ಕಣಕ್ಕೆ ಇಳಿಸಲಾಯಿತು. 2014ರಲ್ಲೂ ಅಜಯ್ ರಾಯ್ ವಾರಣಾಸಿಯಿಂದ ಸ್ಪರ್ಧಿಸಿ ನರೇಂದ್ರ ಮೋದಿ ವಿರುದ್ಧ ಸೋತಿದ್ದರು. 2024ರ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು, ಬ್ರಿಜ್ಲಾಲ್ ಖಾಬ್ರಿ ಬದಲಿಗೆ ಅಜಯ್ ರಾಯ್ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ: Rahul Gandhi: ಬೆಲೆ ಏರಿಕೆಯಿಂದಾಗಿ ಕಣ್ಣೀರು ಹಾಕಿದ್ದ ವ್ಯಕ್ತಿ ಜತೆ ರಾಹುಲ್ ಗಾಂಧಿ ಲಂಚ್!

ರಾಹುಲ್ ಗಾಂಧಿಗೆ ಅಮೇಠಿನಾ, ವಯನಾಡಾ?

2019ರಲ್ಲಿ ರಾಹುಲ್ ಗಾಂಧಿ ಅವರು ಕೇರಳದ ವಯನಾಡ ಮತ್ತು ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಮೇಠಿ ಕ್ಷೇತ್ರವೂ ಹಿಂದಿನಿಂದಲೂ ಗಾಂಧಿ ಮನೆತನವು ಪ್ರಾಬಲ್ಯ ಹೊಂದಿದೆ. ವಯನಾಡಿನಲ್ಲೇ ಇದೇ ಮೊದಲ ಬಾರಿಗೆ ಗಾಂಧಿ ಮನೆತನದ ವ್ಯಕ್ತಿಯೊಬ್ಬರು ಸ್ಪರ್ಧಿಸಿ ಗೆದ್ದಿದ್ದಾರೆ. 2019ರ ಲೋಕಸಭೆ ಚುನಾವಣೆ ವೇಳೆ, ಅಮೇಠಿ ಕ್ಷೇತ್ರದಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಅವರು ಸೋಲು ಅನುಭವಿಸಿದ್ದರು. ಇತ್ತ ವಯನಾಡ ಕ್ಷೇತ್ರದಲ್ಲಿ ಗೆದ್ದಿದ್ದರು. 2024ರ ಲೋಕಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆಯೋ ಎಂಬುದರ ಇನ್ನೂ ಖಚಿತವಾಗಿಲ್ಲ.

Exit mobile version