Site icon Vistara News

Rahul Gandhi: ರಾಹುಲ್‌ ಗಾಂಧಿ ಯಾವ್ಯಾವ ಕಂಪನಿಗಳ ಶೇರು ಖರೀದಿಸಿದ್ದಾರೆ ನೋಡಿ!

Rahul Gandhi

Rahul Gandhi's portfolio; Maximum investment in Pidilite

ದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಕೇರಳದ ವಯನಾಡ್ ಕ್ಷೇತ್ರದಿಂದ ಮರುಚುನಾವಣೆ ಬಯಸಿ ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಾವು ಹೂಡಿಕೆ ಮಾಡಿರುವ ಸ್ಟಾಕ್‌ಗಳ ವಿವರಗಳನ್ನೂ ಸಲ್ಲಿಸಿದ್ದಾರೆ. ಅಫಿಡವಿಟ್‌ನ ಪ್ರಕಾರ ರೂ. 4.3 ಕೋಟಿ ಮೌಲ್ಯದ ಷೇರು ಮಾರುಕಟ್ಟೆ ಹೂಡಿಕೆ ಮತ್ತು ರೂ. 3.81 ಕೋಟಿ ಮೌಲ್ಯದ ಮ್ಯೂಚುವಲ್ ಫಂಡ್‌ಗಳನ್ನು ಹೊಂದಿದ್ದಾರೆ. ಒಟ್ಟು 25 ಕಂಪನಿಗಳ ಷೇರುಗಳನ್ನು ಖರೀದಿ ಮಾಡಿದ್ದು, ಸರ್ಕಾರಿ ಸ್ವಾಮ್ಯದ ಯಾವ ಕಂಪನಿಗಳ ಮೇಲೂ ಹೂಡಿಕೆ ಮಾಡಿಲ್ಲ.

ವಯನಾಡ್ ಸೇರಿದಂತೆ ಕೇರಳದ 20 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದೆ. ರಾಹುಲ್ ಗಾಂಧಿ ಅವರು 2019 ರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸಿದ್ದರು. ನಾಮಪತ್ರಗಳ ಜೊತೆಗೆ ಸಲ್ಲಿಸಲಾದ ಅಫಿಡವಿಟ್‌ಗಳು ಅಭ್ಯರ್ಥಿಯ ಆಸ್ತಿ, ಭೂಮಿ ಮತ್ತು ಬಾಕಿ ಇರುವ ಪ್ರಕರಣಗಳ ಬಗ್ಗೆ ವೈಯಕ್ತಿಕ ವಿವರಗಳನ್ನು ಒಳಗೊಂಡಿರುತ್ತವೆ.

ರಾಹುಲ್ ಗಾಂಧಿಯವರ ಸಾವರಿನ್ ಚಿನ್ನದ ಬಾಂಡ್‌ಗಳು

ರಾಹುಲ್ ಗಾಂಧಿಯವರು ಮಾರ್ಚ್ 15, 2024 ರಂತೆ 15.21 ಲಕ್ಷ ರೂ. ಮಾರುಕಟ್ಟೆ ಮೌಲ್ಯದ ಸಾವರಿನ್ ಚಿನ್ನದ ಬಾಂಡ್‌ಗಳನ್ನು ಹೊಂದಿದ್ದಾರೆ, ಇದು ಅವರ ಒಟ್ಟಾರೆ ಆಸ್ತಿಯ ಭಾಗವಾದ ರೂ.20.4 ಕೋಟಿ ಮೌಲ್ಯದ ರೂ.9.24 ಕೋಟಿ ಚರ ಮತ್ತು ರೂ.11.5 ಕೋಟಿ ಸ್ಥಿರ ಆಸ್ತಿಗಳನ್ನು ಒಳಗೊಂಡಿದೆ.

ರಾಹುಲ್ ಗಾಂಧಿ ಹೂಡಿಕೆ ಮಾಡಿರುವ ಷೇರುಗಳ ಪಟ್ಟಿ:

ಮಾರ್ಚ್‌ 15ರ ವೇಳೆಗೆ ವಯನಾಡ್‌ ಸಂಸದ ರಾಹುಲ್‌ ಗಾಂಧಿ ಒಟ್ಟು 25 ಕಂಪನಿಗಳ ಷೇರುಗಳನ್ನು ಹೊಂದಿದ್ದಾರೆ. ಇದರ ಒಟ್ಟಾರೆ ಮೌಲ್ಯ 4 ಕೋಟಿ ರೂ. ಆಗಿದೆ. ರಾಹುಲ್‌ ಗಾಂಧಿಯ ಒಟ್ಟಾರೆ ಆದಾಯದಲ್ಲಿ ಶೇ. 88 ರಷ್ಟು ಆದಾಯ ಮ್ಯೂಚುವಲ್‌ ಫಂಡ್‌ ಹಾಗೂ 25 ಸ್ಟಾಕ್‌ಗಳಿಂದಲೇ ಬರುತ್ತಿದೆ.

ಇದನ್ನೂ ಓದಿ:Viral News: 4 ಲಕ್ಷ ರೂ. ಆದಾಯದ ವಧುವಿಗೆ 1 ಕೋಟಿ ರೂ. ಆದಾಯದ ವರ ಬೇಕಂತೆ! ವೈರಲ್ ಆಯ್ತು ವಾಟ್ಸಾಪ್ ಸಂದೇಶ!

ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳ ಸ್ಟಾಕ್‌ಗಳು ಏರಿಕೆ ಆಗುತ್ತಿದೆ. ಆದರೆ, ರಾಹುಲ್‌ ಗಾಂಧಿ ಯಾವುದೇ ಪ್ರಮುಖ ಪಿಎಸ್‌ಯು ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡಿಲ್ಲ. ರಾಹುಲ್‌ ಗಾಂಧಿಯ ಗರಿಷ್ಠ ಹೂಡಿಕೆ ಪಿಡಿಲೈಟ್‌ ಇಂಡಸ್ಟ್ರೀಸ್‌ ಮೇಲೆ ಮಾಡಿದ್ದಾರೆ. ಫೆವಿಕಾಲ್‌, ಮಿ.ಫಿಕ್ಸಿಟ್‌ನಂಥ ಅಂಟು ಉತ್ಪಾದಿಸುವ ಪ್ರಮುಖ ಕಂಪನಿಯಾದ ಪಿಡಿಲೈಟ್‌ನ 1474 ಷೇರುಗಳನ್ನು ರಾಹುಲ್‌ ಗಾಂಧಿ ಹೊಂದಿದ್ದು, ಇದರ ಮೌಲ್ಯ 42.27 ಲಕ್ಷ ರೂಪಾಯಿ ಆಗಿದೆ.

Exit mobile version